ಲಾಕ್‌ಡೌನ್‌ ನಿಯಮ ಉಲ್ಲಂಘಣೆ: ನಂಜುಂಡೇಶ್ವರ ಸ್ವಾಮಿಗೆ ಶಾಸಕರಿಂದ ವಿಶೇಷ ಪೂಜೆ..!

By Suvarna NewsFirst Published May 8, 2020, 1:57 PM IST
Highlights

ಶಾಸಕ ಹರ್ಷವರ್ಧನ್ ಅವರಿಂದ ವಿಶೇಷ ಪೂಜೆ ಮತ್ತು ಚಂಡಿಕಾ ಯಾಗ ಆಯೋಜನೆ| ಲಾಕ್‌ಡೌನ್‌ ನಿಯಮ ಗಾಳಿಗೆ ತೂರಿದ ಶಾಸಕ| ಜನಪ್ರತಿನಿಧಿಯಿಂದಲೇ ಸರ್ಕಾರದ ನಿಯಮ ಉಲ್ಲಂಘನೆ| ಪೂಜೆ, ಹೋಮ ಮಾಡಿಸಿದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಶಾಸಕ ಹರ್ಷವರ್ಧನ್|

ಮೈಸೂರು(ಮೇ.08): ಜಿಲ್ಲೆಯ ನಂಜನಗೂಡು ಶಾಸಕ ಹರ್ಷವರ್ಧನ್ ಅವರು ಲಾಕ್‌ಡೌನ್‌ ನಿಯಮಗಳನ್ನು ಗಾಳಿಗೆ ತೂರಿ ನಂಜನಗೂಡಿನ ನಂಜುಂಡೇಶ್ವರನ ದೇವಾಲಯದಲ್ಲಿ ವಿಶೇಷ ಪೂಜೆ, ಚಂಡಿಕಾಯಾಗ ಮಾಡಿಸುವ ಮೂಲಕ ಕ್ಷೇತ್ರದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಲಾಕ್‌ಡೌನ್ ಇರುವ ಹಿನ್ನೆಲೆ ರಾಜ್ಯಾದ್ಯಂತ ದೇವಸ್ಥಾನಗಳಿಗೆ ಬೀಗ ಹಾಕುವಂತೆ ಸರ್ಕಾರ ಆದೇಶ ಹೊರಡಿಸಿದೆ. ಸಾರ್ವಜನಿಕರಿಗೆ ಪ್ರವೇಶ ಕಡ್ಡಾಯವಾಗಿ ನಿಷೇಧ ಹೇರಿದೆ. ಆದರೆ, ದೇವಸ್ಥಾನದಲ್ಲಿ ಅರ್ಚಕರಿಂದ ನಿತ್ಯ ಪೂಜೆಗೆ ಮಾತ್ರ ಅನುಮತಿ ನೀಡಲಾಗಿದೆ. ಪುರೋಹಿತರು ಮತ್ತು ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6 ರಿಂದ 8 ರೊಳಗೆ ಪೂಜಾ ವಿಧಾನಗಳನ್ನು ಪೂರೈಸಿ ಬಾಗಿಲು ಹಾಕಬೇಕಾದ ಕಟ್ಟುನಿಟ್ಟಿನ‌ ಆದೇಶ ಜಾರಿಯಲ್ಲಿದೆ. 

ಜ್ಯುಬಿಲಿಯೆಂಟ್ ನಂಜಿನ ರಹಸ್ಯ ಕೊನೆಗೂ ಬಯಲು; ಕಾರಣವಾಯ್ತಾ ಈ ಸಭೆ?

ಆದರೆ ಇಲ್ಲಿ ಶಾಸಕರ ಆಪ್ತರು ಮತ್ತು ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಿಗೆ ಪ್ರವೇಶ ನೀಡಲಾಗಿದೆ. ಜನಪ್ರತಿನಿಧಿಯಿಂದಲೇ ಸರ್ಕಾರದ ನಿಯಮ ಉಲ್ಲಂಘನೆಯಾಗಿದೆ, ವಿಶೇಷ ಪೂಜೆ ಸಲ್ಲಿಸಿದ ಶಾಸಕ ಹರ್ಷವರ್ಧನ್. ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪೂಜೆ, ಹೋಮ ಮಾಡಿಸಿದ ವಿಚಾರವನ್ನು ಶಾಸಕ ಹರ್ಷವರ್ಧನ್ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.
 

click me!