ಗೋವಾ ಪಾರ್ಟಿಗೆ ಪೂರೈಸಲು ವಿದೇಶದಿಂದ ಇದನ್ನ ತರಿಸಿದ್ರು

Kannadaprabha News   | Asianet News
Published : Jan 12, 2020, 07:55 AM IST
ಗೋವಾ ಪಾರ್ಟಿಗೆ ಪೂರೈಸಲು ವಿದೇಶದಿಂದ ಇದನ್ನ ತರಿಸಿದ್ರು

ಸಾರಾಂಶ

ಗೋವಾದ ಪಾರ್ಟಿಗೆ ಪೂರೈಸಲು ಇದನ್ನ ತರಿಸಿದ್ದರು. ಎನ್ ಸಿ ದಾಳಿ ವೇಳೆ ಸಿಕ್ಕಿ ಬಿದ್ದರು. ಹಾಗಾದ್ರೆ ಪೊಲೀಸರು ಸೀಜ್ ಮಾಡಿರೋ ಆ ವಸ್ತು ಏನು..? 

ಬೆಂಗಳೂರು [ಜ.12]:  ಸಂಜಯನಗರದ ಸರ್ವಿಸ್‌ ಅಪಾರ್ಟ್‌ಮೆಂಟ್‌ವೊಂದರ ಮೇಲೆ ದಾಳಿ ನಡೆಸಿದ ಕೇಂದ್ರ ಮಾದಕ ದ್ರವ್ಯ ನಿಗ್ರಹ ದಳ (ಎನ್‌ಸಿಬಿ), ಮೂವರು ಮಾದಕ ವಸ್ತು ಪೂರೈಕೆದಾರರನ್ನು ಬಂಧಿಸಿದೆ.

ಕೇರಳದ ಕಾಸರಗೋಡು ಮೂಲದ ಆಸಿಫ್‌ ಪುತನ್‌, ಮೌಸಿನ್‌ ಹಾಗೂ ಎಂ.ಡಿ.ಅಜರುದ್ದೀನ್‌ ಬಂಧಿತರಾಗಿದ್ದು, ಆರೋಪಿಗಳಿಂದ 1 ಕೆ.ಜಿ. ಚರಸ್‌, 500 ಗ್ರಾಂ ಮೆಥಾಂಫೆಟಮೈನ್‌ ವಶಪಡಿಸಿಕೊಳ್ಳಲಾಗಿದೆ. ವಿದೇಶದಿಂದ ಡ್ರಗ್ಸ್‌ ಖರೀದಿಸಿ ಕೆಲವರು, ಗೋವಾದಲ್ಲಿ ನಡೆಯುವ ಪಾರ್ಟಿಗಳಿಗೆ ಪೂರೈಕೆಗೆ ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿತು. ಈ ಸುಳಿವು ಬೆನ್ನು ಹತ್ತಿದ್ದಾಗ ಆರೋಪಿಗಳ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೂವರು ಹಲವು ದಿನಗಳಿಂದ ಡ್ರಗ್ಸ್‌ ಜಾಲದಲ್ಲಿ ಸಕ್ರಿಯವಾಗಿದ್ದು, ವಿದೇಶದಿಂದ ಚರಸ್‌ ಹಾಗೂ ಮೆಥಾಂಫೆಟಮೈನ್‌ ಸೇರಿದಂತೆ ಇತರೆ ಉತ್ಪನ್ನಗಳು ತರಿಸಿಕೊಳ್ಳುತ್ತಿದ್ದರು. ಬಳಿಕ ಅವುಗಳನ್ನು ಗೋವಾದಲ್ಲಿ ಆಯೋಜನೆಗೊಳ್ಳುವ ಪಾರ್ಟಿಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಆರೋಪಿಗಳು ಸರಬರಾಜು ಮಾಡುತ್ತಿದ್ದರು. 

ಪೊಲೀಸರಿಗೆ ಮಾಹಿತಿ ಕೊಟ್ಟ ಮುಸ್ಲಿಂ ವ್ಯಕ್ತಿ: ಬೆಂಗಳೂರಲ್ಲಿ ಅಕ್ರಮ ಗೋ ಸಾಗಾಟ ಪತ್ತೆ...

ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಯಿತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
click me!

Recommended Stories

ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆಯೇ ‘ಲವ್ ಜಿಹಾದ್’? ಹುಬ್ಬಳ್ಳಿ ಘಟನೆ ಮಾಸುವ ಮುನ್ನವೇ ಕೊಪ್ಪಳದಲ್ಲಿ ಮರುಕಳಿಸಿದ ಕೃತ್ಯ!
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕುಡುಕನ ಅಟ್ಟಹಾಸ; ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್‌ ಮೇಲೆ ಹಲ್ಲೆಗೈದ ಕಿಡಿಗೇಡಿ!