ಅಭಿವೃದ್ಧಿ ಕಾರ್ಯಗಳ ಮೂಲಕ ಋಣ ತೀರಿಸುತ್ತೇನೆ ಎಂದ ಶಾಸಕ ಅರುಣಕುಮಾರ ಪೂಜಾರ| ಗ್ರಾಮಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಿ, ಜಾತಿ ಬೇಧ ಎನ್ನದೆ ಸರ್ವರಿಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತೇನೆ| ನನಗೆ ಸಿಕ್ಕಿರುವ ಮೂರುವರೆ ವರ್ಷಗಳಲ್ಲಿ ರಾಣಿಬೆನ್ನೂರ ತಾಲೂಕನ್ನು ಮಾದರಿ ತಾಲೂಕನ್ನಾಗಿಸುವ ಮಹದಾಸೆ ನನ್ನದಾಗಿದೆ|
ರಾಣಿಬೆನ್ನೂರು[ಜ.03]: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ. ಮತದಾರರ ಈ ನಿಮ್ಮ ಋಣವನ್ನು ಅಭಿವೃದ್ಧಿಯ ಕಾರ್ಯಗಳ ಮೂಲಕ ತೀರಿಸುತ್ತೇನೆ ಎಂದು ಶಾಸಕ ಅರುಣ ಕುಮಾರ ಪೂಜಾರ ಹೇಳಿದ್ದಾರೆ.
ತಾಲೂಕಿನ ಹಳೆಚಂದಾಪುರ ಗ್ರಾಮದಲ್ಲಿ ಗುರುವಾರ ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಿ, ಜಾತಿ ಬೇಧ ಎನ್ನದೆ ಸರ್ವರಿಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತೇನೆ. ನನಗೆ ಸಿಕ್ಕಿರುವ ಮೂರುವರೆ ವರ್ಷಗಳಲ್ಲಿ ರಾಣಿಬೆನ್ನೂರ ತಾಲೂಕನ್ನು ಮಾದರಿ ತಾಲೂಕನ್ನಾಗಿಸುವ ಮಹದಾಸೆ ನನ್ನದಾಗಿದೆ ಎಂದರು. ಗ್ರಾಮಕ್ಕೆ ಬಸ್ ಮತ್ತು ವಿದ್ಯುತ್‌ನ ಬಗ್ಗೆ ಬೇಡಿಕೆ ಇಟ್ಟಿದ್ದು, ಈಗಾಗಲೇ ಕೆಇಬಿ ಇಲಾಖೆಯ ಅಧಿಕಾರಿಗಳಿಗೆ ಮಾತನಾಡಿ, ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವುದು. ರಾಣಿಬೆನ್ನೂರ ತಾಲೂಕಿಗೆ 16 ಹೊಸ್ ಬಸ್‌ಗಳು ಬರಲಿದ್ದು, ಆದಷ್ಟು ಬೇಗನೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಬಿಜೆಪಿ ಮುಖಂಡರಾದ ವಿಶ್ವನಾಥ ಪಾಟೀಲ, ಚೋಳಪ್ಪ ಕಸವಾಳ, ಗ್ರಾಪಂ ಸದಸ್ಯರಾದ ಜಗನ್ನಾಥ ಪಾಟೀಲ, ಲಕ್ಷ್ಮಣ ದೀಪಾವಳಿ, ಸೋಮಪ್ಪ ಬಾಡಿನ, ಸೋಮಣ್ಣ ಕುದರಿಹಾಳ, ಸುಶೀಲಮ್ಮ ಗಿಂಡಿ, ಪುಷ್ಪಾ ಗಿಂಡಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಿ, ಜಾತಿ ಭೇದ ಎನ್ನದೆ ಸರ್ವರಿಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತೇನೆ. ನನಗೆ ಸಿಕ್ಕಿರುವ ಮೂರೂವರೆ ವರ್ಷಗಳಲ್ಲಿ ರಾಣಿಬೆನ್ನೂರ ತಾಲೂಕನ್ನು ಮಾದರಿ ತಾಲೂಕನ್ನಾಗಿಸುವ ಮಹದಾಸೆ ನನ್ನದಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಅವರು ಹೇಳಿದ್ದಾರೆ.