
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ಜು.15): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪರಿಹಾರ ಧನ ಹಣವನ್ನೇ ಮಹಿಳೆಯೊಬ್ಬಳು ವಾಪಸ್ಸು ಎಸೆದಿರುವ ಘಟನೆ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ಜಿಲ್ಲೆ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ನಡೆದ ಗಲಭೆಯಲ್ಲಿ ಗಾಯಗೊಂಡಿದ್ದವರನ್ನ ಭೇಟಿಯಾಗಲು ಬಂದ ವೇಳೆ ಈ ಹೈಡ್ರಾಮಾ ನಡೆದಿದೆ. ಇಂದು ಸಿದ್ದರಾಮಯ್ಯ ಬಾಗಲಕೋಟೆಗೆ ಆಗಮಿಸಿದ ವೇಳೆ ಗಾಯಾಳುಗಳ ಸಂಬಂಧಿಗಳು ಆಕ್ರೋಶ ವ್ಯಕ್ಯಪಡಿಸಿದ್ದಾರೆ. ಗಾಯಾಳುಗಳಿಗೆ ನೀಡಿದ ಹಣವನ್ನೇ ಮರಳಿ ಸಿದ್ದರಾಮಯ್ಯಗೆ ನೀಡಲು ಗಾಯಾಳುಗಳ ಸಂಬಂಧಿಗಳು ಮುಂದಾದ ಪ್ರಸಂಗ ನಡೆದಿದೆ.
ಈ ವೇಳೆ ವಾಹನದಲ್ಲಿ ಸಿದ್ದರಾಮಯ್ಯ ತೆರಳುತ್ತಲೇ ಹಣ ಹಿಡಿದೇ ವಾಹನದ ಹಿಂದೆ ಹೋಗಿ 2 ಲಕ್ಷ ಹಣವನ್ನ ಪೊಲೀಸ್ ಬೆಂಗಾವಲು ವಾಹನಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿದ್ದು ತೀವ್ರ ಮುಜುಗರಕ್ಕೊಳಗಾಗಿದ್ದಾರೆ.
ಬಾಗಲಕೋಟೆ: ಎರಡು ಅನ್ಯಕೋಮಿನ ಗುಂಪುಗಳ ಮಧ್ಯೆ ಗಲಾಟೆ, ಅಂಗಡಿಗಳಿಗೆ ಬೆಂಕಿ , ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ
ಹಣ ಎಸೆದು ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಂ ಮಹಿಳೆ
ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ. ನಂತರ ಯಾವುದೇ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಹಿಂದೂ ಮುಸ್ಲಿಂ ಎನ್ನದೇ ಎಲ್ಲರಿಗೂ ಸಮಾನರಾಗಿ ಕಾಣಬೇಕು. ಆದರೆ ನಾವು ಏನು ತಪ್ಪು ಮಾಡದೆ ಇದ್ದರೂ, ವಿನಾಕಾರಣ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮುಸ್ಲಿಂ ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿಗೆ ಕೆರೂರ ಗುಂಪು ಘರ್ಷಣೆ ನಡೆದ ಹಿನ್ನಲೆಯಲ್ಲಿ ಗಾಯಾಳುಗಳ ಭೇಟಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಆಗಮಿಸಿದ್ದರು. ಬಾಗಲಕೋಟೆ ನಗರದ ಆಶೀರ್ವಾದ ಆಸ್ಪತ್ರೆಗೆ ಸಿದ್ದರಾಮಯ್ಯ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ಹನೀಫ್, ರಾಜೇಸಾಬ್, ರಫೀಕ್, ದಾವಲ್ ಮಲೀಕ್ ಅವರನ್ನು ಆರೋಗ್ಯ ವಿಚಾರಿಸಿದ್ದರು. ಸಿದ್ದರಾಮಯ್ಯ ಆಗಮಿಸಿದ ಹಿನ್ನೆಲೆ ಡಿಸಿ ಸುನೀಲಕುಮಾರ್, ಎಸ್.ಪಿ.ಜಯಪ್ರಕಾಶ್ ಉಪಸ್ಥಿತರಿದ್ದರು. ಇಂದು ಬಾಗಲಕೋಟೆ ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆ ಕಾರ್ಯಕ್ರಮ ಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರದೇ ಕ್ಷೇತ್ರದ ಕೆರೂರು ಪಟ್ಟಣದ ಗಲಾಟೆ ಹಿನ್ನಲೆಯಲ್ಲಿ ಗಾಯಗೊಂಡಿದ್ದವರನ್ನು ಭೇಟಿ ಆಗಲು ಬಂದಾಗ ಈ ಹೈಡ್ರಾಮಾ ಜರುಗಿತು.