ಬೆಳಗಾವಿ: ಮನೆಯಿಂ​ದಲೇ 1.4 ಲಕ್ಷಕ್ಕೂ ಅಧಿಕ ಮತದಾರರ ಮತದಾನ!

By Kannadaprabha News  |  First Published Apr 3, 2023, 9:21 PM IST

 ದೇಶದಲ್ಲಿಯೇ ಮೊದಲ ಬಾರಿಗೆ 80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಸೇರಿದಂತೆ ಅಂಗವಿಕಲರಿಗೆ ಮನೆಯಿಂ​ದಲೇ ಗೌಪ್ಯ ಮತದಾನ ಮಾಡುವ ಅವಕಾಶ ಕಲ್ಪಿಸ​ಲಾಗಿದೆ. ರಾಜ್ಯದಲ್ಲಿ 12.15 ಲಕ್ಷಕ್ಕೂ ಹೆಚ್ಚು ಮಂದಿ 80 ವರ್ಷಕ್ಕಿಂತ ಮೇಲ್ಪಟ್ಟವರಿದ್ದರೇ, ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿಯೇ ಬರೋಬ್ಬರಿ 1 ಲಕ್ಷ ಹಿರಿಯ ಮತದಾರರು ಇದ್ದು, 41,720 ಅಂಗವಿಕಲ ಮತದಾರರು ಮನೆಯಿಂದಲೇ ಮತದಾನ ಮಾಡುವ ಭಾಗ್ಯ ದೊರೆದಂತಾಗಿದೆ.


ಶ್ರೀಶೈಲ ಮಠದ

 ಬೆಳಗಾವಿ (ಏ.3) : ದೇಶದಲ್ಲಿಯೇ ಮೊದಲ ಬಾರಿಗೆ 80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಸೇರಿದಂತೆ ಅಂಗವಿಕಲರಿಗೆ ಮನೆಯಿಂ​ದಲೇ ಗೌಪ್ಯ ಮತದಾನ ಮಾಡುವ ಅವಕಾಶ ಕಲ್ಪಿಸ​ಲಾಗಿದೆ. ರಾಜ್ಯದಲ್ಲಿ 12.15 ಲಕ್ಷಕ್ಕೂ ಹೆಚ್ಚು ಮಂದಿ 80 ವರ್ಷಕ್ಕಿಂತ ಮೇಲ್ಪಟ್ಟವರಿದ್ದರೇ, ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿಯೇ ಬರೋಬ್ಬರಿ 1 ಲಕ್ಷ ಹಿರಿಯ ಮತದಾರರು ಇದ್ದು, 41,720 ಅಂಗವಿಕಲ ಮತದಾರರು ಮನೆಯಿಂದಲೇ ಮತದಾನ ಮಾಡುವ ಭಾಗ್ಯ ದೊರೆದಂತಾಗಿದೆ.

Tap to resize

Latest Videos

ಬೆಳಗಾವಿ ದಕ್ಷಿಣದಲ್ಲಿ ಅತೀ ಹೆಚ್ಚು, ಕಿತ್ತೂರಿನಲ್ಲಿ ಅತೀ ಕಡಿಮೆ:

ಜಿಲ್ಲಾಡಳಿತ ಪ್ರಕಟಿಸಿರುವ ಜಿಲ್ಲೆಯ 18 ಮತಕ್ಷೇತ್ರದ ಅಂತಿಮ ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ 80 ವರ್ಷ ಹಾಗೂ 80 ವರ್ಷಕ್ಕೂ ಮೇಲಿನವರು 1,00,019 ಮತದಾರರಲ್ಲಿ ಬೆಳಗಾವಿ ದಕ್ಷಿಣದಲ್ಲಿ 8,198 ಅತೀ ಹೆಚ್ಚಿದ್ದು, ನಂತರದ ಸ್ಥಾನದಲ್ಲಿ ಬೆಳಗಾವಿ ಉತ್ತರದಲ್ಲಿ 7,036 ಮತದಾರರಿದ್ದಾರೆ. ನಿಪ್ಪಾಣಿಯಲ್ಲಿ 6,768, ಬೆಳಗಾವಿ ಗ್ರಾಮೀಣದಲ್ಲಿ 6,469, ರಾಯಬಾಗದಲ್ಲಿ 6,408, ಕುಡಚಿಯಲ್ಲಿ 6,375, ಚಿಕ್ಕೋಡಿ-ಸದಲಗಾದಲ್ಲಿ 5,990, ಕಾಗವಾಡದಲ್ಲಿ 5,832, ಅರಬಾವಿಯಲ್ಲಿ 5,658, ಅಥಣಿಯಲ್ಲಿ 5,603, ಬೈಲಹೊಂಗದಲ್ಲಿ 5,047, ಗೋಕಾಕದಲ್ಲಿ 4,935, ಹುಕ್ಕೇರಿಯಲ್ಲಿ 4,555, ಖಾನಾಪುರದಲ್ಲಿ 4,452, ಯಮಕನಮರಡಿಯಲ್ಲಿ 4,294, ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ 4,274 ಹಾಗೂ ರಾಮದುರ್ಗದಲ್ಲಿ 4,204, ಕಿತ್ತೂರಿನಲ್ಲಿ 3,921 ಮತದಾರರು ಇದ್ದಾರೆ.

ಕಲಬುರಗಿ: ಮತದಾನ ಜಾಗೃತಿಗೆ ಮೊಂಬತ್ತಿ ಮೆರವಣಿಗೆ

ಬೆಂಗಳೂರು ಬಿಟ್ಟರೇ ಬೆಳಗಾವಿಯಲ್ಲಿಯೇ ಅತೀ ಹೆಚ್ಚು ಮತಕ್ಷೇತ್ರಗಳು:

ಬೆಂಗಳೂರನ್ನು ಹೊರತು ಪಡಿಸಿದರೇ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು 18 ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟು 4,434 ಮತಗಟ್ಟೆಗಳಿವೆ. ಒಟ್ಟು 38,33,037 ಮತದಾರರು ಇದ್ದಾರೆ. ಈ ಪೈಕಿ 19,36,887 ಪುರುಷ ಮತ್ತು 18,96,150 ಮಹಿಳಾ ಮತದಾರರಲ್ಲಿ ಹಿರಿಯ ನಾಗರಿಕರು, ಯುವ ಮತದಾರು ಹಾಗೂ ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಹಿರಿಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕಾಗವಾಡ ಅತೀ ಹೆಚ್ಚು, ಬೆಳಗಾವಿ ಉತ್ತರದಲ್ಲಿ ಅತೀ ಕಡಿಮೆ ಅಂಗವಿಕಲ ಮತದಾರರು!

ಜಿಲ್ಲೆಯಲ್ಲಿ 41,720 ಅಂಗವಿಕಲ ಮತದಾರರಿದ್ದು, ಈ ಪೈಕಿ 25,559 ಪುರುಷ, 16,157 ಮಹಿಳಾ ಮತದಾರರು ಇದ್ದರೇ, ಕಾಗವಾಡದಲ್ಲಿ 3,404 ಅತೀ ಹೆಚ್ಚು, ಬೆಳಗಾವಿ ಉತ್ತರದಲ್ಲಿ 1,028 ಅತೀ ಕಡಿಮೆ ಮತದಾರರನ್ನು ಹೊಂದಿದೆ. ಕಿತ್ತೂರಿನಲ್ಲಿ 3,310, ಸವದತ್ತಿ ಯಲ್ಲಮ್ಮದಲ್ಲಿ 3,210, ಬೈಲಹೊಂಗದಲ್ಲಿ 3,147, ಖಾನಾಪುರದಲ್ಲಿ 2,711, ಗೋಕಾಕದಲ್ಲಿ 2,678, ಅಥಣಿಯಲ್ಲಿ 2504, ಅರಬಾವಿಯಲ್ಲಿ 2,447, ಚಿಕ್ಕೋಡಿ-ಸದಲಗಾದಲ್ಲಿ 2,435, ಹುಕ್ಕೇರಿಯಲ್ಲಿ 2309, ಯಮಕನಮರಡಿಯಲ್ಲಿ 2,176, ರಾಮದುರ್ಗದಲ್ಲಿ 2,085, ರಾಯಬಾಗದಲ್ಲಿ 1,935, ಬೆಳಗಾವಿ ಗ್ರಾಮೀಣದಲ್ಲಿ 1,876, ನಿಪ್ಪಾಣಿಯಲ್ಲಿ 1,743, ಕುಡಚಿಯಲ್ಲಿ 1,431, ಬೆಳಗಾವಿ ದಕ್ಷಿಣದಲ್ಲಿ 1,289, ಬೆಳಗಾವಿ ಉತ್ತರದಲ್ಲಿ 1,028 ಅತೀ ಕಡಿಮೆ ಅಂಗವಿಕಲ ಮತದಾರರು ಈ ಬಾರಿ ಇದ್ದಾರೆ.

 

ಸಿಲಿಕಾನ್‌ ಸಿಟಿ ಬೆಂಗ್ಳೂರಲ್ಲಿ ಮತದಾನ ಜಾಗೃತಿಗೆ ಸೆಲೆಬ್ರೆಟಿಗಳ ಎಂಟ್ರಿ..!

80 ವರ್ಷಕ್ಕಿಂತ ಮೇಲ್ಪಟ್ಟಹಿರಿಯರು ಮತ್ತು ಅಂಗವಿಕಲರು ಮನೆಯಲ್ಲಿಯೇ ಗೌಪ್ಯ ಮತದಾನಕ್ಕೆ ಇಚ್ಛಿಸಿದರೆ ಮೊದಲೇ ನೋಂದಾಯಿಸಿ​ಕೊಂಡಿರಬೇಕು. ಚುನಾವಣಾ ಆಯೋಗದ ವೆಬ್‌ಸೈಟ್‌ ಅಥವಾ ವೋಟರ್‌ ಹೆಲ್ಪ್‌ಲೈನ್‌ ಆಪ್‌, ಸಕ್ಷಮ್‌ ಆಪ್‌ನಲ್ಲಿ ನೋಂದಾಯಿಸಿಕೊಳ್ಳಿ. ಇಂಟರ್‌ ನೆಟ್‌ ಮಾಹಿತಿ ಇಲ್ಲದವರು ಬೂತ್‌ಮಟ್ಟದ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನೋಂದಾಯಿಸಿಕೊಳ್ಳಿ. ಆದ್ಯತೆ ಮೇರೆಗೆ ಮತದಾನಕ್ಕೆ ಅವಕಾಶವಿದೆ. ಅಂಗವಿಕಲರಿಗೆ ಮತ್ತು ಹಿರಿಯರಿಗೆ ಮನೆಯಿಂದ ಮತಗಟ್ಟೆಗೆ ಬರಲು ಮತ್ತು ವಾಪಸ್‌ ಕಳುಹಿಸಲು ವಾಹನ ವ್ಯವಸ್ಥೆ ಮಾಡಲಾಗುವುದು. ದೃಷ್ಟಿದೋಷದ ಮತದಾರರಿಗೆ ಬ್ರೈಲ್‌ ಬ್ಯಾಲಟ್‌ ಪೇಪರ್‌, ಹಲವು ಸೌಲಭ್ಯ ಕಲ್ಪಿಸಲಾಗಿದೆ.

ಮನೋಜ್‌ ಕುಮಾರ್‌ ಮೀನಾ, ರಾಜ್ಯ ಮುಖ್ಯಚುನಾವಣಾಧಿಕಾರಿಗಳು.

80 ವರ್ಷ ದಾಟಿದವರು, ಅಂಗವಿಕಲರು, ಅಗತ್ಯ ಸೇವೆಯ ಉದ್ಯೋಗಸ್ಥರು ಅಂಚೆ ಮತದಾನ ( ಮನೆಯಿಂದಲೇ ಮತ ಚಲಾಯಿಸಲು ಅವಕಾಶ) ಮಾಡಲು ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ಅಂಚೆ ಪತ್ರದ ಹಕ್ಕು ಚಲಾಯಿಸಲು ಬಯಸುವವರು ನಮೂನೆ 12 ಡಿಯಲ್ಲಿ ಅಗತ್ಯವಿರುವ ಎಲ್ಲವಿವರಗಳನ್ನು ಒದಗಿಸಬೇಕಾಗುತ್ತದೆ. ಜಿಲ್ಲೆಯಲ್ಲಿ 80 ವರ್ಷ ದಾಟಿರುವವರನ್ನು ಮತದಾನ ಪ್ರಕ್ರಿಯೆಯಯಲ್ಲಿ ಸಕ್ರಿಯವಾಗಿ ತೊಡಗಿಸಲು ಕ್ರಮ ಕೈಗೊಳ್ಳಲಾಗಿದೆ.

ನಿತೇಶ ಪಾಟೀಲ, ಜಿಲ್ಲಾ ಚುನಾವಣಾಧಿಕಾರಿ.

click me!