ಕೊಡಗಿಗೆ ಬಂದು ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಿ, ಸಿದ್ದರಾಮಯ್ಯಗೆ ಶಾಸಕ ಅಪ್ಪಚ್ಚು ರಂಜನ್ ಸವಾಲ್

By Suvarna News  |  First Published Mar 21, 2023, 10:37 PM IST

 ತಾನು ಎಲ್ಲಿಯೇ ಸ್ಪರ್ಧಿಸಿದರೂ ಸೋಲುತ್ತೇನೆ ಎನ್ನುವುದು ಗೊತ್ತಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ವಿರುದ್ಧ ಸ್ಪರ್ಧಿಸಿದರೂ ನಾನು ಅವರನ್ನು ಸೋಲಿಸುತ್ತೇನೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸವಾಲು ಹಾಕಿದ್ದಾರೆ.


ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಮಾ.21): ತಾನು ಎಲ್ಲಿಯೇ ಸ್ಪರ್ಧಿಸಿದರೂ ಸೋಲುತ್ತೇನೆ ಎನ್ನುವುದು ಗೊತ್ತಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ವಿರುದ್ಧ ಸ್ಪರ್ಧಿಸಿದರೂ ನಾನು ಅವರನ್ನು ಸೋಲಿಸುತ್ತೇನೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸವಾಲು ಹಾಕಿದ್ದಾರೆ. ಕುಶಾಲನಗರದಲ್ಲಿ ಮಂಗಳವಾರ ನಡೆದ ಸೋಮವಾರಪೇಟೆ ಮಂಡಲ ಎಸ್ಟಿ ಸಮಾವೇಶದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಅವರು ಬಾದಾಮಿ ಬಿಟ್ಟು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿ ಈಗ ಅಲ್ಲಿಂದಲೂ ಹಿಂದೆ ಸರಿಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರು ಸಿಎಂ ಆಗಿದ್ದವರು ಕ್ಷೇತ್ರಕ್ಕಾಗಿ ಹುಡುಕಾಡುವ ಸ್ಥಿತಿ ಬಂದಿದೆ.

Latest Videos

undefined

ಸಿದ್ದರಾಮಯ್ಯ ಕೊಡಗಿನಲ್ಲೂ ಎಲ್ಲಿ ಬೇಕಾದರೂ ಬಂದು ಸ್ಪರ್ಧಿಸಲಿ. ಅವರ ಎದುರು ನಾನು ಸ್ಪರ್ಧಿಸಿ, ಅವರನ್ನು ಸೋಲಿಸುತ್ತೇನೆ. ಮಡಿಕೇರಿ ಅಥವಾ ವಿರಾಜಪೇಟೆ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಲಿ ಎರಡು ಕ್ಷೇತ್ರದ ಎಲ್ಲಿಯಾದರೂ ಅವರ ವಿರುದ್ಧ ಸ್ಪರ್ಧಿಸಿ ಅವರನ್ನು ಸೋಲಿಸುತ್ತೇನೆ. ಅವರು ಬಂದು ಕೊಡಗಿನಲ್ಲಿ ಸ್ಪರ್ಧಿಸಲಿ ಎಂದು ಅಪ್ಪಚ್ಚು ರಂಜನ್ ಸವಾಲು ಹಾಕಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ 15 ಸಾವಿರ ಮತಗಳ ಅಂತರದಲ್ಲಿ ಸೋತರು. ಬದಾಮಿಯಲ್ಲಿ ಕೇವಲ 700 ಮತಗಳ ಅಂತರದಲ್ಲಿ ಗೆದ್ದರು. ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ಮಾಡಿ ಹಿಂದೂ ಮುಸ್ಲಿಂ ಅಂತ ಸಮಾಜವನ್ನು ಒಡೆದು ಹಾಕಿದರು.

ಹೀಗಾಗಿ ಜನರಿಗೆ ಅವರ ಮೇಲೆ ತೀವ್ರ ಸಿಟ್ಟಿದೆ. ಆದ್ದರಿಂದ ಸಿದ್ದರಾಮಯ್ಯ ಅವರನ್ನು ಸೋಲಿಸಲೇ ಬೇಕು ಎಂದು ಮತದಾರರು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಕರ್ನಾಟಕದ ಕಾಶ್ಮೀರ ಎಂದು ಪ್ರಸಿದ್ಧಿ ಪಡೆದಿರುವ ಕೊಡಗು ಜಿಲ್ಲೆ ಬೇಸಿಗೆ ಹಿನ್ನೆಲೆಯಲ್ಲಿ ಬಿಸಿಯಾಗುವುದಕ್ಕಿಂತ ಚುನಾವಣೆ ಹಿನ್ನೆಲೆಯಲ್ಲಿಯೇ ಅತೀ ಹೆಚ್ಚು ಬಿಸಿಯಾಗುತ್ತಿದೆ. ಪ್ರತಿಯೊಂದು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಪ್ಲಾನ್ ರೂಪಿಸುತ್ತಿವೆ. ಪ್ರತ್ಯೇಕವಾಗಿ ಪ್ರತೀ ಸಮುದಾಯಗಳ, ಮೋರ್ಚಾಗಳ ಸಮಾವೇಶ ಮಾಡುತ್ತಿವೆ.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಕೊಡಗು ಬಿಜೆಪಿ ಪ್ರತೀ ಸಮುದಾಯಗಳ ಪ್ರತ್ಯೇಕ ಸಮಾವೇಶ ಮಾಡುವ ಜೊತೆಗೆ ಆಯಾ ಸಮುದಾಯಗಳ ಹಿರಿಯರು, ಮುಖಂಡರು ಮತ್ತು ಪಂಚಾಯಿತಿ ಪ್ರತಿನಿಧಿಗಳನ್ನು ಟಾರ್ಗೆಟ್ ಮಾಡಿ ಅವರನ್ನು ಸನ್ಮಾನಿಸಲಾಗುತ್ತಿದೆ. ಹೌದು ಹೀಗೆ ಸನ್ಮಾನಿಸುವುದರ ಹಿಂದೆ ಆಯಾ ಸಮುದಾಯ, ಜನಾಂಗಗಳ ಮತಗಳನ್ನು ಹಿಡಿದಿಟ್ಟು ಕ್ರೂಢೀಕರಣ ಮಾಡುವುದಕ್ಕೆ ಹೊಸ ಪ್ಲಾನ್ ರೂಪಿಸಿದೆ. ಮಂಗಳವಾರವೂ ಕೊಡಗಿನ ಕುಶಾಲನಗರದಲ್ಲಿ ಸೋಮವಾರಪೇಟೆ ಮಂಡಲ ಸಮಾವೇಶ ಮಾಡಲಾಯಿತು.

'ಗೋ ಬ್ಯಾಕ್ ಸೋಮಣ್ಣ' ಚಾಮರಾಜನಗರದಿಂದ ಕಣಕ್ಕಿಳಿಯಲು ಮುಂದಾದ

ಪಟ್ಟಣದ ಎಪಿಸಿಎಂಎಸ್ಸಿ ಸಭಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಎಸ್ಟಿ ಸಮುದಾಯದ ಹಿರಿಯ ಮುಖಂಡರಿಗೆ ಹಣ್ಣು ಹಂಪಲು ಕೊಟ್ಟು, ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನಿಸಲಾಗುತ್ತಿದೆ. ಜೊತೆಗೆ ಎಸ್ಟಿ ಸಮುದಾಯದಿಂದ ಗೆದ್ದಿರುವ ಸೋಮವಾರಪೇಟೆ ಮಂಡಲದ ಎಲ್ಲಾ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಪಕ್ಷಕ್ಕಾಗಿ ದುಡಿಯುತ್ತಿರುವ ಹಿರಿಯ ಮುಖಂಡರನ್ನು ಗೌರವಿಸಿ ಸನ್ಮಾನಿಸಲಾಯಿತು. ಆ ಮೂಲಕ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಿ ಅವರ ಮೂಲಕ ಮತಗಳನ್ನು ಕ್ರೂಢೀಕರಿಸುವ ಹೊಸ ಪ್ಲಾನ್ ಮಾಡುತ್ತಿದೆ.

ಯುಗಾದಿ ಹಬ್ಬದಂದು ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ, ಟಿಕೆಟ್ ಆಕಾಂಕ್ಷಿಗಳಿಗೆ ಢವಢವ

ಸಮಾವೇಶಕ್ಕೂ ಮುನ್ನ ಕುಶಾಲನಗರದ ಗಣಪತಿ ದೇವಾಲಯದ ಬಳಿಯಿಂದ ಮೆರವಣಿಗೆ ಆರಂಭಿಸಿದ ಬಿಜೆಪಿ ಎಸ್ಟಿ ಮೋರ್ಚಾದ ನೂರಾರು ಮುಖಂಡರು, ಕಾರ್ಯಕರ್ತರು ಪಟ್ಟಣದ ಎಪಿಸಿಎಂಸಿ ಸಭಾಂಗಣದವರೆಗೆ ಸಾಗಿದರು. ಮೆರವಣಿಗೆಯುದ್ಧಕ್ಕೂ ಬಿಜೆಪಿ ಪರವಾಗಿ ಘೋಷಣೆ ಕೂಗಿದರು. ಒಟ್ಟಿನಲ್ಲಿ ಬಿಜೆಪಿ ಕೊಡಗಿನಲ್ಲಿ ಎಲ್ಲಾ ಸಮುದಾಯಗಳ ಮುಖಂಡರು, ಮತ್ತು ಆ ಸಮುದಾಯಗಳನ್ನು ಪ್ರತಿನಿಧಿಸಿರುವ ಸ್ಥಳೀಯ ಜನ ಪ್ರತಿನಿಧಿಗಳನ್ನು ಸನ್ಮಾನಿಸಿ ಮತಗಳನ್ನು ಕ್ರೂಢೀಕರಿ ಗೆಲುವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ.

click me!