ಪುತ್ತೂರು: ಸ್ನಾನಕ್ಕೆಂದು ನದಿಗಿಳಿದಿದ್ದ ವೇಳೆ ನೀರಿನಲ್ಲಿ ಹೃದಯಾಘಾತ, ನವವಿವಾಹಿತ ಯುವಕ ಸಾವು

By Kannadaprabha News  |  First Published Nov 16, 2023, 1:00 AM IST

ಸುಜಿತ್ ಇರ್ದೆ ಬೇಂದ್ರ್ ತೀರ್ಥ ಬಳಿ ಇರುವ ಸಂಬಂಧಿಕರ ಮನೆಗೆ ತೆರಳಿದ್ದು, ಈ ವೇಳೆ ಅಲ್ಲಿ ಸ್ನಾನ ಮಾಡಲೆಂದು ಹೊಳೆಯ ನೀರಿಗಿಳಿದಿದ್ದರು. ಅಲ್ಲಿಯೇ ಅವರಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆನ್ನಲಾಗಿದೆ. 


ಪುತ್ತೂರು(ನ.16): ಸ್ನಾನಕ್ಕೆಂದು ಹೊಳೆಗಿಳಿದಿದ್ದ ವೇಳೆ ನೀರಿನಲ್ಲಿ ಹೃದಯಾಘಾತ ಸಂಭವಿಸಿ ಯುವಕ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಇರ್ದೆ ಬೇಂದ್ರ್ ತೀರ್ಥ ಬಳಿ ಮಂಗಳವಾರ ನಡೆದಿದೆ. ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ಜಿನ್ನಪ್ಪ ಗೌಡ ಎಂಬವರ ಪುತ್ರ ಸುಜಿತ್ (27) ಮೃತ ಯುವಕ.

ಸುಜಿತ್ ಇರ್ದೆ ಬೇಂದ್ರ್ ತೀರ್ಥ ಬಳಿ ಇರುವ ಸಂಬಂಧಿಕರ ಮನೆಗೆ ತೆರಳಿದ್ದು, ಈ ವೇಳೆ ಅಲ್ಲಿ ಸ್ನಾನ ಮಾಡಲೆಂದು ಹೊಳೆಯ ನೀರಿಗಿಳಿದಿದ್ದರು. ಅಲ್ಲಿಯೇ ಅವರಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆನ್ನಲಾಗಿದೆ. ಅವರು ನಗರದ ಬೊಳುವಾರು ಎಂಬಲ್ಲಿ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. 8 ತಿಂಗಳ ಹಿಂದೆ ವಿವಾಹಿತರಾಗಿದ್ದರು.

Tap to resize

Latest Videos

ಕೋಲಾರ: ಬಂಗಾರಪೇಟೆ ಮಾಜಿ ಶಾಸಕ ಸಿ.ವೆಂಕಟೇಶಪ್ಪ ಹೃದಯಾಘಾತದಿಂದ ನಿಧನ

ಪತ್ನಿ, ತಂದೆ, ತಾಯಿ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

click me!