ಮಂಗಳೂರು: ಬ್ಯಾಂಕ್‌ಗಳ ಗ್ರಾಹಕ ವ್ಯವಹಾರ ಸಮಯ ವಿಸ್ತರಣೆ

Published : Oct 01, 2019, 10:05 AM IST
ಮಂಗಳೂರು: ಬ್ಯಾಂಕ್‌ಗಳ ಗ್ರಾಹಕ ವ್ಯವಹಾರ ಸಮಯ ವಿಸ್ತರಣೆ

ಸಾರಾಂಶ

ಮಂಗಳೂರಿನಲ್ಲಿ ರಾಷ್ಟ್ರೀಯ ಬ್ಯಾಂಕ್‌ಗಳ ಗ್ರಾಹಕ ವ್ಯವಹಾರ ಸಮಯ ವಿಸ್ತರಣೆಯಾಗಿದೆ. ಹಣ ಜಮೆ ಮಾಡುವುದು, ವಿತ್‌ ಡ್ರಾ ಮಾಡುವುದು ಸೇರಿದಂತೆ ಇತರ ಬ್ಯಾಂಕ್ ಸೇವೆ ಇನ್ನು ಮುಂದೆ ಸಂಜೆ 4 ಗಂಟೆಯವರೆಗೂ ಗ್ರಾಹಕರಿಗೆ ಲಭ್ಯವಾಗಲಿದೆ.

ಮಂಗಳೂರು(ಅ.01): ಮಂಗಳೂರಿನಲ್ಲಿ ರಾಷ್ಟ್ರೀಯ ಬ್ಯಾಂಕ್‌ಗಳ ಗ್ರಾಹಕ ವ್ಯವಹಾರ ಸಮಯ ವಿಸ್ತರಣೆಯಾಗಿದೆ. ಹಣ ಜಮೆ ಮಾಡುವುದು, ವಿತ್‌ ಡ್ರಾ ಮಾಡುವುದು ಸೇರಿದಂತೆ ಇತರ ಬ್ಯಾಂಕ್ ಸೇವೆ ಇನ್ನು ಮುಂದೆ ಸಂಜೆ 4 ಗಂಟೆಯವರೆಗೂ ಗ್ರಾಹಕರಿಗೆ ಲಭ್ಯವಾಗಲಿದೆ.

ಮೂರು ಗಂಟೆಯ ತನಕ ಕಾರ್ಯ ನಿರ್ವಹಿಸುತ್ತಿದ್ದ ಬ್ಯಾಂಕ್‌ಗಳ ಸಮಯ ವಿಸ್ತರಣೆಯಾಗಿರುವುದು ಗ್ರಾಹಕರಿಗೆ ಬಹಳಷ್ಟು ಉಪಯೋಗವಾಗಲಿದೆ. ಈ ಮೊದಲು ಮೂರು ಗಂಟೆ ಕಳೆದರೆ ಗ್ರಾಹಕರಿಗೆ ಬ್ಯಾಂಕ್‌ನಲ್ಲಿ ಯಾವುದೇ ವ್ಯವಹಾರಗಳಿಗೆ ಅವಕಾಶವಿರಲಿಲ್ಲ. ಹೀಗಿದ್ದಾಗ ಗ್ರಾಮೀಣ ಭಾಗದಲ್ಲಂತೂ ಜನರಿಗೆ ಹೆಚ್ಚಿನ ತೊಂದರೆಯಾಗುತ್ತಿತ್ತು. ಇದೀಗ ಸಮಯ ವಿಸ್ತರಣೆಯಾಗಿರುವುದರಿಂದ ಹೆಚ್ಚಿನ ಗ್ರಾಹಕರಿಗೆ ಅನುಕೂಲವಾಗಲಿದೆ.

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ ಆದೇಶದ ಮೇರೆಗೆ ದ.ಕ. ಜಿಲ್ಲೆಯಲ್ಲಿರುವ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಗಳ ಗ್ರಾಹಕರ ವ್ಯವಹಾರದ ವೇಳೆಯನ್ನು ಏಕರೂಪವಾಗಿ ಕಾರ್ಯ ನಿರ್ವಹಿಸಲು ನಿರ್ಧರಿಸಲಾಗಿದೆ. ಅದರಂತೆ ಅ.1ರಿಂದ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬ್ಯಾಂಕ್‌ಗಳು ಗ್ರಾಹಕ ವ್ಯವಹಾರ ನಡೆಸುವಂತೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಆಗಿರುವ ಸಿಂಡಿಕೇಟ್‌ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರು ತಿಳಿಸಿದ್ದಾರೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC