8 ತಿಂಗಳ ಬಳಿಕ ಕೊರೋನಾ ಸೋಂಕಿತರ ಸಾವಿಗೆ ಬ್ರೇಕ್‌

By Kannadaprabha News  |  First Published Mar 14, 2021, 7:09 AM IST

83 ದಿನಗಳ ಬಳಿಕ 600ರ ಗಡಿ ದಾಟಿದ ಸೋಂಕಿತರ ಪತ್ತೆ ಪ್ರಮಾಣ| 2020 ಜುಲೈ 7 ಮತ್ತು 9ರಂದು ಬೆಂಗಳೂರಲ್ಲಿ ಕೊರೋನಾ ಸೋಂಕಿನಿಂದ ಯಾವುದೇ ಸಾವು ಸಂಭವಿಸಿರಲಿಲ್ಲ, ನಂತರ ದಿನವೂ ಸಾವಿನ ಪ್ರಕರಣಗಳು ದಾಖಲಾಗುತ್ತಲೇ ಇದ್ದವು| ನಗರದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 4,10,811ಕ್ಕೆ ಏರಿಕೆ| 


ಬೆಂಗಳೂರು(ಮಾ.14): ಕಳೆದ ಎಂಟು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ನಗರದಲ್ಲಿ ಶನಿವಾರ ಕೋವಿಡ್‌ ಸೋಂಕಿನಿಂದ ಸಾವು ಸಂಭವಿಸಿದ ಪ್ರಕರಣ ದಾಖಲಾಗಿಲ್ಲ. ಆದರೆ, ಕೊರೋನಾ ಸೋಂಕಿತರ ಪತ್ತೆ ಪ್ರಮಾಣ ಕಳೆದ 83 ದಿನಗಳ ನಂತರ ಏರಿಕೆಯಾಗಿದ್ದು, ಶನಿವಾರ ಒಂದೇ ದಿನ 600ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

2020 ಜುಲೈ 7 ಮತ್ತು 9ರಂದು ನಗರದಲ್ಲಿ ಕೊರೋನಾ ಸೋಂಕಿನಿಂದ ಯಾವುದೇ ಸಾವು ಸಂಭವಿಸಿರಲಿಲ್ಲ. ನಂತರ ದಿನವೂ ಸಾವಿನ ಪ್ರಕರಣಗಳು ದಾಖಲಾಗುತ್ತಲೇ ಇದ್ದವು. ಈಗ ಹೊಸದಾಗಿ ಸೋಂಕು ಪತ್ತೆಯಾಗುತ್ತಿರುವ ಪ್ರಕರಣಗಳು ನಗರದಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ ಒಂದೇ ಒಂದು ಸಾವು ಪ್ರಕರಣ ದಾಖಲಾಗಿಲ್ಲ. ಹಾಗೆಯೇ ಈ ಹಿಂದೆ ಡಿಸೆಂಬರ್‌ 21ರಂದು 659 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಆ ನಂತರ ಈವರೆಗೂ 600ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಶನಿವಾರ ಹೊಸದಾಗಿ 630 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು ಆತಂಕ ಮೂಡಿಸಿದೆ.

Latest Videos

undefined

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಕೊರೋನಾ: ಮತ್ತಷ್ಟು ಆತಂಕ

ನಗರದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 4,10,811ಕ್ಕೆ ಏರಿಕೆಯಾಗಿದೆ. ಶನಿವಾರ 785 ಮಂದಿ ಗುಣಮುಖರಾಗಿದ್ದು ಈ ಮೂಲಕ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4,00,441ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5,853ಕ್ಕೆ ಇಳಿಕೆಯಾಗಿದೆ. ಈ ಪೈಕಿ 48 ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 4516 ಇದೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
 

click me!