ರಸ್ತೆಗೆ ವೈಟ್ ಟಾಪಿಂಗ್‌ ಕಾಮಗಾರಿ : ಮಾರ್ಗ ಬದಲಾವಣೆ

Published : May 19, 2019, 09:13 AM IST
ರಸ್ತೆಗೆ ವೈಟ್ ಟಾಪಿಂಗ್‌ ಕಾಮಗಾರಿ : ಮಾರ್ಗ ಬದಲಾವಣೆ

ಸಾರಾಂಶ

ಬೆಂಗಳೂರಿನ ಈ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾರ್ಯ ಆರಂಭಿಸಲು ಮಾರ್ಗ ಬದಲಾಯಿಸಲಾಗುತ್ತಿದೆ. 

ಬೆಂಗಳೂರು :  ನಗರದ ಮದರ್‌ ಥೆರೆಸಾ ರಸ್ತೆಯಲ್ಲಿ ಬಿಬಿಎಂಪಿ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರ್ಯಾಯ ಮಾರ್ಗದಲ್ಲಿ ತೆರಳುವಂತೆ ಬಿಬಿಎಂಪಿ ಮನವಿ ಮಾಡಿದೆ.

ಮದರ್‌ ಥೇರೆಸಾ ರಸ್ತೆಯ ಜಿಕೆಟಿ ರಸ್ತೆಯಿಂದ ಬಜಾರ್‌ ಸ್ಟ್ರೀಟ್‌ವರೆಗೆ ಒಟ್ಟು 650 ಮೀಟರ್‌ ಉದ್ದವಿದ್ದ ರಸ್ತೆಯನ್ನು ವೈಟ್‌ ಟಾಪಿಂಗ್‌ ರಸ್ತೆಯಾಗಿ ಅಭಿವೃದ್ಧಿ ಪಡಿಸುವುದಕ್ಕೆ ಯೋಜನೆ ರೂಪಿಸಿದೆ. 

45 ದಿನದೊಳಗಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಬಿಬಿಎಂಪಿ ತಿಳಿಸಿದೆ. ವಾಹನ ಸವಾರರ ಸಂಚಾರಕ್ಕೆ ಅಗುವ ಅನಾನುಕೂಲವನ್ನು ತಪ್ಪಿಸಲು ಪಾಲಿಕೆ ಪರ್ಯಾಯ ಮಾರ್ಗ ಕಲ್ಪಿಸಿದ್ದು, ಮಧರ್‌ ಥೆರೆಸಾ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗವಾಗಿ ಲೋವರ್‌ ಅಗರಂ ರಸ್ತೆಯಿಂದ ವಿಕ್ಟೋರಿಯ ರಸ್ತೆ ಮುಖಾಂತರ ಜನರಲ್‌ ತಿಮ್ಮಯ ರಸ್ತೆಯವರೆಗೆ ತಲುಪುವಂತೆ ಸೂಚಿಸಲಾಗಿದೆ.

PREV
click me!

Recommended Stories

ಗೃಹಲಕ್ಷ್ಮೀ ಪ್ರಕರಣ ಬೆಳಕಿಗೆ ತಂದ ಶಾಸಕ ಮಹೇಶ ಟೆಂಗಿನಕಾಯಿಗೆ ಭರ್ಜರಿ ಸ್ವಾಗತ
ಗ್ಯಾರಂಟಿ ಎಫೆಕ್ಟ್: ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಉಗ್ರಪ್ಪ ಆತಂಕ; ಸತ್ಯ ಒಪ್ಪಿಕೊಂಡರಾ ಕಾಂಗ್ರೆಸ್ ಹಿರಿಯ ನಾಯಕ?