Covid-19 Crisis: ರಾಜಧಾನಿಯ 101 ವಾರ್ಡ್‌ಗಳಲ್ಲಿ 500ಕ್ಕೂ ಹೆಚ್ಚು ಕೊರೋನಾ ಕೇಸ್‌

By Kannadaprabha NewsFirst Published Jan 22, 2022, 3:30 AM IST
Highlights

ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಮಿತಿಮೀರುತ್ತಿದ್ದು, ಈ ಪೈಕಿ 101 ವಾರ್ಡ್‌ಗಳಲ್ಲಿ 500ಕ್ಕಿಂತ ಹೆಚ್ಚು ಕೇಸ್‌ಗಳಿದ್ದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಬೆಂಗಳೂರು (ಜ.22): ಪಾಲಿಕೆ ವ್ಯಾಪ್ತಿಯ (BBMP) 198 ವಾರ್ಡ್‌ಗಳಲ್ಲಿ ಕೊರೋನಾ (Coronavirus) ಸೋಂಕಿತರ ಪ್ರಮಾಣ ಮಿತಿಮೀರುತ್ತಿದ್ದು, ಈ ಪೈಕಿ 101 ವಾರ್ಡ್‌ಗಳಲ್ಲಿ 500ಕ್ಕಿಂತ ಹೆಚ್ಚು ಕೇಸ್‌ಗಳಿದ್ದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಎಲ್ಲೆಡೆ ಕೋವಿಡ್‌ (Covid19) ಮಾರ್ಗಸೂಚಿಗಳು ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚಿದೆ. ಇದರಿಂದಾಗಿ ಸೋಂಕಿತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಪ್ರತಿ ಬಡಾವಣೆಗಳಲ್ಲೂ ಸೋಂಕಿತರು ಜಾಸ್ತಿಯಾಗುತ್ತಲೇ ಇದ್ದಾರೆ. ಮುಖ್ಯವಾಗಿ ಮಹದೇವಪುರ, ಬೊಮ್ಮನಹಳ್ಳಿ, ಪಶ್ಚಿಮ, ದಕ್ಷಿಣ ವಲಯಗಳ ವಾರ್ಡ್‌ಗಳಲ್ಲಿ ದಿನಕ್ಕೆ 200ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.

33 ವಾರ್ಡಲ್ಲಿ 1000ಕ್ಕೂ ಹೆಚ್ಚು ಕೇಸ್‌: ಬೇಗೂರು, ಹಗದೂರು, ಬೆಳ್ಳಂದೂರು, ಅರಕೆರೆ, ದೊಡ್ಡನೆಕ್ಕುಂದಿ, ಕೊನೇನ ಅಗ್ರಹಾರ, ರಾಜರಾಜೇಶ್ವರಿ ನಗರ, ಅಟ್ಟೂರು, ವಿದ್ಯಾರಣ್ಯಪುರ, ವಸಂತಪುರ, ವರ್ತೂರು, ಜ್ಞಾನಭಾರತಿ, ಕೆಂಪೇಗೌಡ ವಾರ್ಡ್‌, ಹೆಮ್ಮಿಗೇಪುರ, ಶಾಂತಲಾನಗರ, ಉತ್ತರಹಳ್ಳಿ, ಕೊಟ್ಟಿಗೆಪಾಳ್ಯ, ಬಾಣಸವಾಡಿ, ಹೊಯ್ಸಳ ನಗರ, ಹೂಡಿ ಸೇರಿದಂತೆ 33 ವಾರ್ಡ್‌ಗಳಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

Corona Compensation: ಸರ್ಕಾರದ ಕೋವಿಡ್‌ ಪರಿಹಾರ ಚೆಕ್‌ ಬೌನ್ಸ್‌..!

ಕುವೆಂಪು ನಗರ, ಶೆಟ್ಟಿಹಳ್ಳಿ, ಬಾಗಲಗುಂಟೆ, ಅರಮನೆ ನಗರ, ಚೊಕ್ಕಸಂದ್ರ, ದೊಡ್ಡಬಿದರೆಕಲ್ಲು, ರಾಧಾಕೃಷ್ಣ ದೇವಸ್ಥಾನ, ಸಂಜಯನಗರ, ಗರುಡಾಚಾರ್‌ಪಾಳ್ಯ, ಕಾಡುಗೋಡಿ, ಮಾರತಹಳ್ಳಿ, ಜೀವನ್‌ ಬೀಮಾನಗರ, ವಸಂತನಗರ, ಗಾಂಧಿನಗರ, ದೊಮ್ಮಲೂರು, ಆಡುಗೋಡಿ, ಸುದ್ದಗುಂಟೆಪಾಳ್ಯ, ಕೆಂಗೇರಿ, ಬಿಟಿಎಂ ಲೇಔಟ್‌, ಪಾದರಾಯನಪಾಳ್ಯ, ಜೆ.ಪಿ.ನಗರ, ಬಿಳೇಕಹಳ್ಳಿ, ಪುಟ್ಟೇನಹಳ್ಳಿ ಸೇರಿದಂತೆ 66 ವಾರ್ಡ್‌ಗಳಲ್ಲಿ 500ರಿಂದ ಸಾವಿರದವರೆಗೂ ಪ್ರಕರಣಗಳು ದಾಖಲಾಗಿವೆ.

ಉಳಿದಂತೆ 64 ವಾರ್ಡ್‌ಗಳಲ್ಲಿ 250ರಿಂದ 500 ಮಂದಿಗೆ ಸೋಂಕು ತಗುಲಿದ್ದು, 7 ವಾರ್ಡ್‌ಗಳಲ್ಲಿ 1ರಿಂದ 100 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಸೋಂಕು ಪತ್ತೆಯಾಗುತ್ತಿರುವ ಆಧಾರದಲ್ಲಿ ವಾರ್ಡ್‌ಗಳನ್ನು ಗುರುತು ಮಾಡಿದ್ದು, ಆರೋಗ್ಯ ಸಿಬ್ಬಂದಿ ಮತ್ತು ಕೊರೋನಾ ವಾರಿಯರ್‌ಗಳಿಗೆ ಹೆಚ್ಚು ನಿಗಾ ವಹಿಸಲು ಸೂಚಿಸಲಾಗಿದೆ. 

ಈ ವಾರ್ಡ್‌ಗಳಲ್ಲಿ ಲಸಿಕೆ ಪ್ರಮಾಣ ಮತ್ತು ಕೋವಿಡ್‌ ಪರೀಕ್ಷೆ ಪ್ರಮಾಣಗಳನ್ನು ಹೆಚ್ಚಿಸಲಾಗಿದ್ದು ವಾರ್‌ ರೂಂ ಮತ್ತು ನಿಯಂತ್ರಣ ಕೊಠಡಿಗಳಿಂದ ಸೋಂಕಿತರನ್ನು ನಿರಂತರವಾಗಿ ಸಂಪರ್ಕಿಸಿ ಹೋಂ ಐಸೋಲೇಷನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದರ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Covid-19 Crisis: 3.17 ಲಕ್ಷ ಕೋವಿಡ್‌ ಪ್ರಕರಣಗಳು: 8 ತಿಂಗಳ ಗರಿಷ್ಠ

3ಕ್ಕಿಂತ ಹೆಚ್ಚು ಕೇಸಿದ್ರೆ ಕ್ಲಸ್ಟರ್‌: ಯಾವುದೇ ಒಂದು ಸ್ಥಳದಲ್ಲಿ 3ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುವ ಪ್ರದೇಶವನ್ನು ಕ್ಲಸ್ಟರ್‌ ವಲಯವೆಂದು ಪರಿಗಣಿಸಲು ಪಾಲಿಕೆ ಈಗಾಗಲೇ ಸೂಚನೆಯನ್ನು ನೀಡಿದೆ. ನಗರ ಪ್ರದೇಶಗಳಲ್ಲಿ 50 ಮೀಟರ್‌ ವ್ಯಾಪ್ತಿಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮನೆಗಳಲ್ಲಿ 5ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ಕಾಣಿಸಿಕೊಂಡರೆ ಅದನ್ನು ಕ್ಲಸ್ಟರ್‌ ವಲಯ ಎಂದು ಪರಿಗಣಿಸಲಾಗುವುದು. 

ಒಂದು ವೇಳೆ ವಸತಿ ಸಮುಚ್ಚಯಗಳಲ್ಲಿ ಸೋಂಕು ಕಾಣಿಸಿಕೊಂಡರೆ ಸ್ಥಳೀಯ ಆರೋಗ್ಯಾಧಿಕಾರಿಗಳ ನಿರ್ಧಾರ ಅಂತಿಮವಾಗಲಿದೆ. 100 ಮೀಟರ್‌ಗಳಲ್ಲಿರುವ ಹೆಚ್ಚು ಮನೆಗಳಲ್ಲಿ 15ಕ್ಕೂ ಹೆಚ್ಚು ಸೋಂಕು ಕಾಣಿಸಿಕೊಂಡರೆ ದೊಡ್ಡ ಕ್ಲಸ್ಟರ್‌ ವಲಯ ಎಂದು ಪರಿಗಣಿಸಬೇಕು. ಅಪಾರ್ಟ್‌ಮೆಂಟ್‌ಗಳಲ್ಲಿ ಆಯಾ ಮಹಡಿಗಳನ್ನು ಕಂಟೈನ್ಮೆಂಟ್‌ ವಲಯ (Containment Zone) ಎಂದು ಪರಿಗಣಿಸುವಂತೆ ಸೂಚನೆ ನೀಡಲಾಗಿದೆ.

click me!