ಟೀಕೆಗಳಿಗೆ ಹೆದರುವ ಅಗತ್ಯವಿಲ್ಲ: ಸಚಿವ ಎನ್.ಚಲುವರಾಯಸ್ವಾಮಿ

ಟೀಕೆಗಳಿಗೆಲ್ಲಾ ಹೆದರುವ ಅಗತ್ಯವಿಲ್ಲ. ತಪ್ಪು ಮಾಡಿದ್ದರೆ ಹೆದರಬೇಕಿತ್ತು. ಪಾರದರ್ಶಕವಾಗಿ ಲೆಕ್ಕ-ಪತ್ರ ಮಂಡಿಸಲಾಗಿದೆ. ಸರ್ಕಾರದ ನಿಯಮಾನುಸಾರವಾಗಿಯೇ ಪ್ರಕ್ರಿಯೆಗಳನ್ನು ನಡೆಸಬೇಕು. ಸಾರ್ವಜನಿಕರ ಹಣ ಖರ್ಚು ಮಾಡುವಾಗ ಜವಾಬ್ದಾರಿಯುತವಾಗಿರಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. 

No Need to be afraid of Criticism Says Minister N Chaluvarayaswamy gvd

ಮಂಡ್ಯ (ಏ.06): ಟೀಕೆಗಳಿಗೆಲ್ಲಾ ಹೆದರುವ ಅಗತ್ಯವಿಲ್ಲ. ತಪ್ಪು ಮಾಡಿದ್ದರೆ ಹೆದರಬೇಕಿತ್ತು. ಪಾರದರ್ಶಕವಾಗಿ ಲೆಕ್ಕ-ಪತ್ರ ಮಂಡಿಸಲಾಗಿದೆ. ಸರ್ಕಾರದ ನಿಯಮಾನುಸಾರವಾಗಿಯೇ ಪ್ರಕ್ರಿಯೆಗಳನ್ನು ನಡೆಸಬೇಕು. ಸಾರ್ವಜನಿಕರ ಹಣ ಖರ್ಚು ಮಾಡುವಾಗ ಜವಾಬ್ದಾರಿಯುತವಾಗಿರಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಸಮ್ಮೇಳನ ಅಭೂತಪೂರ್ವವಾಗಿ ಯಶಸ್ಸು ಕಂಡಿದೆ. 

ಎಲ್ಲೆಡೆಯಿಂದ ಸಮ್ಮೇಳನಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಚರಿತ್ರಾರ್ಹ ಸಮ್ಮೇಳನವೆಂಬ ಖ್ಯಾತಿ ಗಳಿಸಿದೆ. ಎಲ್ಲರೂ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಕೆಲವರು ಸಮ್ಮೇಳನದ ಯಶಸ್ಸನ್ನು ಕಂಡು ಹೆಮ್ಮೆಪಡುವ ಬದಲು ದುರುದ್ದೇಶಪೂರ್ವಕವಾಗಿ ಟೀಕೆ ಮಾಡುತ್ತಾರೆ. ಅವರಿಗೂ ಧನ್ಯವಾದಗಳು ಎಂದರು. ಉಳಿಕೆ ಹಣ ೨.೫೩ ಕೋಟಿ ರು. ಹಣದ ಜೊತೆಗೆ ೨ ಕೋಟಿ ರು. ಸೇರಿಸಿ ಕನ್ನಡ ಭವನವನ್ನು ನಿರ್ಮಾಣ ಮಾಡಲಾಗುವುದು. ಭವನ ನಿರ್ಮಾಣಕ್ಕೆ ಈಗಾಗಲೇ ಚಿಕ್ಕಮಂಡ್ಯದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಆದಷ್ಟು ಬೇಗ ಸ್ಥಳ ಅಂತಿಮಗೊಳಿಸುವುದು ಎಂದರು.

Latest Videos

ಮಹೇಶ್ ಜೋಶಿ ಲೆಕ್ಕ ಬಾಕಿ: ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ೨.೫೦ ಕೋಟಿ ರು.ಗೆ ಲೆಕ್ಕ ಕೊಡುವುದು ಬಾಕಿ ಇದೆ. ಅದನ್ನು ಆದಷ್ಟು ಬೇಗ ತರಿಸಿಕೊಳ್ಳಲಾಗುವುದು. ಇಂದಿನ ಗೋಷ್ಠಿಗೆ ಅವರನ್ನೂ ಆಹ್ವಾನಿಸಲಾಗಿತ್ತು. ಕಾರಣಾಂತರಗಳಿಂದ ಬಂದಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಂಡ್ಯಕ್ಕೆ ಬರುವುದಕ್ಕೆ ಜೋಶಿ ಅವರಿಗೆ ಯಾವ ಭಯವೇನೂ ಇಲ್ಲ. ಅವರನ್ನು ಭಯಪಡಿಸುವವರು ಇಲ್ಲಿ ಯಾರೂ ಇಲ್ಲ. ಒಮ್ಮೆ ಪೊಲೀಸ್ ಭದ್ರತೆ ಕೇಳಿದರೆ ದೊರಕಿಸಲಾಗುವುದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಸ್ಮರಣ ಸಂಚಿಕೆಯನ್ನು ಆದಷ್ಟು ಬೇಗ ಬಿಡುಗಡೆಗೊಳಿಸುವುದಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ನುಡಿದರು.

ರಾಜ್ಯ ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಕೇಂದ್ರ ಭರವಸೆ: ಡಿ.ಕೆ.ಶಿವಕುಮಾರ್‌

ಲೆಕ್ಕ-ಪತ್ರ ನೀಡಲು ವಿಳಂಬವಾಗಿಲ್ಲ: ಸಮ್ಮೇಳನದ ಲೆಕ್ಕಪತ್ರ ನೀಡುವುದಕ್ಕೆ ವಿಳಂಬವಾಗಿಲ್ಲ. ಸಮ್ಮೇಳನದ ಸಂಪೂರ್ಣ ವೆಚ್ಚವನ್ನು ಭರಿಸಿದ ನಂತರ ಲೆಕ್ಕಪತ್ರವನ್ನು ಮಂಡಿಸಬೇಕು. ಆರ್ಥಿಕ ವರ್ಷಾಂತ್ಯದ ತಿಂಗಳಲ್ಲಿ ಎಲ್ಲಾ ಬಿಲ್ಲುಗಳನ್ನು ಖಜಾನೆಗೆ ನೀಡಬೇಕಿದ್ದು, ಮಾ.೨೮ಕ್ಕೆ ಬಿಲ್ಲುಗಳ ಸಲ್ಲಿಕೆ ಕಾರ್ಯ ಅಂತಿಮಗೊಂಡಿದೆ. ಹೀಗಾಗಿ ಲೆಕ್ಕಪತ್ರ ನೀಡಲು ವಿಳಂಬವಾಗಿಲ್ಲ ಎಂಬುದನ್ನು ಜಿಲ್ಲಾಧಿಕಾರಿ ಡಾ.ಮಾರ ಸ್ಪಷ್ಟಪಡಿಸಿದರು. ಸಮ್ಮೇಳನಕ್ಕೆ ರಚಿಸಲಾಗಿದ್ದ ೨೮ ಸಮಿತಿಗಳಿಂದ ವೆಚ್ಚವಾದ ಬಿಲ್‌ಗಳ ಮಾಹಿತಿಯನ್ನು ತರಿಸಿಕೊಂಡು ಯಾರು ಯಾರಿಗೆ ಎಷ್ಟೆಷ್ಟು ಹಣ ಸಂದಾಯವಾಗಿದೆ, ಸಂದಾಯವಾಗಬೇಕಿರುವ ಬಾಕಿ ಹಣ ಎಷ್ಟು, ಜಿಎಸ್‌ಟಿ ಬಾಬ್ತು, ಕೈಗಾರಿಕಾ ಘಟಕಗಳು, ವಿವಿಧ ಸಂಘ-ಸಂಸ್ಥೆಗಳು, ಪ್ರಾಯೋಜಕತ್ವ ವಹಿಸಿಕೊಂಡವರಿಂದ ಲೆಕ್ಕ-ಪತ್ರಗಳನ್ನೆಲ್ಲಾ ತರಿಸಿಕೊಂಡು ಪಾರದರ್ಶಕವಾಗಿ ಲೆಕ್ಕಪತ್ರ ಮಂಡಿಸಲಾಗಿದೆ ಎಂದು ಹೇಳಿದರು.

vuukle one pixel image
click me!