ಕುಗ್ರಾಮದ ಮಕ್ಕಳು ಕೊಟ್ಟ ಉತ್ತರ ಕೇಳಿ ಸುರೇಶ್ ಕುಮಾರ್ ಖುಷ್

By Kannadaprabha NewsFirst Published Oct 4, 2020, 7:38 AM IST
Highlights

ಕುಗ್ರಾಮ ಒಂದಕ್ಕೆ ಸಚಿವ ಸುರೇಶ್ ಕುಮಾರ್ ಅವರು ಭೇಟಿ ನೀಡಿದ್ದು. ಈ ವೇಳೆ ಮಕ್ಕಳು ನೀಡಿದ ಉತ್ತರ ಕೇಳಿ ಸ್ವತಃ ಸಚಿವರೇ ದಂಗಾಗಿದ್ದಾರೆ. 

ಹನೂರು (ಅ.04):  ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕುಗ್ರಾಮಗಳಿಗೆ ಶನಿವಾರ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮಕ್ಕಳಿಗೆ ಮಗ್ಗಿ ಹೇಳಿಸಿ ಗಮನ ಸೆಳೆದರು. ಇಂಡಿಗನತ್ತ ಗ್ರಾಮಕ್ಕೆ ತೆರಳಿದ್ದ ವೇಳೆ ಸ್ವಾಗತಿಸಲು ನಿಂತಿದ್ದ ಬಾಲಕಿಯನ್ನು ಕಂಡು ‘ಮಗ್ಗಿ ಬರುತ್ತಾ? 6ನೇ ಮಗ್ಗಿ ಹೇಳು’ ಎಂದರು. 

ಕೂಡಲೇ ಬಾಲಕಿ 6ನೇ ಮಗ್ಗಿ ಹೇಳಿದಳು. ಉಲ್ಟಾಹೇಳಿಸಿಯೂ ಕೇಳಿದಕ್ಕೆ ಪಟಾಪಟ್‌ ಉತ್ತರ ಹೇಳಿದ್ದಕ್ಕೆ ಬಾಲಕಿ ಬೆನ್ನುತಟ್ಟಿಮುಂದೆ ಸಾಗಿದರು. ಮೆಂದಾರೆ ಗ್ರಾಮದ ಬಾಲಕನೊಬ್ಬನನ್ನು ಮಾತನಾಡಿಸಿ, ‘ಕೊರೊನಾ ಕಾಲದಲ್ಲಿ ಶಾಲೆ ತೆರೆಯಬೇಕೆ?’ ಎಂದು ಕೇಳಿದ್ದಕ್ಕೆ ‘ನಮ್ಮೂರಿನಲ್ಲೇ ಸ್ಕೂಲ್‌ ಓಪನ್‌ ಮಾಡಿ ಸರ್‌’ ಎಂದು ಉತ್ತರಿಸಿದ. 

ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಯಾವಾಗ? ಮಹತ್ವದ ಮಾಹಿತಿ ನೀಡಿದ ಸಚಿವರು ..

‘ಸ್ಕೂಲ್‌ ಏಕೆ ತೆಗೆಯಬೇಕು?’ ಎಂದು ಸಚಿವರು ಕೇಳಿದ್ದಕ್ಕೆ ‘ನಿಮ್ಮ ಥರ ಆಫೀಸರ್‌ ಆಗಲು’ ಎಂದು ಉತ್ತರಿಸಿದ. ಬಾಲಕನ ಉತ್ತರಕ್ಕೆ ಸಚಿವರಾದಿಯಾಗಿ ಅಲ್ಲಿದ್ದವರೆಲ್ಲರೂ ಖುಷಿಪಟ್ಟರು.
 

click me!