ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

By Suvarna NewsFirst Published Aug 21, 2020, 1:24 PM IST
Highlights

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಹಿಂದಿನಂತೆ ಮತ್ತೊಂದು ಬಾಂಬ್ ಬೆದರಿಕೆ ಒಡ್ಡಲಾಗಿತ್ತು. ಇದೀಗ  ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಮಂಗಳೂರು (ಆ.21):  ಮಂಗಳೂರು ವಿಮಾನ ನಿಲ್ದಾಣಕ್ಕೆ ಇತ್ತೀಚಗೆ ಬಾಂಬ್ ಬೆದರಿಕೆ ಒಡ್ಡಲಾಗಿದ್ದ ಆರೋಪಿ ಬಂಧಿಸಲಾಗಿದ್ದು, ನಂಬರ್ ಟ್ರೇಸ್ ಮಾಡಿ ಆತನ ಬಂಧನ ಮಾಡಲಾಗಿದೆ.

ಮಂಗಳೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಪ್ರಚಾರದ ದೃಷ್ಟಿಯಿಂದ ಆರೋಪಿ ಹುಸಿ ಬಾಂಬ್ ಕರೆ ಮಾಡಿದ್ದಾಗಿ ತಿಳಿಸಿದ್ದಾರೆ.

ಆ.19ರ ಮಧ್ಯಾಹ್ನ ಮಂಗಳೂರು ಏರ್‌ಪೋರ್ಟ್‌ ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಬಳಿಕ ನಂಬರ್ ಟ್ರೇಸ್ ಮಾಡಿ ಆರೋಪಿ ಪತ್ತೆಮಾಡಲಾಗಿತ್ತು.  

ಮಂಗಳೂರು ಏರ್‌ಪೋರ್ಟ್‌ಗೆ ಮತ್ತೊಂದು ಬಾಂಬ್ ಬೆದರಿಕೆ : ಆರೋಪಿ ವಶಕ್ಕೆ..

ಕಾರ್ಕಳ ಮೂಲದ ವಸಂತ ಕುಮಾರ್ ಎಂಬಾತ ಸುಳ್ಳು ಕರೆ ಮಾಡಿ ಬೆದರಿಕೆ ಒಡ್ಡಿದ್ದ. 8ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ವಸಂತ್ ಕುಮಾರ್  ಹಿಂದೆ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಆದರ ಸದ್ಯ ಕೆಲಸ ಬಿಟ್ಟು ಕೃಷಿ ಕೆಲಸ ಮಾಡಿಕೊಂಡಿದ್ದು, ಮೊಬೈಲ್‌ನಲ್ಲಿ ಹೆಚ್ಚು ಮುಳುಗಿರುತ್ತಿದ್ದ. 

ಗೂಗಲ್ ಸರ್ಚ್ ಮಾಡಿ ಏರ್‌ಪೋರ್ಟ್ ಹಳೆಯ ನಿರ್ದೇಶಕರ ನಂಬರ್ ಪಡೆದುಕೊಂಡು ಕರೆ ಮಾಡಿ ಸುಳ್ಳು ಬೆದರಿಕೆ ಒಡ್ಡಿದ್ದಾನೆ. ಈ ಹಿಂದೆ ಆದಿತ್ಯ ರಾವ್ ಎಂಬಾತನೂ ಬಾಂಬ್ ದಾಳಿ ಬೆದರಿಕೆ ಒಡ್ಡಿದ್ದು, ಅದೇ ರೀತಿ ಈತನೂ ಕೃತ್ಯವೆಸಗಿದ್ದಾನೆ. 

ರಾಜ್ಯದ 3 ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ...

ಬಂಧನದ ಬಳಿಕ ವಸಂತ ಕುಮಾರ್ ವಿಚಾರಣೆ ನಡೆಸಿದ್ದು,  ಆದಿತ್ಯ ರಾವ್ ರೀತಿ ತಾನೂ ಪಬ್ಲಿಸಿಟಿ ಪಡೆದುಕೊಳ್ಳುವ ಉದ್ದೇಶದಿಂದ ಹೀಗೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ.  ಸದ್ಯ ಈತನ ವಿರುದ್ಧ ಗಂಭೀರ ಆಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆತನ ಮಾನಸಿಕತೆ ಬಗ್ಗೆ ಮೆಡಿಕಲ್ ರಿಪೋರ್ಟ್ ಬಬೇಕಿದೆ. ಇದೊಂದು ಗಂಭೀರವಾದ ಪ್ರಕರಣವಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಹೇಳಿದ್ದಾರೆ.

click me!