ಸಾವಿರ ಜನ ಹೇಳಿದ್ರು ಬೆಂಗಳೂರಿಗೆ ಬನ್ನಿ ಅಂತಾ. ನಾನು ಹಠಕ್ಕೆ ಬಿದ್ದೀದಿನಿ ಕೊರಟಗೆರೆ ಕ್ಷೇತ್ರದಿಂದ್ಲೇ ಸ್ಪರ್ಧೆ ಮಾಡ್ತೀನಿ. 2023ರ ವಿಧಾನಸಭಾ ಚುನಾವಣೆಯು ನನಗೇ ಅಗ್ನಿಪರೀಕ್ಷೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದರು.
ಕೊರಟಗೆರೆ : ಸಾವಿರ ಜನ ಹೇಳಿದ್ರು ಬೆಂಗಳೂರಿಗೆ ಬನ್ನಿ ಅಂತಾ. ನಾನು ಹಠಕ್ಕೆ ಬಿದ್ದೀದಿನಿ ಕೊರಟಗೆರೆ ಕ್ಷೇತ್ರದಿಂದ್ಲೇ ಸ್ಪರ್ಧೆ ಮಾಡ್ತೀನಿ. 2023ರ ವಿಧಾನಸಭಾ ಚುನಾವಣೆಯು ನನಗೇ ಅಗ್ನಿಪರೀಕ್ಷೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಒಕ್ಕಲಿಗರ ಮುಖಂಡರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ತುಮಕೂರಿನ ಸಂಸದರೇ 5 ವರ್ಷದ ನಿಮ್ಮ ಸಾಧನೆಯ ಅಂಕಿಅಂಶ ಜನತೆಗೆ ನೀಡಿ. ಪ್ರಧಾನಿ ಮೋದಿ ಹೆಸರಲ್ಲಿ ಮತ ಕೇಳೊದನ್ನು ಬಿಡಿ. ನಿಮ್ಮ ಅಭಿವೃದ್ಧಿ ಹೆಸರಲ್ಲಿ ಚುನಾವಣೆಗೆ ಬನ್ನಿ. ಕೊರಟಗೆರೆ ಕ್ಷೇತ್ರಕ್ಕೆ ಎಷ್ಟುಸಾರಿ ಬಂದಿದ್ದೀರಾ ಸಂಸದರೇ ನಮಗೇ ಲೆಕ್ಕಾ ಕೋಡಿ. ಭ್ರಷ್ಟಾಚಾರದ 40% ಕಮಿಷನ್ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. 14 ದಿನ ಮಾತ್ರ ಬೊಮ್ಮಾಯಿ ಆಡಳಿತ ಆ ಮೇಲೆ ನಿಮ್ಮ ಅಧಿಕಾರ ಮುಗಿಯುತ್ತೇ ಕಾಯುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಡಾ.ಜಿ.ಪರಮೇಶ್ವರ್ 35 ವರ್ಷದ ರಾಜಕೀಯ ಜೀವನಕ್ಕೆ ಒಕ್ಕಲಿಗ ಸಮಾಜವು ಶ್ರೀರಕ್ಷೆಯಾಗಿದೆ. ಒಕ್ಕಲಿಗ ಸಮಾಜ ನಿಮ್ಮ ಪರವಾಗಿದೆ. ನಾವು ನಿಮ್ಮ ಪರವಾಗಿ ಕೊರಟಗೆರೆ ಕ್ಷೇತ್ರದಲ್ಲಿ ಮತಯಾಚನೆ ಮಾಡ್ತೀವಿ. ನೀವು ವಿಧಾನಸೌಧ ನೋಡಿಕೊಳ್ಳಿ ಎಂಬ ಭರವಸೆಯನ್ನು ನಾವೆಲ್ಲರೂ ನೀಡಬೇಕಿದೆ ಎಂದು ಮನವಿ ಮಾಡಿದರು.
ಕೋಳಾಲ ಜಿಪಂ ಮಾಜಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಮಹಿಳಾಧ್ಯಕ್ಷೆ ಜಯಮ್ಮ, ಯುವಧ್ಯಕ್ಷ ವಿನಯ್, ಜಿಪಂ ಮಾಜಿ ಸದಸ್ಯ ಗಂಗಾಧರಪ್ಪ, ತುಮಲ್ ನಿರ್ದೇಶಕ ಈಶ್ವರಯ್ಯ, ತಾಪಂ ಮಾಜಿ ಅಧ್ಯಕ್ಷ ಕೆಂಪರಾಮಯ್ಯ, ಮಾಜಿ ಸದಸ್ಯ ರವಿಕುಮಾರ್, ಮುಖಂಡರಾದ ಗಟ್ಲಹಳ್ಳಿ ಕುಮಾರ್, ಕಾಮರಾಜು, ವೆಂಕಟೇಶ್, ವೆಂಕಟೇಶಮೂರ್ತಿ, ಕಾಕಿಮಲ್ಲಣ್ಣ ಸೇರಿದಂತೆ ಇತರರು ಇದ್ದರು.
ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಒಕ್ಕಲಿಗ ಸಮುದಾಯ ಇಲ್ಲ. ಒಕ್ಕಲಿಗ ಸಮುದಾಯಕ್ಕೆ ನಿವೇಶನ ಮತ್ತು ಕಟ್ಟಡದ ಅವಶ್ಯಕತೆ ಇದೆ. ಗಂಗಾಕಲ್ಯಾಣ ಮತ್ತು ಸಾಗುವಳಿ ಚೀಟಿಯಲ್ಲಿ ನಮಗೆ ಆದ್ಯತೆ ಅಗತ್ಯ. ಹುಣಸೆ ಬೆಲೆ ಪಾತಾಳಕ್ಕೆ ಕುಸಿತ ಕಂಡಿದೆ, ರೈತರಿಗೆ ನೂತನ ನಿಗಮದ ಅಗತ್ಯವಿದೆ. 2023ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೇ ಯಾವುದೇ ಅನುಮಾನ ಬೇಡ.
ಮುರುಳೀಧರ ಹಾಲಪ್ಪ ಮಾಜಿ ಅಧ್ಯಕ್ಷ, ಕೌಶಲ್ಯಾಭಿವೃದ್ಧಿ ನಿಗಮ