
ಬೆಂಗಳೂರು(ಏ.17): ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆ ಏ.18ರಿಂದ 21ರವರೆಗೆ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ವ್ಯತ್ಯಯದ ಸ್ಥಳ:
ಏ.18ರಂದು ಗ್ರೀನ್ ಗಾರ್ಡನ್ ಬಡಾವಣೆ, ಕುಂದಲಹಳ್ಳಿ ಗೇಟ್, ಸಾಯಿ ಸಂಜೀವಿನಿ ಬಡಾವಣೆ, ಜೆಸಿಆರ್ ಬಡಾವಣೆ, ಕಾವೇರಪ್ಪ ಲೇಔಟ್, ಬೆಳ್ಳಂದೂರು ರೈಲು ನಿಲ್ದಾಣ ರಸ್ತೆ, ಮುನಿರೆಡ್ಡಿ ಬಡಾವಣೆ, ರಾಮಮಂದಿರ, ಎಇಸಿಎಸ್ ಲೇಔಟ್‌ನ ಸಿ ಮತ್ತು ಡಿ ಬ್ಲಾಕ್, ಶ್ರೀನಿವಾಸ್ ರೆಡ್ಡಿ ಬ್ಲಾಕ್, ರಾಜು ಕಾಲೋನಿ, ಕೆಂಪಾಪುರ, ಯಮ್ಲೂರ್ ಮುಖ್ಯರಸ್ತೆ, ಪರಂಜಪ ಅಪಾರ್ಚ್‌ಮೆಂಟ್. ಏ.19ರಂದು ಬೆಳಗೆರೆ ವಿಲೇಜ್, ಪಣಥರ್‌ದಿನ್ನೆ, ಗುಂಜೂರ್ ಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಪಣತ್ತೂರ್ ಮುಖ್ಯರಸ್ತೆ, ಜಿಯರ್ ಸ್ಕೂಲ್ ರಸ್ತೆ, ನ್ಯೂ ಹಾರಿಜಾನ್ ಸ್ಕೂಲ್ ರಸ್ತೆ, ಮಾರತ್‌ಹಳ್ಳಿ, ಹಳೆ ವಿಮಾನ ನಿಲ್ದಾಣ ರಸ್ತೆ, ದೀಪಾ ನರ್ಸಿಂಗ್ ಹೋಮ್, ಸಂಜಯ್‌ನಗರ, ಮಂಜುನಾಥ್ ನಗರ.
ಏ.20ರಂದು ಪಣತ್ತೂರ್ ದಿನ್ನೆ ರಸ್ತೆ, ರೈಲ್ವೆ ಹಳಿ ರಸ್ತೆ, ಮುನ್ನೇನಕೊಳಲು, ಡೆಂಟಲ್ ಕಾಲೇಜು ರಸ್ತೆ, ಕಾಡುಬೀಸನಹಳ್ಳಿ, ಸಿಕೆಬಿ ಬಡಾವಣೆ, ಶಾಂತಿನಿಕೇತನ ಲೇಔಟ್. ಪಿಆರ್.ಬಡಾವಣೆ, ರೈನ್‌ಬೋ ಲೇಔಟ್, ಮ್ಯಾಟ್ರಿಕ್ಸ್ ಲೇಔಟ್, ಚೇತನಾ ಸ್ಕೂಲ್ ರಸ್ತೆ, ಎಸ್‌ಜಿಆರ್ ಡೆಂಟಲ್ ಕಾಲೇಜು, ಬಿಇಎಂಎಲ್ ಬಡಾವಣೆ, ಕೆಂಪಾಪುರ, ಯಮ್ಲೂರ್, ಬನ್ನಪ್ಪ ಕಾಲೋನಿ, ರಮೇಶ್ ಬಡಾವಣೆ. ಏ.21ರಂದು ಎಸ್‌ಜೆಆರ್ ಕಾಲೇಜು ರಸ್ತೆ, ಹೊರವರ್ತುಲ ರಸ್ತೆ, ಸ್ಟೆರರ್‌ಲಿಂಗ್ ಅಪಾರ್ಚ್‌ಮೆಂಟ್, ಅಣ್ಣಾರೆಡ್ಡಿ ಬಡಾವಣೆ, ದೊಡ್ಡಾನೆಕುಂದಿ, ಗುರುರಾಜ ಬಡಾವಣೆ, ಬಾಲಾಜಿ ಎನ್‌ಕ್ಲೇವ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Power Reduction Trouble: ನಗರ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿ ವಿದ್ಯುತ್ ಕಡಿತ!
ವಿದ್ಯುತ್ ದರ ಏರಿಸದಿದ್ದರೆ 4600 ಕೋಟಿ ‘ನಷ್ಟ’
ಬೆಂಗಳೂರು: ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ಲಭ್ಯತೆ, ವಿದ್ಯುತ್ ಖರೀದಿ ವೆಚ್ಚ, ಸರಬರಾಜು ವೆಚ್ಚ ಹಾಗೂ ಆದಾಯದ ಕುರಿತು 2022-23ರಿಂದ 2025ರ ಆರ್ಥಿಕ ವರ್ಷದವರೆಗಿನ ಭವಿಷ್ಯದ ವಾರ್ಷಿಕ ಆದಾಯ ಅಗತ್ಯತೆ (ಎಆರ್‌ಆರ್) ವರದಿಯನ್ನು ಇಂಧನ ಇಲಾಖೆ ಸಿದ್ಧಪಡಿಸಿದೆ. ಅದರಲ್ಲಿ 2022-23ನೇ ಸಾಲಿನಲ್ಲಿ 4,609 ಕೋಟಿ ರು. ಆದಾಯ ಕೊರತೆ ಉಂಟಾಗಲಿದೆ ಎಂದು ತಿಳಿಸಿದೆ.
ಹೀಗಾಗಿ 2022-23ನೇ ಸಾಲಿಗೆ ಅನ್ವಯಿಸುವಂತೆ ಪ್ರತಿ ಯುನಿಟ್‌ಗೆ 1.58 ರು.ನಂತೆ ವಿದ್ಯುತ್ ದರ ಹೆಚ್ಚಳ ಮಾಡಬೇಕು. ಜತೆಗೆ 2023-24, 2024-25ರ ಆರ್ಥಿಕ ವರ್ಷದಲ್ಲೂ ಆಗ ಉಂಟಾಗುವ ಆದಾಯ ಕೊರತೆ ಆಧಾರದ ಮೇಲೆ ವಿದ್ಯುತ್ ದರ ಪರಿಷ್ಕರಣೆ ಮಾಡಬೇಕಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, 2022-23ರ ಸಾಲಿಗೆ ದರ ಹೆಚ್ಚಳ ಪ್ರಸ್ತಾಪದೊಂದಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೂ (ಕೆಇಆರ್‌ಸಿ) ಎಆರ್‌ಆರ್ ವರದಿಯನ್ನು ಸಲ್ಲಿಸಲಾಗಿದೆ.
ಎಆರ್‌ಆರ್ ವರದಿ ಪ್ರಕಾರ 2022-23ರ ಆರ್ಥಿಕ ವರ್ಷದಲ್ಲಿ ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ 71,185.49 ದಶಲಕ್ಷ ಯುನಿಟ್ ವಿದ್ಯುತ್ ಅಗತ್ಯವಿದೆ. ಇದರ ಖರೀದಿಗಾಗಿ ಪ್ರತಿ ಯುನಿಟ್‌ಗೆ ಸರಾಸರಿ 4.78 ರು.ಗಳಂತೆ 34,029 ಕೋಟಿ ರು. ವೆಚ್ಚವಾಗಲಿದೆ. ಜತೆಗೆ ವಿದ್ಯುತ್ ಸರಬರಾಜಿಗಾಗಿ 2,735 ಕೋಟಿ ರು. ವೆಚ್ಚವಾಗಲಿದೆ. ಹೀಗಿದ್ದರೂ ವಿದ್ಯುತ್ ಶುಲ್ಕ ಸಂಗ್ರಹದಿಂದ ಬರುವ ಆದಾಯದ ಹೊರತಾಗಿಯೂ 4,609 ಕೋಟಿ ರು. ಆದಾಯ ಕೊರತೆ ಉಂಟಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.