ಜನ-ವಾಹನ ದಟ್ಟಣೆ: ಕಡೂರಿನಲ್ಲಿ ಸಾಮಾಜಿಕ ಅಂತರ ಮಂಗಮಾಯ..!

By Kannadaprabha News  |  First Published May 22, 2020, 9:53 AM IST

ಕೊರೋನಾ ತಡೆಯುವ ಪ್ರಮುಖ ಅಸ್ತ್ರವೆಂದರೆ ಸದ್ಯಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಿದೆ. ಆದರೆ ಚಿಕ್ಕಮಗಳೂರಿನ ಕಡೂರಿನ ಜನತೆ ಅದರ ಪರಿವೇ ಇಲ್ಲವೇನೋ ಎನ್ನುವಂತೆ ರಸ್ತೆಯಲ್ಲಿ ಓಡಾಟ ಆರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಕಡೂರು(ಮೇ.22): ನೆರೆಯ ತರೀಕೆರೆ ಮತ್ತು ಅರಸೀಕೆರೆ ತಾಲೂಕುಗಳಲ್ಲಿ ಕೊರೋನಾ ಪ್ರಕರಗಳ ಪತ್ತೆಯಿಂದಾಗಿ ಕಡೂರು ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆದರೆ ತಾಲೂಕಿನ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಇದು ಅಪಾಯಕಾರಿ ಸಂಗತಿಯಾಗಿದೆ.

‘ಹಸಿರು ವಲಯ’ ಎಂದೇ ಕರೆಯಲ್ಪಡುವ ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ಪ್ರಕರಣಗಳು ಕಂಡುಬಂದಿವೆ. ಪಕ್ಕದ ಅರಸೀಕೆರೆ ತಾಲೂಕಿನಲ್ಲಿ ಬಾಣಾವರ ಮತ್ತು ತರೀಕೆರೆ ಪಟ್ಟಣ ಸೇರಿದಂತೆ ಶಿವಮೊಗ್ಗ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ- 206 ಕಡೂರು ಮೂಲಕವೇ ಹಾದುಹೋಗಲಿದೆ. ಕಡೂರಿಗೆ ಕೇವಲ 36 ಕಿಲೋ ಮೀಟÜರ್‌ ದೂರದಲ್ಲಿರುವ ತರೀಕೆರೆ ತಾಲೂಕಿನಲ್ಲಿ ಮತ್ತು ಅರಸೀಕೆರಯೆ ಬಾಣಾವರದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಖಚಿತವಾಗಿವೆ. ಇದು ಕಡೂರು ಜನರಲ್ಲಿ ಆತಂಕ ಸೃಷ್ಟಿಸಿದೆ.

Tap to resize

Latest Videos

ಈ ನಿಟ್ಟಿನಲ್ಲಿ ಕಡೂರು- ಬೀರೂರು ಪಟ್ಟಣಗಳಲ್ಲಿ ಸ್ಥಳೀಯ ಪುರಸಭೆ ಮತ್ತು ತಾಲೂಕು ಆಡಳಿತವು ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ಸಮಯ ನಿಗದಿಪಡಿಸಿರುವುದು ಸ್ವಲ್ಪಮಟ್ಟಿಗೆ ಗೊಂದಲವನ್ನು ಉಂಟುಮಾಡಿದೆ.

ಮದುವೆಯಲ್ಲಿ ಭಾಗಿಯಾಗಿದ್ದ ಕೊರೋನಾ ಸೋಂಕಿತ ವೃದ್ಧೆ!

ಮೇ 19ರಂದು 12 ಗಂಟೆವರೆಗೆ ಮಾತ್ರ ಅಂಗಡಿಗಳ ತೆರವಿಗೆ ಅವಕಾಶ ನೀಡಿ, ಬುಧವಾರದಿಂದ ಮತ್ತೆ ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ನೀಡಿದೆ. ಆದರೂ ಪಟ್ಟಣಕ್ಕೆ ಬರುತ್ತಿರುವವರ ಸಂಖ್ಯೆ ಕಡಿಮೆಯಾಗಿಲ್ಲ. ಎಲ್ಲೆಂದರಲ್ಲಿ ವಾಹನದಟ್ಟಣೆ ಹಾಗೂ ಜನದಟ್ಟಣೆ ಹೆಚ್ಚಾಗಿದೆ. ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಹೆಚ್ಚಾಗಿ ಬೀಜ ಗೊಬ್ಬರಕ್ಕಾಗಿ ಪಟ್ಟಣಗಳಿಗೆ ಬರುತ್ತಿರುವ ಸಂಖ್ಯೆ ಕಡಿಮೆಯಾಗಿಲ್ಲ. ಸಾಮಾಜಿಕ ಅಂತರ ಕಂಡುಬರುತ್ತಿಲ್ಲ.

ತಾಲೂಕು ಕಚೇರಿ ಮುಂಭಾಗದಲ್ಲಿ, ವಿವಿಧ ಕಚೇರಿಗಳಲ್ಲಿ ಅಂತರವಿಲ್ಲದೇ ಕೆಲವರು ಮಾಸ್ಕ್‌ ಹಾಕದೇ ಜನರು ಅಡ್ಡಾಡುತ್ತಿದ್ದಾರೆ. ಆದರೆ ಅಂಗಡಿಗಳ ತೆರವಿನ ಸಮಯ ನಿಗದಿ ಬಗ್ಗೆ ತಾಲೂಕು ಆಡಳಿತ ಸ್ಪಷ್ಟನೆ ನೀಡಬೇಕಾಗಿದೆ. ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಪಟ್ಟಣದ ಪೇಟೆ ಗಣಪತಿ ಆಂಜನೇಯಸ್ವಾಮಿ ವೃತ್ತದ ಪ್ರಮುಖ ಕೂಡು ರಸ್ತೆಗಳಲ್ಲಿ ಪದೇಪದೇ ಜನಸಂಚಾರ ಮತ್ತು ವಾಹನಗಳ ಸಂಚಾರ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕೆ ಪೊಲೀಸರು ಶ್ರಮಿಸುತ್ತಿದ್ದಾರೆ. ಒಟ್ಟಾರೆ ತಾಲೂಕಿನಲ್ಲಿ ಸಾರ್ವಜನಿಕರು ಅಂತರ ಕಾಪಾಡಿ ಮುಂಜಾಗ್ರತೆ ವಹಿಸದೇ ಇಲ್ಲದಿದ್ದಲ್ಲಿ ಆತಂಕ ಮತ್ತು ಅಪಾಯವಿದೆ. ಈ ಬಗ್ಗೆ ಜನರು ಎಚ್ಚೆತ್ತಕೊಳ್ಳಬೇಕಿದೆ.

click me!