ಬೀದರ್ ರೈಲ್ವೆ ನಿಲ್ದಾಣದ ಆವರಣದಲ್ಲಿ 100 ಅಡಿ ಎತ್ತರದ ರಾಷ್ಟ್ರಧ್ವಜ ಸ್ಥಂಭ ಲೋಕಾರ್ಪಣೆ| ಸಿಕಿಂದ್ರಾಬಾದ್‌ನಿಂದ ಹುಬ್ಬಳ್ಳಿಗೆ ರೈಲು ಬೀದರ್ ಮಾರ್ಗವಾಗಿ ಸಾಗಲು ಸಿಕ್ಕ ಪರವಾನಿಗೆ|
ಬೀದರ್(ಜ.27): ಬೀದರ್-ಬೆಂಗಳೂರು ರೈಲು ಸೇವೆಯನ್ನು ವಿಕಾರಾಬಾದ್ ಬದಲು ಕಲಬುರಗಿ ಮಾರ್ಗವಾಗಿ ವಾರಕ್ಕೆ ನಾಲ್ಕು ದಿನ ಸಾಗಲು ರೈಲ್ವೆ ಬೋರ್ಡ್ ಒಪ್ಪಿಗೆ ಸೂಚಿಸಿದ್ದು, ಬರುವ ಜೂನ್ ಅಂತ್ಯದೊಳಗಾಗಿ ಈ ಸೇವೆಯನ್ನು ಜಿಲ್ಲೆಯ ಜನತೆಗೆ ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.
ಇಲ್ಲಿನ ರೈಲ್ವೆ ನಿಲ್ದಾಣದ ಆವರಣದಲ್ಲಿ 100 ಅಡಿ ಎತ್ತರದ ರಾಷ್ಟ್ರಧ್ವಜ ಸ್ಥಂಭವನ್ನು ಲೋಕಾರ್ಪಣೆ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಕಿಂದ್ರಾಬಾದ್‌ನಿಂದ ಹುಬ್ಬಳ್ಳಿಗೆ ರೈಲು ಬೀದರ್ ಮಾರ್ಗವಾಗಿ ಸಾಗಲು ಸಹ ಪರವಾನಿಗೆ ಸಿಕ್ಕಿದ್ದು ಅತೀ ಶೀಘ್ರದಲ್ಲಿ ಅದಕ್ಕೆ ಚಾಲನೆ ಸಿಗಲಿದ್ದು ಈಗಾಗಲೇ ಅಗತ್ಯ ಪರವಾನಿಗೆಗಳು ಸಿಗುತ್ತಲಿವೆ ಈ ರೈಲ್‌ನ್ನು ಬೆಳಗಾವಿವರೆಗೆ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದಕ್ಷಿಣ ಮಧ್ಯ ರೈಲ್ವೆಯ ವಿಭಾಗದ 15 ರೈಲು ನಿಲ್ದಾಣಗಳಲ್ಲಿ 100 ಅಡಿ ಎತ್ತರದ ಧ್ವಜ ಸ್ಥಂಭ, ರಾಷ್ಟ್ರಧ್ವಜ ತಿರಂಗಾ ಹಾರಾಟ ನಡೆಯಬೇಕಿದ್ದು ಸಧ್ಯ 3 ಕ್ಕೆ ಚಾಲನೆ ನೀಡಲಾಗಿದ್ದು ಅದರ ಪೈಕಿ ಬೀದರ್ ಕೂಡ ಒಂದು. ಇದು ದೇಶ ಪ್ರೇಮದ ಹಾಗೂ ನಮಗೆಲ್ಲರಿಗೂ ಹೆಮ್ಮೆ ತರುವಂಥ ಕಾರ್ಯ ಎಂದರು.
ಬೀದರ್, ಭಾಲ್ಕಿ, ಹುಮನಾಬಾದ್ ಹಾಗೂ ಕಮಲನಗರದಲ್ಲಿ ರೈಲ್ವೆ ಮೇಲ್ಸೇತುವೆ ಕೆಲಸ ಪ್ರಗತಿಯಲ್ಲಿದೆ, ಕಮಲನಗರದಲ್ಲಿ ಪ್ಲಾಟಾಫಾರಂ ವಿಸ್ತರಿಸಲಾಗಿದ್ದು 24 ಬೋಗಿಗಳುಳ್ಳ ರೈಲು ನಿಲ್ಲಲು ಅವಕಾಶ ಕಲ್ಪಿಸಲಾಗಿದೆ. ಕಮಲನಗರದಲ್ಲಿ 10ಲಕ್ಷ ರು. ವೆಚ್ಚದಲ್ಲಿ ವಿಶ್ರಾಂತಿ ಕೋಣೆ ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದರು.
ಕಳೆದ ಐದೂವರೆ ವರ್ಷದಲ್ಲಿ ಇಡೀ ಬೀದರ್ ರೈಲು ನಿಲ್ದಾಣದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸುಮಾರು 1 ಕೋಟಿ ರು.ಗಳ ವೆಚ್ಚದಲ್ಲಿ ಎರಡು ಲಿಫ್ಟ್ ಗಳನ್ನು ಅಳವಡಿಸಿದ್ದು, ಗಾಂಧಿಗಂಜ್ ಮಾರ್ಗದ ರಸ್ತೆಯಲ್ಲಿ 90 ಲಕ್ಷ ರು.ವೆಚ್ಚದಲ್ಲಿ ರಸ್ತೆ ವಿಭಜಕ, ರಸ್ತೆ ನಿರ್ಮಾಣ ಮಾಡಿ ಟಿಕೆಟ್ ಕೌಂಟರ್ ಆರಂಭಿಸಿಸಿದ್ದೇನೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಶಾಸಕ ರಘುನಾಥ ಮಲ್ಕಾಪೂರೆ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬಾಬು ವಾಲಿ, ಈಶ್ವರಸಿಂಗ್ ಠಾಕೂರ್ ಇದ್ದರು.