ತಬ್ಲೀಘಿಗಳಿಗೆ ರಕ್ಷಣೆ ನೀಡಿದ ಆರೋಪ: ಶಾಸಕ ಜಮೀರ್‌ ವಿರುದ್ಧ ದೂರು

By Kannadaprabha NewsFirst Published Apr 24, 2020, 8:17 AM IST
Highlights

ಪಾದರಾಯನಪುರ ವಾರ್ಡ್‌ನಲ್ಲಿನ ಸುಬಾನಿಯಾ ಮಸೀದಿಯಲ್ಲಿ ಇಂಡೋನೇಷ್ಯಾ ಮತ್ತು ಕಿರ್ಗಿಸ್ತಾನದ 19 ಮಂದಿ ತಬ್ಲೀಘಿಗಳಿಗೆ ತಂಗಲು ಅವಕಾಶ| ಇವರ ವಿರುದ್ಧ ಜೆ.ಜೆ.ನಗರ ಠಾಣೆಯಲ್ಲಿ ದೂರು ದಾಖಲು| ತಬ್ಲೀಘಿಗಳಿಂದಾಗಿ ಪಾದರಾಯನಪುರದಲ್ಲಿ ಕೊರೋನಾ ಹೆಚ್ಚಾಗಲು ಕಾರಣ|ವಿದೇಶಿಗರಿಗೆ ಮಸೀದಿಯಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿರುವುದು ದೇಶದ್ರೋಹ ಕಾರ್ಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖ|

ಬೆಂಗಳೂರು(ಏ.24): ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲೀಘಿ ಧರ್ಮ ಸಮ್ಮೇಳನದಲ್ಲಿ ಭಾಗಿಯಾಗಿದ್ದ 19 ವಿದೇಶಿ ತಬ್ಲೀಘಿಗಳಿಗೆ ರಕ್ಷಣೆ ನೀಡಿರುವ ಆರೋಪದ ಮೇಲೆ ಶಾಸಕ ಜಮೀರ್‌ ಅಹಮದ್‌ ಖಾನ್‌, ಬಿಬಿಎಂಪಿ ಸದಸ್ಯ ಇಮ್ರಾನ್‌ ಪಾಷ ಮತ್ತು ಸುಬಾನಿಯಾ ಮಸೀದಿಯ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ಗೆ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕ ಅಧ್ಯಕ್ಷ ಎನ್‌.ಆರ್‌.ರಮೇಶ್‌ ದೂರು ನೀಡಿದ್ದಾರೆ.

ಪಾದರಾಯನಪುರ ವಾರ್ಡ್‌ನಲ್ಲಿನ ಸುಬಾನಿಯಾ ಮಸೀದಿಯಲ್ಲಿ ಇಂಡೋನೇಷ್ಯಾ ಮತ್ತು ಕಿರ್ಗಿಸ್ತಾನದ 19 ಮಂದಿ ತಬ್ಲೀಘಿಗಳಿಗೆ ತಂಗಲು ಅವಕಾಶ ನೀಡಲಾಗಿತ್ತು. ಇವರ ವಿರುದ್ಧ ಜೆ.ಜೆ.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ತಬ್ಲೀಘಿಗಳಿಂದಾಗಿ ಪಾದರಾಯನಪುರದಲ್ಲಿ ಕೊರೋನಾ ಹೆಚ್ಚಾಗಲು ಕಾರಣವಾಗಿದೆ. ಅಲ್ಲದೇ, ಇವರ ವೀಸಾ ಅವಧಿ ಮಾ.31ಕ್ಕೆ ಮುಕ್ತಾಯವಾಗಿದೆ. ಆದರೂ ವಿದೇಶಿಗರಿಗೆ ಮಸೀದಿಯಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿರುವುದು ದೇಶದ್ರೋಹ ಕಾರ್ಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಬ್ರೆಕಿಂಗ್: ಪಾದರಾಯನಪುರದಲ್ಲಿ ಪುಂಡಾಟ; ಪೊಲೀಸರು, ಆರೋಗ್ಯ ಸಿಬ್ಬಂದಿ ಮೇಲೆ ಎರಗಿದ್ರು!

ತಬ್ಲೀಘಿಗಳು ತಮ್ಮ ಕ್ಷೇತ್ರದಲ್ಲಿಯೇ ಇದ್ದರೂ ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದ ಜಮೀರ್‌, ಇಮ್ರಾನ್‌ ಪಾಷ ಹಾಗೂ ಸುಬಾನಿಯ ಮಸೀದಿಯ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
 

click me!