ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆ: ಇನ್ನೂ 3 ದಿನ ವರುಣನ ಅಬ್ಬರ..!

By Kannadaprabha News  |  First Published May 21, 2024, 12:00 PM IST

ಕಳೆದ 7 ದಿನಗಳಲ್ಲಿ ಬೆಂ.ಗ್ರಾ ಜಿಲ್ಲೆಯಲ್ಲಿ 68 ಮಿಲಿಮೀಟರ್ ಮಳೆಯಾಗಿದ್ದು, ಸರಾಸರಿಗಿಂತಲೂ ದುಪ್ಪಟ್ಟಾಗಿದೆ. ಮುಂಗಾರು ಪೂರ್ವದಲ್ಲಿ ಜಿಲ್ಲೆಯಲ್ಲಿ ಸುಮಾರು 100 ಮಿಮೀ ಮಳೆಯಾಗುವುದು ವಾಡಿಕೆ. ಆದರೆ ಈಗಾಗಲೇ 112 ಮಿಮೀ ಮಳೆಯಾಗಿದ್ದು, 12 ಮಿಮೀ ಹೆಚ್ಚಿನ ಮಳೆ ಸುರಿದಿದೆ.


ಕೆ.ಆರ್.ರವಿಕಿರಣ್

ದೊಡ್ಡಬಳ್ಳಾಪುರ(ಮೇ.21):  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಳೆದ 7 ದಿನಗಳಿಂದೀಚೆಗೆ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. ಭಾನುವಾರ ಒಂದೇ ದಿನ ಜಿಲ್ಲೆಯಲ್ಲಿ ಸರಾಸರಿ 16.9 ಮಿಲಿಮೀಟರ್ ಮಳೆಯಾಗಿದ್ದು, ಇದು ಒಂದು ದಿನದಲ್ಲಿ ಸಾಮಾನ್ಯವಾಗಿ ಸುರಿಯುವ 2.8 ಮಿಮೀಗಿಂತಲೂ 5 ಪಟ್ಟು ಅಧಿಕ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Tap to resize

Latest Videos

ಕಳೆದ 7 ದಿನಗಳಲ್ಲಿ ಬೆಂ.ಗ್ರಾ ಜಿಲ್ಲೆಯಲ್ಲಿ 68 ಮಿಲಿಮೀಟರ್ ಮಳೆಯಾಗಿದ್ದು, ಸರಾಸರಿಗಿಂತಲೂ ದುಪ್ಪಟ್ಟಾಗಿದೆ. ಮುಂಗಾರು ಪೂರ್ವದಲ್ಲಿ ಜಿಲ್ಲೆಯಲ್ಲಿ ಸುಮಾರು 100 ಮಿಮೀ ಮಳೆಯಾಗುವುದು ವಾಡಿಕೆ. ಆದರೆ ಈಗಾಗಲೇ 112 ಮಿಮೀ ಮಳೆಯಾಗಿದ್ದು, 12 ಮಿಮೀ ಹೆಚ್ಚಿನ ಮಳೆ ಸುರಿದಿದೆ.

ಕರ್ನಾಟಕದ 15 ಜಿಲ್ಲೆಗಳಲ್ಲಿ ಅಬ್ಬರಿಸಿದ ವರುಣ, ಸಿಡಿಲಿಗೆ ಇಬ್ಬರು ಬಲಿ: ಇಂದೂ ಕೂಡ ಭಾರೀ ಮಳೆ..!

ದೇವನಹಳ್ಳಿ ತಾಲೂಕಿನಲ್ಲಿ ಅತ್ಯಧಿಕ ಮಳೆ:

ದೇವನಹಳ್ಳಿ ತಾಲೂಕಿನಲ್ಲಿ ಭಾನುವಾರ ಒಂದೇ ದಿನ 29.9 ಮಿಮೀ ಮಳೆ ಸುರಿದಿದೆ. ಇದು ದಿನದ ಸರಾಸರಿ ವಾಡಿಕೆಗಿಂತ 13 ಪಟ್ಟು ಹೆಚ್ಚು ಎನ್ನಲಾಗಿದ್ದು, ಕಳೆದ 1 ವಾರದಲ್ಲಿ 62.9 ಮಿಮೀ ಮಳೆಯಾಗಿದೆ. ಸಾಮಾನ್ಯವಾಗಿ 18 ಮಿಮೀ ಮಳೆಯಾಗುವುದು ವಾಡಿಕೆ. ಹೀಗಾಗಿ ದುಪ್ಪಟ್ಟು ಮಳೆ ಸುರಿದಂತಾಗಿದೆ. ಮುಂಗಾರು ಪೂರ್ವ ಮಳೆ ಸರಾಸರಿ 100.8 ಮಿಮೀನಷ್ಟಿದ್ದು, ಈಗಾಗಲೇ 123.4 ಮಿಮೀ ಮಳೆಯಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭಾನುವಾರ 9.6 ಮಿಮೀ ಮಳೆ ಸುರಿದಿದೆ. ಇದು ದಿನದ ಸರಾಸರಿ ವಾಡಿಕೆಗಿಂತ ಒಂದೂವರೆ ಪಟ್ಟು ಹೆಚ್ಚು ಎನ್ನಲಾಗಿದ್ದು, ಕಳೆದ 1 ವಾರದಲ್ಲಿ 84.7 ಮಿಮೀ ಮಳೆಯಾಗಿದೆ. ಸಾಮಾನ್ಯವಾಗಿ 23.5 ಮಿಮೀ ಮಳೆಯಾಗುವುದು ವಾಡಿಕೆ. ಹೀಗಾಗಿ ಎರಡೂವರೆ ಪಟ್ಟು ಅಧಿಕ ಮಳೆ ಸುರಿದಂತಾಗಿದೆ. ಮುಂಗಾರು ಪೂರ್ವ ಮಳೆ ಸರಾಸರಿ 98.9 ಮಿಮೀನಷ್ಟಿದ್ದು, ಈಗಾಗಲೇ 111.9 ಮಿಮೀ ಮಳೆಯಾಗಿದೆ.

ಹೊಸಕೋಟೆ ತಾಲೂಕಿನಲ್ಲಿ ಭಾನುವಾರ ಒಂದೇ ದಿನ 19.3 ಮಿಮೀ ಮಳೆ ಸುರಿದಿದೆ. ಇದು ದಿನದ ಸರಾಸರಿ ವಾಡಿಕೆಗಿಂತ 9 ಪಟ್ಟು ಹೆಚ್ಚು ಎನ್ನಲಾಗಿದ್ದು, ಕಳೆದ 1 ವಾರದಲ್ಲಿ 54.3 ಮಿಮೀ ಮಳೆಯಾಗಿದೆ. ಸಾಮಾನ್ಯವಾಗಿ 22.4 ಮಿಮೀ ಮಳೆಯಾಗುವುದು ವಾಡಿಕೆ. ಹೀಗಾಗಿ ದುಪ್ಪಟ್ಟು ಮಳೆ ಸುರಿದಂತಾಗಿದೆ. ಮುಂಗಾರು ಪೂರ್ವ ಮಳೆ ಸರಾಸರಿ 99.8 ಮಿಮೀನಷ್ಟಿದ್ದು, ಈಗಾಗಲೇ 116.1 ಮಿಮೀ ಮಳೆಯಾಗಿದೆ.

4 ದಿನಗಳ ಬಳಿಕ ಮತ್ತೆ ಬೆಂಗ್ಳೂರಲ್ಲಿ ವರುಣನ ಆರ್ಭಟ..!

ನೆಲಮಂಗಲ ತಾಲೂಕಿನಲ್ಲಿ ಭಾನುವಾರ 13.6 ಮಿಮೀ ಮಳೆ ಸುರಿದಿದೆ. ಇದು ದಿನದ ಸರಾಸರಿ ವಾಡಿಕೆಗಿಂತ 3 ಪಟ್ಟು ಹೆಚ್ಚು ಎನ್ನಲಾಗಿದ್ದು, ಕಳೆದ 1 ವಾರದಲ್ಲಿ 62.3 ಮಿಮೀ ಮಳೆಯಾಗಿದೆ. ಸಾಮಾನ್ಯವಾಗಿ 30.1 ಮಿಮೀ ಮಳೆಯಾಗುವುದು ವಾಡಿಕೆ. ಹೀಗಾಗಿ ದುಪ್ಪಟ್ಟು ಮಳೆ ಸುರಿದಂತಾಗಿದೆ. ಮುಂಗಾರು ಪೂರ್ವ ಮಳೆ ಸರಾಸರಿ 140.5 ಮಿಮೀನಷ್ಟಿದ್ದು, ಸದ್ಯ 98.3 ಮಿಮೀ ಮಳೆಯಾಗಿದೆ. ನೆಲಮಂಗಲದಲ್ಲಿ ಮುಂಗಾರು ಪೂರ್ವದಲ್ಲಿ ಶೇ.30ರಷ್ಟು ಮಳೆ ಕೊರತೆ ಇದೆ.

ಇನ್ನೂ 3 ದಿನ ಮಳೆ ನಿರೀಕ್ಷೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಇನ್ನೂ ಮೂರು ದಿನ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಗರ ಪ್ರದೇಶಗಳಲ್ಲಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದ್ದು, ಸ್ಥಳೀಯ ಆಡಳಿತಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಅಗತ್ಯವಾಗಿದೆ.

click me!