ನಗರದ ನಾಗರೀಕರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕರಾದ ಕೆ.ಟಿ.ಶಾಂತಕುಮಾರ್‌ರವರ ನೇತೃತ್ವದಲ್ಲಿ ನಗರದ ವಿವಿಧ ಬಡವಾಣೆಗಳಲ್ಲಿ ನಾಗರೀಕರ ಜಾಗೃತ ನಡಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಂಡು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ತಿಪಟೂರು (ಅ.22): ನಗರದ ನಾಗರೀಕರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕರಾದ ಕೆ.ಟಿ.ಶಾಂತಕುಮಾರ್‌ರವರ ನೇತೃತ್ವದಲ್ಲಿ ನಗರದ ವಿವಿಧ ಬಡವಾಣೆಗಳಲ್ಲಿ ನಾಗರೀಕರ ಜಾಗೃತ ನಡಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಂಡು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಪಾದಯಾತ್ರೆಯ ನಂತರ ನಗರದ ಸಿಂಗ್ರಿನಂಜಪ್ಪ ವೃತ್ತದಲ್ಲಿ ಮಾತನಾಡಿದ ಮುಖಂಡ ಕೆ.ಟಿ. ಶಾಂತಕುಮಾರ್, ಜಿಲ್ಲಾ ಕೇಂದ್ರವಾಗಲು ಎಲ್ಲಾ ಅರ್ಹತೆ ಹೊಂದಿರುವ ತಿಪಟೂರು ನಗರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಂದುವರೆದಿದ್ದರೂ ನಗರದ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ನೂರಾರು ಸಮಸ್ಯೆಗಳಿಂದ ತಿಪಟೂರು ನಗರ ಬಳಲುತ್ತಿದ್ದರೂ ಇಲ್ಲಿನ ಸಚಿವರು ಹಾಗೂ ಅಧಿಕಾರಿಗಳು, ತಾಲೂಕು ಆಡಳಿತ, ನಗರಸಭೆಯಾಗಲಿ ಬಗೆಹರಿಸುವ ಚಿಂತನೆ ಮಾಡುತ್ತಿಲ್ಲ ಎಂದರು.
ಪಾದಯಾತ್ರೆಯು ನಗರದ ಹಳೇಪಾಳ್ಯದಿಂದ ಮಾರ್ಕೆಟ್ ರಸ್ತೆ ಮುಖಾಂತರ ಪಂಪ್‌ಹೌಸ್, ಗೋವಿನಪುರ, ಹೈಟೆನ್‌ಷನ್ ರಸ್ತೆ, ಕಂಚಾಘಟ್ಟ, ವಿದ್ಯಾನಗರ, ಹಾಸನ ಸರ್ಕಲ್, ಶಾರದನಗರ, ಮಾರನಗೆರೆ, ಇಂದಿರಾನಗರ, ಗಾಂಧಿನಗರ ಸರ್ಕಲ್, ಕಾರೋನೇಷನ್ ರಸ್ತೆ, ಕೋಟೆ, ದೊಡ್ಡಪೇಟೆ, ಪ್ರಭಾತ್ ರಸ್ತೆ, ಮಖಾನ್ ಲೈನ್, ರೈಲ್ವೆ ಸ್ಟೇಷನ್ ಸೇರಿದಂತೆ ಇತರ ಬಡಾವಣೆಗಳಲ್ಲಿ ಸಂಚರಿಸಿ ನಂತರ ನಗರಸಭೆ ಪೌರಾಯುಕ್ತರಿಗೆ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಪತ್ರ ಸಲ್ಲಿಸಲಾಯಿತು. ಪಾದಯಾತ್ರೆಯಲ್ಲಿ ನಿವಾಸಿಗಳು ತಮ್ಮ ಬಡಾವಣೆಗಳಲ್ಲಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ತಿಳಿಸಿ ಪರಿಹಾರಕ್ಕಾಗಿ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ನಗರಸಭೆ ಪೌರಾಯುಕ್ತ ಉಮಾಕಾಂತ್ ಮಾತನಾಡಿ, ಮನವಿಯನ್ನು ಪರಿಶೀಲಿಸಿ ಆದಷ್ಟುಬೇಗ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದರು.
ಪಾದಯಾತ್ರೆಯಲ್ಲಿ ಸುದರ್ಶನ್, ಮಂಜುನಾಥ್ ಸೇರಿದಂತೆ ಕೆಟಿಎಸ್ ಅಭಿಮಾನಿಗಳು, ವಿವಿಧ ಬಡಾವಣೆಯ ನಿವಾಸಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಾಗರಿಕರ ಹಿಡಿಶಾಪ
ನಗರ ಸಮಸ್ಯೆಗಳನ್ನೇ ಹೊದ್ದುಮಲಗಿದ್ದು, ನಗರದ 31ವಾರ್ಡ್‌ಗಳಲ್ಲಿ ರಸ್ತೆ, ಬೀದಿದೀಪ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿವೆ. ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯ ಪರಿಣಾಮ ಯುಜಿಡಿಯಿಂದ ಪ್ರಮುಖ ರಸ್ತೆಗಳ ಮೇಲೆ ಗಲೀಜು ನೀರು ಹರಿಯುತ್ತಿದ್ದು, ಗಬ್ಬು ವಾಸನೆಯಲ್ಲಿ ನಿವಾಸಿಗಳು ಬದುಕುವಂತಾಗಿದೆ. ಹೇಮಾವತಿ ನೀರಿಗೆ ಕಲುಷಿತ ನೀರು ಮಿಶ್ರಣವಾಗಿದ್ದರೂ ಕುಡಿಯಲು ಅದೇ ನೀರನ್ನು ಬಳಸುವಂತಾಗಿದೆ. ಮಳೆ ನೀರು ಹೊರಗೆ ಹೋಗುವ ವ್ಯವಸ್ಥೆಯಿಲ್ಲದೆ ನಗರದ ಪ್ರಮುಖ ಸ್ಥಳಗಳು ಜಲಾವೃತವಾಗುತ್ತಿವೆ. ಗಾಂಧಿನಗರದಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದ್ದು, ಇದರಿಂದ ಸಾವಿರಾರು ಜನರು 3-4 ಕಿ.ಮೀ ಬಳಸಿಕೊಂಡು ನಿತ್ಯ ಓಡಾಡುತ್ತಿದ್ದಾರೆ. ಇಲ್ಲಿನ ಜನರು ಕೂಡಿಟ್ಟಹಾಗೂ ಸಾಲ ಮಾಡಿ ನಿವೇಶನ, ಮನೆಗಳ ಖರೀದಿಸಿರುವ ಸಾವಿರಾರು ಜನರು ಮನೆ ಕಟ್ಟಲಾಗದೆ ಅಥವಾ ಕ್ರಯ ಮಾಡಲಾಗದೆ ಪರದಾಡುವಂತಾಗಿದ್ದು, ನಗರಸಭೆಗೆ ಹಿಡಿಶಾಪಹಾಕುತ್ತಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ನೂರಾರು ಸಮಸ್ಯೆಗಳಿದ್ದು ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಹಣ ತೆತ್ತು ಸಾಕಾಗಿ ಹೋಗಿದ್ದಾರೆ ಎಂದು ಕೆ.ಟಿ.ಶಾಂತಕುಮಾರ್ ದೂರಿದರು.
ನಗರದ ನಾಗರೀಕರು ಎದುರಿಸುತ್ತಿರುವ ಹಲವಾರು ಸಮಸ್ಯೆ
ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕರಾದ ಕೆ.ಟಿ.ಶಾಂತಕುಮಾರ್‌ರವರ ನೇತೃತ್ವದಲ್ಲಿ ನಗರದ ವಿವಿಧ ಬಡವಾಣೆಗಳಲ್ಲಿ ನಾಗರೀಕರ ಜಾಗೃತ ನಡಿಗೆ
ನಗರ ಸಭೆ ಪೌರಾ ಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಪಾದ ಯಾತ್ರೆಯು ನಗರದ ಹಳೇ ಪಾಳ್ಯದಿಂದ ಮಾರ್ಕೆಟ್ ರಸ್ತೆ ಮುಖಾಂತರ ಪಂಪ್‌ಹೌಸ್, ಗೋವಿನಪುರ ಸೇರಿ ವಿವಿದೆಡೆ ಸಾಗಿತು
ನಗರ ಸಮಸ್ಯೆಗಳನ್ನೇ ಹೊದ್ದುಮಲಗಿದ್ದು, ನಗರದ 31ವಾರ್ಡ್‌ಗಳಲ್ಲಿ ರಸ್ತೆ, ಬೀದಿದೀಪ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸಮಸ್ಯೆ