ಚಿತ್ತಾಪುರ ಪಟ್ಟಣದಲ್ಲಿ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ತೆರೆದಿದ್ದೇವೆ, ಒಟ್ಟು 400 ಬೆಡ್ ಗುರಿಯಿದೆ| ಆಕ್ಸಿಜನ್ ಸಹಿತ ಒಟ್ಟು ಐವತ್ತು ಬೆಡ್ ಒದಗಿಸಲು ತಯಾರಿ ನಡೆಸಿದ್ದೇನೆ| ಜಿಲ್ಲಾಡಳಿತ ಆಕ್ಸಿಜನ್ ಕೊರತೆ ಮುಂದಿಟ್ಟಿದೆ. ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲು ಚಿತ್ತಾಪುರದಲ್ಲಿ ಹತ್ತು ಬೆಡ್‌ಗಳನ್ನು ಮೀಸಲಿಡಲಾಗಿದೆ: ಖರ್ಗೆ|
ಕಲಬುರಗಿ(ಮೇ.05): ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ರೋಗಿಗಳಿಗೆ ಆಕ್ಸಿಜನ್ ಮತ್ತು ಬೆಡ್ ಕೊರತೆಯುಂಟಾಗಿ ಸಾವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ತಾಪುರ ಮತಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ, ಚಿತ್ತಾಪುರ ಪಟ್ಟಣದಲ್ಲಿ 100 ಬೆಡ್‌ಗಳ ವ್ಯವಸ್ಥೆ ಕಲ್ಪಿಸುವ ಜೊತೆಗೆ ವಾಡಿ ನಗರ, ಗುಂಡಗುರ್ತಿ, ಕೋರವಾರ, ನಾಲವಾರ ಗ್ರಾಮಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಚಿಂತನೆ ನೆಡಸಿದ್ದಾರೆ.
ಆಮ್ಲಜನಕ ಕೋರತೆಯಿಂದ ರೋಗಿಗಳು ಉಸಿರುಗಟ್ಟಿ ಸಾಯುತ್ತಿರುವುದನ್ನು ತಪ್ಪಿಸಲು ತಾಲೂಕಿಗೊಂದು ಕೋವಿಡ್ ಕೇರ್ ಸೆಂಟರ್ ನಿರ್ಮಿಸಲು ಜಿಲ್ಲಾಡಳಿತಕ್ಕೆ ಈಗಾಗಲೇ ಪತ್ರ ಬರೆದು ಒತ್ತಾಯಿಸಿರುವ ಶಾಸಕ ಪ್ರಿಯಾಂಕ್, ತಾವು ಪ್ರತಿನಿಧಿಸುವ ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಸೋಂಕಿತ ರೋಗಿಗಳ ಆರೋಗ್ಯ ಕಾಳಜಿ ಹೊಂದುವ ಮೂಲಕ ಚಿತ್ತಾಪುರ ತಾಲೂಕು ಸೇರಿದಂತೆ ಶಹಾಬಾದ, ಕಾಳಗಿ, ಸೇಡಂ ಮತ್ತು ಚಿಂಚೋಳಿ ರೋಗಿಗಳಿಗೂ ಬೆಡ್ ವ್ಯವಸ್ಥೆ ಮಾಡಿದ್ದಾರೆ.
ಆಕ್ಸಿಜನ್ ಘಟಕವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಕಲಬುರ್ಗಿ ಜಿಲ್ಲಾಡಳಿತ
ಚಿತ್ತಾಪುರದಲ್ಲಿ ಆಕ್ಸಿಜನ್:
ಜಿಲ್ಲೆಯಲ್ಲಿ ಕೊರೋನಾ ರೋಗಿಗಳಿಗೆ ಬೆಡ್ ಸಿಗುತ್ತಿಲ್ಲ ಮತ್ತು ಆಕ್ಸಿಜನ್ ಕೊರತೆಯಿದೆ ದಯವಿಟ್ಟು ನಮಗೆ ಸಹಾಯಮಾಡಿ ಎಂದು ದಿನಕ್ಕೆ ನನಗೆ ಸುಮಾರು ಐವತ್ತಿಕ್ಕಿಂತ ಹೆಚ್ಚು ಕರೆಗಳು ಬರುತ್ತಿವೆ. ಈ ವಿಷಯದಲ್ಲಿ ಜಿಲ್ಲಾಡಳಿತ ಸಂಪೂರ್ಣ ಎಡವಿದೆ.
ಕಾರಣ ಚಿತ್ತಾಪುರ ಪಟ್ಟಣದಲ್ಲಿ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ತೆರೆದಿದ್ದೇವೆ. ಒಟ್ಟು 400 ಬೆಡ್ ಗುರಿಯಿದೆ. ಆಕ್ಸಿಜನ್ ಸಹಿತ ಒಟ್ಟು ಐವತ್ತು ಬೆಡ್ ಒದಗಿಸಲು ತಯಾರಿ ನಡೆಸಿದ್ದೇನೆ. ಆದರೆ ಜಿಲ್ಲಾಡಳಿತ ಆಕ್ಸಿಜನ್ ಕೊರತೆ ಮುಂದಿಟ್ಟಿದೆ. ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲು ಚಿತ್ತಾಪುರದಲ್ಲಿ ಹತ್ತು ಬೆಡ್‌ಗಳನ್ನು ಮೀಸಲಿಡಲಾಗಿದೆ. ಈಗಾಗಲೇ ಡ್ರೈರನ್ ಕೂಡ ಮಾಡಿಸಿದ್ದೇವೆ. ಜಿಲ್ಲಾಡಳಿತ ಆಕ್ಸಿಜನ್ ಪೂರೈಸಿದರೆ ಕೂಡಲೇ ರೋಗಿಗಳಿಗೆ ಒದಗಿಸುತ್ತೇವೆ. ಅವಶ್ಯಕತೆ ಬಿದ್ದರೆ ವಾಡಿ ನಗರ ಹೊರವಲಯದ ಏಕಲವ್ಯ ವಸತಿ ಶಾಲೆ ಹಗೂ ಗುಂಡಗುರ್ತಿಯಲ್ಲೂ ಕೊವಿಡ್ ಕೇರ್ ಸೆಂಟರ್ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ. ಸದ್ಯ ಚಿತ್ತಾಪುರದಲ್ಲಿ ಎಲ್ಲಾ ರೋಗಿಗಳಿಗೂ ಸಿಗುವಷ್ಟು ಬೆಡ್ ವ್ಯವಸ್ಥೆ ಒದಗಿಸಿದ್ದೇವೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona