ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಬಂದವರಿಂದಲೇ ಕೊರೋನಾ ಸೋಂಕು ಹೆಚ್ಚುತ್ತಿದೆ. ಆದ್ದರಿಂದ ಅವರಿಗೆ ಆನ್‌ಲೈನ್ ಪಾಸ್ ನೀಡುವುದನ್ನು ಕಡಿಮೆ ಮಾಡುವಂತೆ ತಾನು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮಾತನಾಡಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿ(ಜೂ.06): ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಬಂದವರಿಂದಲೇ ಕೊರೋನಾ ಸೋಂಕು ಹೆಚ್ಚುತ್ತಿದೆ. ಆದ್ದರಿಂದ ಅವರಿಗೆ ಆನ್‌ಲೈನ್ ಪಾಸ್ ನೀಡುವುದನ್ನು ಕಡಿಮೆ ಮಾಡುವಂತೆ ತಾನು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮಾತನಾಡಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಗೆ ಮಹಾರಾಷ್ಟ್ರದಿಂದ ಸುಮಾರು 13 ಸಾವಿರ ಜನರು ಬಂದಿದ್ದಾರೆ. ಆಮೇಲೆ ಅವರಿಗೆ ಪಾಸ್ ನೀಡುವುದನ್ನು ನಿಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಮತ್ತೆ ಪಾಸ್ ನೀಡಲಾಗುತ್ತಿದೆ.
ಗ್ರೀನ್ ಝೋನ್ ಆಗಿದ್ದ ಉಡುಪಿಯಲ್ಲಿ ಮುಂದುವರಿದ ಕೊರೋನಾ ಅಟ್ಟಹಾಸ: ಒಂದೇ ದಿನ 204 ಸೋಂಕಿತರು
ಒಂದು ವಾರದಲ್ಲಿ 280 ಮಂದಿಗೆ ಪಾಸ್ ನೀಡಲಾಗಿದ್ದು, ಅವರೆಲ್ಲರೂ ಊರಿಗೆ ಬಂದಿದ್ದಾರೆ. ಸದ್ಯಕ್ಕೆ ಪಾಸ್ ನೀಡುವುದನ್ನು ಕಡಿಮೆ ಮಾಡಿ, ಜಿಲ್ಲೆಯಲ್ಲಿರುವ ಸೋಂಕಿತರೆಲ್ಲರೂ ಗುಣಮುಖರಾದ ಮೇಲೆ ಉಳಿದವರಿಗೆ ಪಾಸ್ ನೀಡುವಂತೆ ಸಲಹೆ ನೀಡಿದ್ದೇನೆ ಎಂದರು.
ಮಹಾರಾಷ್ಟ್ರದಲ್ಲಿರುವವರೂ ನಮ್ಮವರೇ. ಆದರೂ ಇಲ್ಲಿ ಕೊರೋನಾ ಹೆಚ್ಚುತ್ತಿರುವುದರಿಂದ ಅವರು ಊರಿಗೆ ಬರುವುದಕ್ಕೆ ಸ್ವಲ್ಪ ತಾಳ್ಮೆ ವಹಿಸಬೇಕು ಎಂದು ಸಂಸದೆ ಮನವಿ ಮಾಡಿದರು.