ಬರುವ ಸಂಬಳ ಕೊಟ್ಟು ಮಾದರಿಯಾದ NWKRTC ಕಂಡಕ್ಟರ್..!

Published : Apr 21, 2020, 06:45 PM IST
ಬರುವ  ಸಂಬಳ ಕೊಟ್ಟು ಮಾದರಿಯಾದ NWKRTC ಕಂಡಕ್ಟರ್..!

ಸಾರಾಂಶ

ಬಸ್​ ಕಂಡಕ್ಟರ್​​ವೊಬ್ಬರು ತಮಗೆ ಬರುವ ಒಂದು ತಿಂಗಳು ಸಂಬಳವನ್ನು ನೀಡಿ ಕೊರೋನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿ, ಎಲ್ಲರಿಗೂ ಮಾದರಿಯಾಗಿದ್ದಾರೆ.

ಧಾರವಾಡ, (ಏ.21): ಕೊರೋನಾ ಪರಿಹಾರ ನಿಧಿಗೆ ಬಸ್​ ಕಂಡಕ್ಟರ್​​ವೊಬ್ಬರು ದೇಣಿಗೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ಒಂದನೇ ಘಟಕದಲ್ಲಿ ನಿರ್ವಾಹಕರಾಗಿರುವ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಬಸವರಾಜ ನೀಲಪ್ಪ ಗಾಣಿಗೇರ ಅವರು ನೆರವು ನೀಡಿ ಮಾದರಿಯಾಗಿದ್ದಾರೆ. 

ಟಿಕೆಟ್-ಟಿಕೆಟ್ ಎನ್ನುತ್ತಲೇ ಉಚಿತ ಮಾಸ್ಕ್ ವಿತರಿಸಿದ KSRTC ಕಂಡಕ್ಟರ್

ತಮ್ಮ ಒಂದು ತಿಂಗಳ ವೇತನದ ಮೊತ್ತ 25 ಸಾವಿರ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದು, ಜಿಲ್ಲಾಧಿಕಾರಿಗಳಿಗೆ ಚೆಕ್​ ಹಸ್ತಾಂತರಿಸಿದ್ದಾರೆ.

ಚೆಕ್ ಸ್ವೀಕರಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು, ಈ ಸಂಕಷ್ಟದ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಕಂಡಕ್ಟರ್ ಒಬ್ಬರು ಸ್ವಯಂಪ್ರೇರಣೆಯಿಂದ ತಮ್ಮ ಒಂದು ತಿಂಗಳ ವೇತನವನ್ನು ನೀಡಿರುವುದು ಸಮಾಜಕ್ಕೆ ಮಾದರಿಯಾದ ಕಾರ್ಯವಾಗಿದೆ. ಜಿಲ್ಲಾಡಳಿತ ಈ ಕಾರ್ಯವನ್ನು ಪ್ರಶಂಸೆ ಮಾಡುತ್ತದೆ ಎಂದರು.

ಈ ವೇಳೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಕರಾದ ವಿವೇಕಾನಂದ ವಿಶ್ವಜ್ಞ, ಹನುಮಂತ ಬೋಜೇದಾರ್,ಬಸವರಾಜ ಅವಾರಿ,ಎಂ.ಎಸ್‌.ರೋಣದ,ವೆಂಕಟೇಶ ಹರ್ತಿ,ಡಾ.ಪಿ.ವಿ.ಸವದಿ ಮತ್ತಿತರರು ಇದ್ದರು.

PREV
click me!

Recommended Stories

ಹೋರಾಟದಲ್ಲೇ ಉರುಳಿದ 2025ರ ವರ್ಷ, ಬಿಡದಿ ಟೌನ್ ಶಿಪ್ ಯೋಜನೆ ರಾಮನಗರ ಬೆಂಗಳೂರು ದಕ್ಷಿಣವಾಗಿ ಬದಲಾಗಿದ್ದೆ ಸಾಧನೆ!
ಹೊಸ ವರ್ಷದ ಕಿಕ್‌ನಲ್ಲಿ ಡ್ರಿಂಕ್ ಆಂಡ್ ಡ್ರೈವ್ ಮಾಡಿದ್ರೆ ಅಷ್ಟೇ.. ಬೆಂಗಳೂರಿನ 50 ಫ್ಲೈ ಓವರ್‌ಗಳು ಬಂದ್; ರಸ್ತೆಗಿಳಿಯುವ ಮುನ್ನ ತಿಳಿಯಿರಿ