ಗ್ರಾಮದ ಶರಣರ ಬಾವಿ ದರ್ಗಾ ಶರೀಫ್‌ನಲ್ಲಿರುವ 3 ಮಜಾರಗಳು ಉಸಿರಾಡುತ್ತಿವೆ. ಪ್ರತೀ ವರ್ಷ ಹಜರತ್ ಸೈಯದ್ ಶಾ ನಸರುದ್ದೀನ್ ನಬಿರಾ ಖಾದ್ರಿ ಉರುಸ್ ವೇಳೆಯೇ ಗೋರಿಗಳು ಉಸಿರಾಡುತ್ತವೆ.
ರಾಯಚೂರು(ಆ.20): ಮುಸ್ಲಿಂ ಧರ್ಮ ಗುರುಗಳ ಗೋರಿಗಳು ಉಸಿರಾಡುತ್ತಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಆನಾಹೊಸೂರು ಗ್ರಾಮದಲ್ಲಿ ನಡೆದಿದೆ. ನೂರಾರು ವರ್ಷಗಳ ಧರ್ಮ ಗುರುಗಳ ಗೋರಿ ಉಸಿರಾಟ ಕುತೂಹಲ ಮೂಡಿಸಿದೆ.
ಗ್ರಾಮದ ಶರಣರ ಬಾವಿ ದರ್ಗಾ ಶರೀಫ್‌ನಲ್ಲಿರುವ 3 ಮಜಾರಗಳು ಉಸಿರಾಡುತ್ತಿವೆ. ಪ್ರತೀ ವರ್ಷ ಹಜರತ್ ಸೈಯದ್ ಶಾ ನಸರುದ್ದೀನ್ ನಬಿರಾ ಖಾದ್ರಿ ಉರುಸ್ ವೇಳೆಯೇ ಗೋರಿಗಳು ಉಸಿರಾಡುತ್ತವೆ.
ಶ್ರೀ ರಾಘವೇಂದ್ರ ಸ್ವಾಮಿ 353ನೇ ಆರಾಧನಾ ಮಹೋತ್ಸವ ಆರಂಭ: ಟಿಟಿಡಿಯ ಶ್ರೀವಾರಿ ಶೇಷವಸ್ತ್ರ ಸಮರ್ಪಣೆ
ಉರುಸ್‌ನ 40 ದಿನಗಳ ಕಾಲ ಮಾತ್ರ ಗೋರಿಗಳು ಉಸಿರಾಡುತ್ತವೆಯಂತೆ. ಗೋರಿಯ ಉಸಿರಾಟದಿಂದ ಹೂಗಳು ಪುಟಿಯುತ್ತವೆ. ಜನರು ಮೂಕವಿಸ್ಮಿತರಾಗಿ ಅಚ್ಚರಿಯಿಂದ ನೋಡುತ್ತಿದ್ದಾರೆ. ಪ್ರತಿ ದಿನ ಸಂಜೆಯಿಂದ ಬೆಳಗಿನವರೆಗೆ ಉಸಿರಾಡುವ ಗೋರಿಗಳನ್ನು ಕಂಡು ಜನರು ಅಚ್ಚರಿಪಟ್ಟಿದ್ದಾರೆ. ಗೋರಿಗಳ ಉಸಿರಾಟ ನಿಜಕ್ಕೂ ವಿಜ್ಞಾನ ಲೋಕಕ್ಕೂ ಸವಾಲಾಗಿದೆ.