ಶಿರಾಡಿಯಲ್ಲಿ ಲಘು ವಾಹನಗಳಗೆ ಅವಕಾಶ

By Kannadaprabha NewsFirst Published Aug 17, 2021, 6:57 AM IST
Highlights
  • ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಲಘು ವಾಹನಗಳನ್ನು ಹೊರತುಪಡಿಸಿ ಭಾರಿ ವಾಹನಗಳನ್ನು ಸಂಪೂರ್ಣವಾಗಿ ನಿರ್ಬಂಧ
  • ಶಿರಾಡಿ ಘಾಟ್ ದುರಸ್ಥಿ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ

ಹಾಸನ (ಆ.17): ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ರಸ್ತೆಯ ಮಾರನಹಳ್ಳಿಯಿಂದ ದೋಣಿಗಾಲ್‌ವರೆಗಿನ ರಸ್ತೆಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಲಘು ವಾಹನಗಳನ್ನು ಹೊರತುಪಡಿಸಿ ಭಾರಿ ವಾಹನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಆರ್‌.ಗಿರೀಶ್‌ ಆದೇಶ ಹೊರಡಿಸಿದ್ದಾರೆ.

 ಕಾರುಗಳು, ಜೀಪಪ್‌, ಟೆಂಪೋ, ಎಲ್‌.ಸಿ.ವಿ(ಮಿನಿ ವ್ಯಾನ್‌) ಹಾಗೂ ದ್ವಿಚಕ್ರ ವಾಹನಗಳು, ಆಂಬ್ಯುಲೆನ್ಸ್‌, ಸಾರ್ವಜನಿಕರು ಸಂಚರಿಸುವ ಬಸ್‌ಗಳು, ರಾಜಹಂಸ, ಐರಾವತ, 20 ಟನ್‌ ಸಾಮರ್ಥ್ಯವರೆಗಿನ ಸರಕು ವಾಹನಗಳು ಹಾಗೂ 6 ಚಕ್ರದ ವಾಹನಗಳು ಸಂಚರಿಸಬಹುದಾಗಿದೆ.

ಶಿರಾಡಿ, ಚಾರ್ಮಾಡಿ ಘಾಟ್‌ ದುರಸ್ತಿಗೆ ಕೇಂದ್ರಕ್ಕೆ ಸಂಸದ ನಳಿನ್‌ ಮನವಿ

ಬಾರಿ ಮಳೆಯಾದ ಹಿನ್ನೆಲೆಯಲ್ಲಿ ಘಾಟ್‌ನಲ್ಲಿ ರಸ್ತೆ ದುರಸ್ಥಿಯಾಗಿದ್ದು ಈ ನಿಟ್ಟಿನಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

click me!