ಹಂಪಿ ಪುಷ್ಕರಣಿಗೆ ವಿಷ ಹಾಕಿದ ದುರುಳರು: ಮೀನುಗಳ ಮಾರಣ ಹೋಮ

Kannadaprabha News   | Asianet News
Published : Apr 19, 2021, 01:29 PM IST
ಹಂಪಿ ಪುಷ್ಕರಣಿಗೆ ವಿಷ ಹಾಕಿದ ದುರುಳರು: ಮೀನುಗಳ ಮಾರಣ ಹೋಮ

ಸಾರಾಂಶ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ| ಶ್ರೀ ವಿದ್ಯಾರಣ್ಯ ಮಠದ ಬಳಿ ಇರುವ ಲೋಕಪಾವನ ಪುಷ್ಕರಣಿಗೆ ವಿಷ ಹಾಕಿದ ಕಿಡಿಗೇಡಿಗಳು| ಕೋತಿಗಳು ಕೂಡ ಈ ನೀರು ಸೇವಿಸಿರುವ ಶಂಕೆ| ಕಿಡಿಗೇಡಿಗಳ ಬಂಧನಕ್ಕೆ ಹನುಮ ಮಾಲಾ ಸೇವಾ ಸಮಿತಿ ಸದಸ್ಯರ ಒತ್ತಾಯ| 

ಹೊಸಪೇಟೆ(ಏ.19): ಪುಷ್ಕರಣಿಗೆ ಕಿಡಿಗೇಡಿಗಳು ವಿಷ ಹಾಕಿದ ಪರಿಣಾಮ 200ಕ್ಕೂ ಅಧಿಕ ಮೀನುಗಳು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ನಿನ್ನೆ(ಭಾನುವಾರ) ನಡೆದಿದೆ.

ಹಂಪಿಯ ಶ್ರೀ ವಿದ್ಯಾರಣ್ಯ ಮಠದ ಬಳಿ ಇರುವ ಲೋಕಪಾವನ ಪುಷ್ಕರಣಿಗೆ ಕಿಡಿಗೇಡಿಗಳು ವಿಷ ಹಾಕಿದ್ದು, 200ಕ್ಕೂ ಅಧಿಕ ಮೀನುಗಳು ಸಾವನ್ನಪ್ಪಿವೆ. ಶ್ರೀ ವಿರೂಪಾಕ್ಷೇಶ್ವರ ದೇಗುಲದ ಆವರಣದ ಕೋತಿಗಳು ಕೂಡ ಈ ನೀರು ಸೇವಿಸಿರುವ ಶಂಕೆ ಇದೆ. 

ನಿಲ್ಲದ ಕೊರೋನಾ ಕಾಟ: ಇಂದಿನಿಂದ ಈ ನಗರಗಳಲ್ಲಿ ನೈಟ್‌ ಕರ್ಫ್ಯೂ ಜಾರಿ..!

ಕಿಡಿಗೇಡಿಗಳು ನೀರಿಗೆ ವಿಷ ಬೆರೆಸಿದ್ದು, ಧಾರ್ಮಿಕ ಹಾಗೂ ಐತಿಹಾಸಿಕ ಕೇಂದ್ರದಲ್ಲಿ ಈ ರೀತಿ ನಡೆದಿರುವುದು ಸರಿಯಲ್ಲ. ಹಂಪಿ ಠಾಣೆ ಪೊಲೀಸರು ಕಿಡಿಗೇಡಿಗಳು ಕೂಡಲೇ ಬಂಧಿಸಬೇಕು ಎಂದು ಹನುಮ ಮಾಲಾ ಸೇವಾ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC