‘ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ಸಿದ್ಧ’ : ವರ್ತೂರಿಗೆ ಎಂಎಲ್ಸಿ ಅನಿಲ್‌ಕುಮಾರ್‌ ಸವಾಲ್‌

By Kannadaprabha News  |  First Published Dec 5, 2022, 6:28 AM IST

ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಕೆ.ಶ್ರೀನಿವಾಸಗೌಡರ ಕೊಡುಗೆ ಏನು? ಹತ್ತು ವರ್ಷಗಳ ಕಾಲ ನೀವು ಕೂಡ ಶಾಸಕರಾಗಿ ಏನು ಅಭಿವೃದ್ಧಿ ಮಾಡಿದ್ದೀರ, ಕೋಲಾರ ನಗರದ ಗಾಂಧಿವನದಲ್ಲಿ ಸಾರ್ವಜನಿಕರ ಮುಂದೆ ಬಹಿರಂಗ ಚರ್ಚೆಗೆ ನಾವು ಸಿದ್ಧ, ತಾಕತ್ತು ಇದ್ದರೆ ಸಮಯ ನೀವೇ ನಿಗದಿ ಮಾಡಿ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ಎಂಎಲ್ಸಿ ಅನಿಲ್‌ ಕುಮಾರ್‌ ಬಹಿರಂಗ ಸವಾಲು ಹಾಕಿದರು.


 ಕೋಲಾರ (ಡಿ.05):  ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಕೆ.ಶ್ರೀನಿವಾಸಗೌಡರ ಕೊಡುಗೆ ಏನು? ಹತ್ತು ವರ್ಷಗಳ ಕಾಲ ನೀವು ಕೂಡ ಶಾಸಕರಾಗಿ ಏನು ಅಭಿವೃದ್ಧಿ ಮಾಡಿದ್ದೀರ, ಕೋಲಾರ ನಗರದ ಗಾಂಧಿವನದಲ್ಲಿ ಸಾರ್ವಜನಿಕರ ಮುಂದೆ ಬಹಿರಂಗ ಚರ್ಚೆಗೆ ನಾವು ಸಿದ್ಧ, ತಾಕತ್ತು ಇದ್ದರೆ ಸಮಯ ನೀವೇ ನಿಗದಿ ಮಾಡಿ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ಎಂಎಲ್ಸಿ ಅನಿಲ್‌ ಕುಮಾರ್‌ ಬಹಿರಂಗ ಸವಾಲು ಹಾಕಿದರು.

ತಾಲೂಕಿನ ನರಸಾಪುರ ಹೋಬಳಿ ವ್ಯಾಪ್ತಿಯ ಬೆಳ್ಳೂರು, ಬೆಳಮಾರನಹಳ್ಳಿ, ಚೌಡದೇನಹಳ್ಳಿ ಹಾಗೂ ನರಸಾಪುರ ಗ್ರಾಮ ಪಂಚಾಯಿತಿಗಳಲ್ಲಿ ಭಾನುವಾರ ಕಾಂಗ್ರೆಸ್‌ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

Latest Videos

undefined

ಪ್ರತಿನಿತ್ಯ ಸಭೆ ಸಮಾರಂಭಗಳಲ್ಲಿ ರು (MLA)  ಕ್ಷೇತ್ರಕ್ಕೆ ಯಾವುದೇ ಅನುದಾನ ತಂದಿಲ್ಲ, ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಬಿಡುಗಡೆಯಾದ ಕಾಮಗಾರಿಗಳು ಅಂತ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡು ವುದಲ್ಲ ನಿಮಗೆ ಏನಾದರೂ ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ (Kolar )  ಕ್ಷೇತ್ರದಲ್ಲಿ ಶ್ರೀನಿವಾಸಗೌಡರು ಶಾಸಕರಾಗಿ ಎಷ್ಟುಅಭಿವೃದ್ಧಿ ಮಾಡಿದ್ದಾರೆ ಸಂಪೂರ್ಣ ಮಾಹಿತಿ ನೀಡಲು ನಾವು ಸಿದ್ಧರಿದ್ದೇವೆ ಎಂದರು.

ನಾಲ್ಕು ಬಾರಿ ಶಾಸಕರಾಗಿ ಒಂದು ಬಾರಿ ಸಚಿವರಾಗಿ ಸಹಕಾರಿ ಕ್ಷೇತ್ರದಲ್ಲಿ ಶ್ರೀನಿವಾಸಗೌಡರು ಕೆಲಸ ಮಾಡಿದ್ದಾರೆ. ಅವರ ಕೈ-ಬಾಯಿಯಲ್ಲೂ ಶುದ್ಧವಾಗಿದ್ದಾರೆ, ನಿಮ್ಮ ರೀತಿಯಲ್ಲ . ನಾನು ಕೂಡ ಎಂಎಲ್ಸಿಯಾಗಿ 11 ತಿಂಗಳ ನನ್ನ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದೇನೆ. ನಿನ್ನಿಂದ ಹೇಳಿಸಿಕೊಳ್ಳುವ ಅವಶ್ಯಕತೆ ನನಗೆ ಇನ್ನೂ ಬಂದಿಲ್ಲ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸುಮಾರು 40 ಬಾರಿ ಅಧಿವೇಶನದಲ್ಲಿ ಮಾತಾಡಿ ದ್ದೇನೆ. ನೀವು 10 ವರ್ಷ ಎಂಎಲ್‌ಎ ಆಗಿದ್ದವರು. ಎಷ್ಟುಸಲ ಅಸೆಂಬ್ಲಿಯಲ್ಲಿ ಮಾತಾಡಿದ್ದರಾ? ಎಂದು ಸವಾಲು ಹಾಕಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಸ್ವರ್ಧೆಯೇ ನಮ್ಮ ಪುಣ್ಯ. ಅವರಿಂದಲೇ ಎರಡು ಜಿಲ್ಲೆಯಾದ್ಯಂತ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರೆ ಅದಕ್ಕಿಂತ ನಮಗೆ ಏನು ಬೇಕಾಗಿದೆ. ಸಿದ್ದರಾಮಯ್ಯ ಅವರನ್ನು ನಾವು ಎಲ್ಲರೂ ದೊಡ್ಡ ಮನಸ್ಸು ಮಾಡಿ ಗೆಲ್ಲಿಸಬೇಕಾಗಿದೆ ಎಂದು ಮನವಿ ಮಾಡಿದರು.

ವಿಧಾನಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಮಾತನಾಡಿ,ಅಭಿವೃದ್ಧಿಗೆ ಸಹಕಾರ ನೀಡದ ಸರಕಾರವನ್ನು ದೂರವಿಟ್ಟು ,ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ.ಚುನಾವಣೆ ಯಾವ ಸಂದರ್ಭದಲ್ಲಿ ಬೇಕಾದರೂ ಬರಬಹುದು ಜನರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ನಾವು ಕಾಂಗ್ರೆಸ್‌ ಪಕ್ಷದ ಸಂಘಟನೆಗೆ ಒತ್ತು ನೀಡೋಣ ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗನಾಳ ಸೋಮಣ್ಣ, ಹಿರಿಯ ಮುಖಂಡರಾದ ಶ್ರೀ ಕೃಷ್ಣ, ವಕ್ಕಲೇರಿ ರಾಜಪ್ಪ, ಅನ್ವರ್‌ ಪಾಷ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸೀಸಂದ್ರ ಗೋಪಾಲಗೌಡ, ನಗರಸಭೆ ಸದಸ್ಯ ಅಂಬರೀಷ್‌, ಮಾಜಿ ಸದಸ್ಯ ಸೋಮಶೇಖರ್‌, ಯುವ ಕಾಂಗ್ರೆಸ್‌ ಮುಖಂಡ ರಾಜು ಶ್ರೀನಿವಾಸಪ್ಪ, ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮುರುಳಿ, ಜಿಲ್ಲಾ ಯುವ ಕಾಂಗ್ರೇಸ್‌ ಉಪಾಧ್ಯಕ್ಷ ಜನಪನಹಳ್ಳಿ ನವೀನ್‌ ಕುಮಾರ್‌, ಖಾದ್ರಿಪುರ ಬಾಬು, ಸಿಎಂಸಿ ರವಿ, ಖಾಜಿಕಲ್ಲಹಳ್ಳಿ ಮುನಿರಾಜು, ಬೆಳ್ಳೂರು ಅಶ್ವಥ್‌, ಸಿಎಂಎಂ. ಮಂಜುನಾಥ್‌, ಕಲ್ವಾಮಂಜಲಿ ಶ್ರೀರಾಮ್‌, ಎಂಟಿಬಿ ಶ್ರೀನಿವಾಸ್‌, ಖಾಜಿಕಲ್ಲಹಳ್ಳಿ ಕೃಷ್ಣಪ್ಪ, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ವೀರೇಂದ್ರ ಪಾಟೀಲ್‌ ಗ್ರಾಮಾಂತರ ಯುವ ಕಾಂಗ್ರೆಸ್‌ ಅಧ್ಯಕ್ಷ ನವೀನ್‌, ಕನಕರಾಜ್‌, ಬಿ.ಟಿ.ಮಂಜು, ಹರ್ಷ, ಲಕ್ಷ್ಮಿಪತಿ, ಪ್ರಶಾಂತ್‌, ಲೋಕೇಶ್‌ ಇದ್ದರು.

ಸಿದ್ದು ಸ್ಪರ್ಧೆ ಖಚಿತ: ಗೊಂದಲ ಬೇಡ

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದು ಗ್ಯಾರಂಟಿಯಾಗಿದ್ದರೂ ಕೂಡ ಕೆಲವರು ವಿನಾಕಾರಣ ಇನ್ನೂ ಕ್ಷೇತ್ರದಲ್ಲಿ ಗೊಂದಲಗಳನ್ನು ಸೃಷ್ಟಿಮಾಡುತ್ತಾ ಇದ್ದು ಇದಕ್ಕೆ ಕಾರ್ಯ ಕರ್ತರು ಕಿವಿಕೊಡುವ ಅವಶ್ಯಕತೆ ಇಲ್ಲ. ಈಗಾಗಲೇ ಪಂಚಾಯಿತಿವಾರು ಸಭೆಗಳನ್ನು ನಡೆಸಿ, ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸುವ ಕೆಲಸವನ್ನು ಮಾಡುತ್ತಿದ್ದು, ಇದಕ್ಕೆ ನಿಮ್ಮಗಳ ಸಹಕಾರ ಮುಖ್ಯವಾಗಿದೆ. ತಾವೇ ತಮ್ಮ ಗ್ರಾಮಗಳಲ್ಲಿ ಸಭೆಗಳನ್ನು ನಡೆಸಿ ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ಕೊಟ್ಟಂತಹ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕಾಗಿದೆ ಎಂದು ಎಂಎಲ್ಸಿ ಅನಿಲ್‌ ಕುಮಾರ್‌ ಹೇಳಿದರು.

ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರದಿಂದ ವಿರೋಧ ಪಕ್ಷದ ಶಾಸಕರಿಗೆ 10 ರೂಪಾಯಿ ಕೂಡ ಬಿಡುಗಡೆ ಮಾಡಲಿಲ್ಲ. ಅನುದಾನಕ್ಕೆ ಗಲಾಟೆ ಮಾಡಿದರೆ ಕೊರೊನಾ ನೆಪ ಹೇಳಿಕೊಂಡು ಬಂದರು. ಈಗ ಅಧಿಕಾರವಧಿ ಮುಗಿದು ಹೋಯಿತು.

click me!