ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಸಂಪ್ರೋಕ್ಷಣೆಗೆ ಮುಸ್ಲಿಂ ವ್ಯಕ್ತಿ!

Kannadaprabha News   | Asianet News
Published : Apr 02, 2021, 03:42 PM ISTUpdated : Apr 02, 2021, 03:57 PM IST
ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಸಂಪ್ರೋಕ್ಷಣೆಗೆ ಮುಸ್ಲಿಂ ವ್ಯಕ್ತಿ!

ಸಾರಾಂಶ

ಸ್ವತಃ ರಂಗನಾಥಸ್ವಾಮಿಯೇ ಇಲ್ಲಿ ಪ್ರತ್ಯಕ್ಷನಾಗಿ ತಮ್ಮ ಪೂಜೆಗೆ ಈ ವ್ಯಕ್ತಿಯನ್ನು ಆಹ್ವಾನಿಸಿದ್ದರಂತೆ. ಅಂದಿನಿಂದ ಇಲ್ಲಿನ ದೇವಾಲಯದ ಪೂಜಾ ಪ್ರಕ್ರಿಯೆಯಲ್ಲಿ ಈ ಮುಸ್ಲಿಂ ವ್ಯಕ್ತಿ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. 

ವರದಿ : ದೇವರಾಜು ಕಪ್ಪಸೋಗೆ
 
 ಚಾಮರಾಜನಗರ (ಏ.02):
 ಭಕ್ತಿಗೆ, ದೇವರ ಸೇವೆಗೆ ಜಾತಿ- ಧರ್ಮದ ಹಂಗಿಲ್ಲ ಎಂಬುದಕ್ಕೆ ನಿದರ್ಶನದಂತೆ ಯಳಂದೂರಿನ ತಾಲೂಕಿನ ಬಿಳಿಗಿರಿರಂಗನ ದೇವಾಲಯದ ಸಂಪ್ರೋಕ್ಷಣಾ ಪೂಜೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಭಾಗಿಯಾಗಿದ್ದಾರೆ.

ಹೌದು.., ವಿಶೇಷ ಡಿಸಿಯಾಗಿ ನಿವೃತ್ತಿ ಹೊಂದಿದ ಹುಟ್ಟಿನಿಂದ ಮುಸ್ಲಿಂ ಆದರೂ ಹೃದಯ ವೈಶಾಲ್ಯತೆಯಿಂದ ಬಿಳಿಗಿರಿರಂಗನ ಭಕ್ತರಾಗಿದ್ದಾರೆ. ಇವರ ಭಕ್ತಿಯನ್ನು ಜನರು ಕೂಡ ಒಪ್ಪಿಕೊಂಡಿದ್ದಾರೆ.

1986 ರಲ್ಲಿ ಎಚ್‌.ಎಂ. ಮುಜಿಬ್‌ ಅಹಮದ್‌ ಯಳಂದೂರು ತಹಸೀಲ್ದಾರ್‌ ಆಗಿದ್ದ ವೇಳೆ ಬಿಳಿಗಿರಿರಂಗನ ಮೂರ್ತಿ ಅಲುಗಾಡುತ್ತಿದೆ ಎಂದು ಅರ್ಚಕರು ತಿಳಿಸುತ್ತಾರೆ. ಕೂಡಲೇ, ಮುತುವರ್ಜಿ ವಹಿಸಿ ಮುಜರಾಯಿ ಇಲಾಖೆಯಿಂದ ನೂತನ ಮೂರ್ತಿ ಮಾಡಿಸಿ ಪುನರ್‌ ಪ್ರತಿಷ್ಠಾಪನೆಗೆ ಎಳ್ಳಷ್ಟುತೊಂದರೆಯಾಗದಂತೆ ನಿಗಾ ವಹಿಸುತ್ತಾರೆ.

ಕೊರಗಜ್ಜನ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹ : ಓರ್ವ ಸಾವು- ಮತ್ತಿಬ್ಬರು ಶರಣು .

ಬೆಳ್ಳಂಬೆಳಗ್ಗೆ ದೇವರ ದರ್ಶನ: ದೇವರ ಪುನರ್‌ ಪ್ರತಿಷ್ಠಾಪನೆ ನೇತೃತ್ವ ವಹಿಸಿ ಪೂಜೆಗೆ ಕೂರಬೇಕೆಂದು ಅರ್ಚಕರು, ಆಗಮಿಕರು ತಿಳಿಸಿದ್ದರಿಂದ ಹುಟ್ಟಿನಿಂದ ಮುಸ್ಲಿಂ ಆಗಿ ಹಿಂದೂ ದೇವರ ಪೂಜೆಯ ನೇತೃತ್ವ ವಹಿಸಬಹುದೇ, ಪೂಜೆಗೆ ಕುಳಿತುಕೊಳ್ಳಬಹುದೇ ಎಂಬ ಆತಂಕ, ಅಳಕು ಮುಜೀಬ್‌ ಅವರನ್ನು ಕಾಡುತ್ತದೆ ತಮ್ಮ ನಿವಾಸಕ್ಕೆ ಅಂದಾಜು 7 ರ ಸುಮಾರಿಗೆ ಇಬ್ಬರು ಬ್ರಾಹ್ಮಣ ವ್ಯಕ್ತಿಗಳು ಮನೆ ಬಾಗಿಲಿನಲ್ಲಿ ನಿಂತು ಏಕಾಏಕಿ ಇಬ್ಬರು ಒಂದು ದೇಹವಾಗಿ ಮಾರ್ಪಾಡಾಗಿ’ ನಿನ್ನ ಸೇವೆಗಾಗಿ 1000 ವರ್ಷದಿಂದ ಕಾಯುತ್ತಿದ್ದೇನೆ, ಕಾರ್ಯ ನಿರ್ವಹಿಸು’ ಎಂದು ಹೇಳಿ ಬೃಹದಾಕಾರವಾಗಿ ಆಕೃತಿಯಾಗಿ ಬೆಳೆದು ಅಂತರ್ಧಾನವಾಗುತ್ತಾರೆ.

ಇದನ್ನು ಕಂಡ ಮುಜೀಬ್‌ ಮೂಕವಿಸ್ಮಿತರಾಗಿ ದೇವರ ನಿಶ್ಚಯದಂತೆ ನಡೆಯಲಿ ಎಂದು ಪೂಜೆಯ ನೇತೃತ್ವ ವಹಿಸಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ಮುಗಿಸುತ್ತಾರೆ. ಜೊತೆಗೆ, ಬಿಳಿಗಿರಿರಂಗನ ಆರಾಧ್ಯ ಭಕ್ತರಾಗುತ್ತಾರೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ