ಖಾಸಗಿ ದರ್ಬಾರ್‌ ಕುಟುಂಬಕ್ಕಷ್ಟೇ ಸೀಮಿತ : ಪ್ರಮೋದಾದೇವಿ

By Kannadaprabha NewsFirst Published Oct 6, 2020, 11:14 AM IST
Highlights

 ಈ ಬಾರಿ ನಡೆಯಲಿರುವ ಮೈಸೂರು ದಸರಾ ಕಾರ್ಯಕ್ರಮದ ಖಾಸಗಿ ದರ್ಬಾರಿಗೆ ರಾಜವಂಶಸ್ಥರಿಗಷ್ಷ್ಟೇ ಅವಕಾಶ ಎಂದು ಪ್ರಮೋದ ದೇವಿ ಒಡೆಯರ್ ಹೇಳಿದ್ದಾರೆ

ಮೈಸೂರು (ಅ.06):  ಕೋವಿಡ್‌-19ರ ಹಿನ್ನೆಲೆಯಲ್ಲಿ ಈ ಬಾರಿ ದಸರೆ ಸಂದರ್ಭದಲ್ಲಿ ಖಾಸಗಿ ದರ್ಬಾರ್‌ ಮತ್ತಿತರ ಪೂಜಾವಿಧಿವಿಧಾನಗಳು ಸಂಪ್ರದಾಯಕ್ಕೆ ಸೀಮಿತವಾಗಿರುತ್ತವೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಸ್ಪಷ್ಟಪಡಿಸಿದ್ದಾರೆ. 

ಮುನ್ನೆಚ್ಚರಿಕೆ ಕ್ರಮ ಅತಿ ಅವಶ್ಯಕವಾಗಿರುವುದರಿಂದ ಆಚರಣೆಯಲ್ಲಿ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ಸಾರ್ವಜನಿಕರು ಹಾಗೂ ಮಾಧ್ಯಮಗಳ ಭಾಗವಹಿಸುವಿಕೆ ಇರುವುದಿಲ್ಲ.

 ಕೋವಿಡ್‌ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಎಲ್ಲರಿಂದ ಸಂಪೂರ್ಣ ಸಹಕಾರ ನಿರೀಕ್ಷಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

'ದಸರೆಗೆ ಹೋಗಬೇಕಂದ್ರೆ 5 ದಿನ ಮುಂಚೆ ಕೋವಿಡ್ ಟೆಸ್ಟ್ ಅಗತ್ಯ' .

ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ದಸರಾಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದ್ದು ವಿವಿಧ ರೀತಿಯ ನಿಯಮಗಳನ್ನು ರೂಪಿಸಲಾಗಿದೆ.

ದಸರಾ ಜಂಬೂ ಸವಾರಿಗೆ 2000 ಸಾವಿರ ಜನರಿಗಷ್ಟೇ ಅವಕಾಶ ನೀಡಲಾಗಿದೆ. ಅಲ್ಲದೇ ದಸರಾಗೆ ಆಗಮಿಸುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ.
 

click me!