ಕೊಪ್ಪಳ: ಈ ಗ್ರಾಮದತ್ತ ಕಾಲಿಡದ ಕೊರೋನಾ..!

By Kannadaprabha News  |  First Published Jun 11, 2021, 1:32 PM IST

* ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ರ‍್ಯಾವಣಕಿ ಗ್ರಾಮ
* ಬಹುಜಾಗ್ರತೆಯಿಂದ ವ್ಯವಹರಿಸುವ ಜನ
* ಅಕ್ಕಪಕ್ಕದ ಗ್ರಾಮಗಳಲ್ಲಿ ಸೋಂಕಿದ್ದರೂ ಈ ಗ್ರಾಮಕ್ಕೆ ಕಾಲಿಟ್ಟಿಲ್ಲ
 


ಪರಶಿವಮೂರ್ತಿ ಮಾಟಲದಿನ್ನಿ

ಕೊಪ್ಪಳ(ಜೂ.11): ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಸಮೀಪದ ಶಿರಗುಂಪಿ ಗ್ರಾಪಂ ವ್ಯಾಪ್ತಿಯ ರ‍್ಯಾವಣಕಿ ಗ್ರಾಮದಲ್ಲಿ 130 ಮನೆಗಳು, 970ಕ್ಕೂ ಅಧಿಕ ಜನಸಂಖ್ಯೆ ಇದ್ದರೂ ಈ ವರೆಗೆ ಕೊರೋನಾ ಸುಳಿದಿಲ್ಲ. ಗ್ರಾಮಸ್ಥರು ಯಾವ ಭಯವಿಲ್ಲದೆ ನಿಶ್ಚಿಂತೆಯಿಂದ ಜೀವನ ನಡೆಸುತ್ತಿದ್ದಾರೆ!

Latest Videos

undefined

ಎಲ್ಲೆಡೆ ಕೊರೋನಾ 2ನೇ ಅಲೆ ವ್ಯಾಪಿಸಿದೆ. ಆದರೆ ಈ ಕ್ಕೆ ಕಾಲಿಟ್ಟಿಲ್ಲ. ಕಾರಣ ಇಲ್ಲಿಯ ಜನರು ಬಹುಜಾಗ್ರತೆಯಿಂದ ವ್ಯವಹರಿಸುತ್ತಾರೆ. ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಸುವುದು ಕಡ್ಡಾಯವಾಗಿ ಮಾಡುತ್ತಾರೆ. ಬಹುತೇಕರು ಕೃಷಿ ಕಾರ್ಯದಲ್ಲಿ ನಿರತರಾಗಿರುವುದರಿಂದ ಯಾರೂ ಈ ಸೋಂಕಿನ ಸುಳಿಗೆ ಸಿಲುಕಿಲ್ಲ. ಕಳೆದ ವರ್ಷವೂ ಈ ಗ್ರಾಮದಲ್ಲಿ ಸೋಂಕು ಕಾಣಿಸಿಕೊಂಡಿರಲಿಲ್ಲ.

ಇಲ್ಲಿಯ ಗ್ರಾಮಸ್ಥರು ಪ್ರತಿನಿತ್ಯ ಸಂತೆ, ಮಾರುಕಟ್ಟೆಗೆ ಕುಷ್ಟಗಿ, ಇಲಕಲ್‌, ದೋಟಿಹಾಳ ಇನ್ನಿತರ ಪ್ರದೇಶಕ್ಕೆ ಹೋಗಿಬರುತ್ತಾರೆ. ರ‍್ಯಾವಣಕಿ ಗ್ರಾಮದ ಬಹುತೇಕ ಯುವಕರು ವಾಹನ ಚಾಲಕರಾಗಿ ಕೆಲಸ ಮಾಡುತ್ತಾರೆ. ಆದರೆ ಎಲ್ಲ ಸುರಕ್ಷತಾ ನಿಯಮ ಪಾಲಿಸುವ ಜತೆಗೆ ಗ್ರಾಮಕ್ಕೆ ಬರುವಾಗ ಸ್ಯಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಎಚ್ಚರಿಕೆಯಿಂದ ವ್ಯವಹರಿಸುತ್ತಿದ್ದಾರೆ.

ಕೊಪ್ಪಳದ ಗವಿಮಠ ಕೋವಿಡ್‌ ಆಸ್ಪತ್ರೆಗೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ

ಎರಡು ತಿಂಗಳ ಹಿಂದೆ ಈ ಗ್ರಾಮದಲ್ಲಿ ಚಿಕೂನ್‌ಗುನ್ಯಾ ವ್ಯಾಪಕವಾಗಿ ಹರಡಿತ್ತು. ಆಗ ಎಲ್ಲರಿಗೂ ಆರೋಗ್ಯ ಪರೀಕ್ಷೆ ಮಾಡಿಸಲಾಗಿತ್ತು. ಆದರೆ ಯಾರಿಗೂ ಕೊರೋನಾ ಪಾಸಿಟಿವ್‌ ಕಂಡುಬಂದಿಲ್ಲ.

ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 24 ಹಳ್ಳಿಗಳು ಬರುತ್ತವೆ. ಇದರಲ್ಲಿ ಶಿರಗುಂಪಿ ಗ್ರಾಪಂ ವ್ಯಾಪ್ತಿಯ ರ‍್ಯಾವಣಕಿ ಗ್ರಾಮದಲ್ಲಿ ಮಾತ್ರ ಇದುವರೆಗೂ ಒಂದೇ ಒಂದು ಕೊರೋನಾ ಪ್ರಕರಣ ಕಂಡುಬಂದಿಲ್ಲ. ಇತ್ತೀಚೆಗೆ ಆ ಗ್ರಾಮದಲ್ಲಿ ಚಿಕೂನ್‌ಗುನ್ಯಾ ಹರಡಿತ್ತು. ಜ್ವರ, ಕೆಮ್ಮು, ನೆಗಡಿ ಇರುವವರಿಗೆ ಕೊರೋನಾ ಟೆಸ್ಟ್‌ ಮಾಡಿಸಲಾಯಿತು. ಆ ಸಮಯದಲ್ಲಿಯೂ ಕೊರೋನಾ ಪಾಸಿಟಿವ್‌ ಪ್ರಕರಣ ಕಂಡುಬಂದಿಲ್ಲ ಎಂದು ದೋಟಿಹಾಳ ವೈದ್ಯಾಧಿಕಾರಿ ಡಾ. ನೇತ್ರಾವತಿ ಬಿಕೆ ತಿಳಿಸಿದ್ದಾರೆ.  
 

click me!