ಸೊರಬ: ಚಂದ್ರಗುತ್ತಿ ರೇಣುಕೆ ಕ್ಷೇತ್ರದಲ್ಲಿ ಸೌಲ​ಭ್ಯ​ಗಳ ಕೊರ​ತೆ

By Kannadaprabha News  |  First Published Feb 26, 2023, 4:53 AM IST

ತಾಲೂ​ಕಿನ ಧಾರ್ಮಿಕ ಕ್ಷೇತ್ರ ಚಂದ್ರಗುತ್ತಿಯ ಶ್ರೀ ರೇಣುಕಾದೇವಿಗೆ ಫೆ.27ರಂದು ಹೂವಿನ ರಥೋತ್ಸವ, 28ರಂದು ದೊಡ್ಡ ತೇರು ಅಥವಾ ಮಹಾರಥೋತ್ಸವ ಜರುಗಲಿದೆ. ಆದರೆ, ಈ ಕ್ಷೇತ್ರ​ದಲ್ಲಿ ಮೂಲ​ಸೌ​ಕ​ರ್ಯ​ಗಳು ತಾಂಡ​ವ​ವಾ​ಡು​ತ್ತಿ​ವೆ.


ಸೊರಬ (ಫೆ.26) : ತಾಲೂ​ಕಿನ ಧಾರ್ಮಿಕ ಕ್ಷೇತ್ರ ಚಂದ್ರಗುತ್ತಿಯ ಶ್ರೀ ರೇಣುಕಾದೇವಿ(Chandragutti Shri Renukadevi)ಗೆ ಫೆ.27ರಂದು ಹೂವಿನ ರಥೋತ್ಸವ, 28ರಂದು ದೊಡ್ಡ ತೇರು ಅಥವಾ ಮಹಾರಥೋತ್ಸವ ಜರುಗಲಿದೆ. ಆದರೆ, ಈ ಕ್ಷೇತ್ರ​ದಲ್ಲಿ ಮೂಲ​ಸೌ​ಕ​ರ್ಯ​ಗಳು ತಾಂಡ​ವ​ವಾ​ಡು​ತ್ತಿ​ವೆ.

ಜಾತ್ರೆ ಮತ್ತು ರೇಣುಕಾಂಬೆಗೆ ಪಾರಂಪರಿಕ ಇತಿಹಾಸವಿದೆ. ಪ್ರತಿ ಮಂಗಳವಾರ, ಶುಕ್ರವಾರ, ಹುಣ್ಣಿಮೆ ಮತ್ತು ಜಾತ್ರಾ ಸಮಯದಲ್ಲಿ ಭಕ್ತರಿಂದ ಕಾಣಿ​ಕೆ ರೂಪದಲ್ಲಿ ಲಕ್ಷಾಂತರ ರು. ಸಂಗ್ರಹ ಆಗುತ್ತದೆ. ರಾಜ್ಯ ಮತ್ತು ಹೊರ ರಾಜ್ಯಗಳ ಲಕ್ಷಾಂತರ ಭಕ್ತರು ಜಾತ್ರೆಗೆ ಆಗ​ಮಿ​ಸುತ್ತಾರೆ. ಆದರೆ ರೇಣುಕಾಂಬೆ ನೆಲೆಸಿರುವ ಕ್ಷೇತ್ರದ ಗುಡ್ಡ ಪ್ರದೇ​ಶದ ತಾಣ​ದಲ್ಲಿ ಸಮಸ್ಯೆಗಳು ಪರಿಹಾರ ಕಂಡಿಲ್ಲ. ಪರಿಣಾಮ ಭಕ್ತರು ಯ​ಮ​ಯಾ​ತ​ನೆ​ಯಿಂದಲೇ ದೇವಿ ದರ್ಶನ ಪಡೆಯುವಂತಾ​ಗಿದೆ. ಕುಡಿಯುವ ನೀರು, ಶೌಚಾಲಯ, ವಸತಿ ನಿಲಯ, ವಿದ್ಯುತ್‌ ಸಮಸ್ಯೆ ಹೀಗೆ ಹಲವಾರು ಸಮಸ್ಯೆ ಇಲ್ಲಿವೆ. ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಮುಜರಾಯಿ ಇಲಾಖೆಗಳು ಇವು​ಗಳ ಪರಿ​ಹ​ರಿ​ಸು​ವ​ಲ್ಲಿ ಸಂಪೂರ್ಣ ಸೋತಿವೆ.

Tap to resize

Latest Videos

ಶಿವಮೊಗ್ಗ: ಕರುನಾಡ 7 ಅದ್ಭುತಗಳಲ್ಲಿ ಜೋಗಕ್ಕೆ ಸ್ಥಾನ

ಕೆಲವೇ ಆಚ​ರ​ಣೆ​ಗ​ಳಿಗೆ ಅವ​ಕಾ​ಶ:

1984ರಲ್ಲಿ ಬೆತ್ತಲೆಸೇವೆ ಎಂಬ ಅನಿಷ್ಟಪದ್ಧತಿ ವಿರುದ್ಧ ಪ್ರಗತಿಪರ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ಜಾತ್ರೆ ಅಲ್ಲದೇ ಸಾರ್ವಜನಿಕ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಗಿತ್ತು. ಜಿಲ್ಲಾಧಿಕಾರಿ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ರಥೋತ್ಸವದಲ್ಲಿ ಭಾಗಿಯಾಗಿ ಪೂಜಾ ವಿಧಿ-ವಿಧಾನಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಬೆತ್ತಲೆಸೇವೆ ಹೊರತುಪಡಿಸಿ, ಇತರೆ ಧಾರ್ಮಿಕ ಆಚರಣೆಗಳಿಗೆ ಸಡಿಲಿಕೆ ನೀಡಲಾ​ಗಿದೆ. ಇದ​ರಿಂದಾಗಿ 3 ಕಿ.ಮೀ. ದೂರದಲ್ಲಿರುವ ವರದಾ ನದಿಯಲ್ಲಿ ಸ್ನಾನ ಮಾಡಿ, ಕಾಲ್ನಡಿಗೆಯಲ್ಲಿ ದೇವಿಯ ಗುಡಿಗೆ ಬಂದು ಸೇವೆ ಸಲ್ಲಿಸುವ, ಉರುಳುಸೇವೆ, ಉದ್ದಂಡ ಮತ್ತು ದೀಡು ನಮಸ್ಕಾರ, ಮೀಸಲುಬುತ್ತಿ ಸೇವೆ, ಕಿವಿ ಚುಚ್ಚುವುದು, ಕೇಶಮುಂಡನೆ, ಪಡ್ಲಿಗೆ ಪೂಜೆ ಮೊದಲಾದ ಆಚರಣೆಗಳನ್ನು ಮಾಡಲು ಅವ​ಕಾಶ ನೀಡ​ಲಾ​ಗಿದೆ.

ಇಲ್ಲಿ ಬೇಸಿಗೆ ತಾಪ ಹೆಚ್ಚಾಗಿದ್ದು, ಕುಡಿಯುವ ನೀರಿಗಾಗಿ ಭಕ್ತರು ಪರದಾಡುವ ಪರಿಸ್ಥಿತಿ ಇದೆ. ವರದಾ ನದಿದಂಡೆಯಲ್ಲೇ ಕ್ಷೇತ್ರ​ವಿದ್ದರೂ ಈ ಗ್ರಾಮಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಜಾತ್ರೆ ನಡೆಯುವ ಸ್ಥಳವೂ ಕಲು​ಷಿ​ತ​ಗೊಂಡಿದೆ. ಚರಂಡಿ ಇನ್ನಿ​ತರ ಸಮಸ್ಯೆಗಳಿವೆ. ಚಂದ್ರಗುತ್ತಿಯ ಐತಿಹಾಸಿಕ ಐತಿಹ್ಯ ಅವಸಾನದ ಅಂಚು ತಲುಪುತ್ತಿವೆ. ಇತಿಹಾಸ ಸಾರುವ ಪರಶುರಾಮನ ಏಳುಸುತ್ತಿನ ಕೋಟೆ, ಬೆಟ್ಟ-ಗುಡ್ಡಗಳು ಪಾಳು ಕೊಂಪೆಯಾಗಿವೆ. ದೇವಾಲಯ ಹಾಗೂ ಕೋಟೆ ಸುತ್ತಲಿನ ಗುಡ್ಡಗಳು ಕ್ವಾರಿಗಣಿಗೆ ಸಿಲುಕಿ ನಲು​ಗು​ತ್ತಿವೆ. ಅನೇಕ ವಿಗ್ರಹಗಳು ಭಗ್ನಗೊಂಡಿವೆ. ಪ್ರವಾಸಿ ತಾಣವಾಗಬೇಕಿದ್ದ ಚಂದ್ರಗುತ್ತಿ ಹಾಳು ಕೊಂಪೆಯಾಗಿದೆ ಎನ್ನೋ​ದು ಪ್ರವಾಸಿಗರು ಮತ್ತು ಸ್ಥಳೀಯ ಗ್ರಾಮಸ್ಥರು ಅಳಲು.

18 ಕಂಪಣ ಶಾನ​ದಲ್ಲಿ ಚಂದ್ರ​ಗುತ್ತಿ ಉಲ್ಲೇಖ

ಚಂದ್ರಗುತ್ತಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಪ್ರಮುಖ ಆಡಳಿತ ಕೇಂದ್ರವಾಗಿತ್ತು ಎನ್ನುವ ಉಲ್ಲೇಖ ಚಂದ್ರಗುತ್ತಿ 18 ಕಂಪಣ ಶಾಸನದಲ್ಲಿ ಪತ್ತೆಯಾಗಿದೆ. ಕನಕದಾಸರ ಮಾಂಡಳೀಕತ್ವ ಅವಧಿಯಲ್ಲಿ ಹಲವು ಬಾರಿ ಇಲ್ಲಿಗೆ ಆಗಮಿಸಿದ್ದ ಉಲ್ಲೇಖವೂ ಇದೆ. ಹಾಗೆಯೆ ಚಂದ್ರಗುತ್ತಿ ಪ್ರಮುಖ ನಾಥಪಂತದ ಕೇಂದ್ರವೂ ಆಗಿದೆ. ಇಂದಿಗೂ ನಾಥಪಂತದ ಮಠ ಮತ್ತು ಕಾಲಭೈರವ ದೇವಸ್ಥಾನ ಬೆಟ್ಟದ ಮಧ್ಯದಲ್ಲಿದೆ. ಹಿಂದಿನ ಕಾಲದಲ್ಲಿ ತಿಂಗಳುಗಟ್ಟಲೆ ಜಾತ್ರೆ ನೆರೆಯುತ್ತಿತ್ತಂತೆ. ಮುಖ್ಯವಾಗಿ ಆ ಕಾಲದಲ್ಲಿ ಉತ್ತರ ಕರ್ನಾಟಕದ ಬೇಳೆಕಾಳುಗಳು, ಮೆಣಸು ಮತ್ತು ಅರೆಮಲೆನಾಡು, ಮಲೆನಾಡು ಭಾಗದ ಅಡಕೆ, ಭತ್ತ, ಮಸಾಲೆ ಸಾಮಗ್ರಿಗಳನ್ನು ಪರಸ್ಪರ ಕೊಟ್ಟು ತೆಗೆದುಕೊಳ್ಳುವ ವಿನಿಮಯ ಕೇಂದ್ರ ಆಗಿತ್ತು.

ಜಿಂದಾಲ್‌ಗೆ ವಿಐಎಸ್‌ಎಲ್‌ ಮಾರಲು ಬಿಜೆಪಿ ಉನ್ನಾ​ರ: ಎಚ್‌ ವಿಶ್ವನಾಥ

ಚಂದ್ರಗುತ್ತಿ ಗ್ರಾಮ ಬೆತ್ತಲೆಸೇವೆ ಆಚ​ರ​ಣೆಯಿಂದ ಮುಕ್ತವಾಗಿ ಇಂದಿಗೆ 39 ವರ್ಷಗಳು ಕಳೆದಿವೆ. ತಾವೂ ಮತ್ತು ರಾಜ್ಯದ ಹಲವು ಸಾಮಾಜಿಕ ಹೋರಾಟಗಾರರ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಆದರೆ ಗ್ರಾಮ ಇಂದಿಗೂ ಮೂಲಭೂತ ಸಮಸ್ಯೆಗಳಿಂದ ಹೊರಬಂದಿಲ್ಲ. ಬಾಯಿ ಮಾತಿನಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದಾರೆ. ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿಸಲು ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು

- ಟಿ.ರಾಜಪ್ಪ ಮಾಸ್ತರ್‌, ಸಮಾಜ ಚಿಂತಕ, ಪ್ರಗತಿಪರ ಸಂಘಟನೆಗಳ ಹೋರಾಟಗಾರ, ಸೊರಬ

ಮುಂಜಾಗ್ರತಾ ಕ್ರಮವಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ವಾಹನ ಪಾಕಿಂಗ್‌, ಸ್ವಚ್ಛತೆ, ಬೀದಿ ದೀಪದ ವ್ಯವಸ್ಥೆಯೊಂದಿಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ

- ವಿ.ಎಲ್‌. ಶಿವಪ್ರಸಾದ್‌, ಕಾರ್ಯನಿರ್ವಾಹಣಾಧಿಕಾರಿ, ಶ್ರೀ ರೇಣುಕಾಂಬಾ ದೇವಸ್ಥಾನ

click me!