ಸಿಡಿ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿದರೆ ತಪ್ಪೇನಿಲ್ಲ: ಸಚಿವೆ ಜೊಲ್ಲೆ

By Kannadaprabha NewsFirst Published Feb 3, 2023, 7:30 PM IST
Highlights

ಮುಜರಾಯಿ, ವಕ್ಫ್ ಇಲಾಖೆಗೆ ಸೇರಿದ ಜಮೀನಿನ ಸರ್ವೆ ಕಾರ್ಯ ಕಂದಾಯ ಇಲಾಖೆಯಿಂದ ನಡೆಯುತ್ತಿದೆ ಮುಜರಾಯಿ, ವಕ್ಫ್ ಇಲಾಖೆಗೆ ಸೇರಿದ ಜಮೀನಿನ ಕುರಿತು ಈವರೆಗೂ ಸರ್ವೆ ಕಾರ್ಯ ನಡೆದಿರಲಿಲ್ಲ. ನಾನು ಸಚಿವೆಯಾದ ಬಳಿಕ ಕಂದಾಯ ಇಲಾಖೆಯಿಂದ ಸರ್ವೆ ಕಾರ್ಯ ಮಾಡಿಸಲಾಗುತ್ತಿದ್ದು, ಡ್ರೋಣ ಸರ್ವೆ ಕಾರ್ಯ ಪ್ರಗತಿಯಲ್ಲಿದೆ: ಸಚಿವೆ ಶಶಿಕಲಾ ಜೊಲ್ಲೆ 

ಬೆಳಗಾವಿ(ಫೆ.03): ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ಅದರಲ್ಲೇನೂ ತಪ್ಪಿಲ್ಲ ಎಂದು ಮುಜರಾಯಿ ವಕ್ಫ್ ಹಾಗೂ ಹಜ್‌ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿಡಿ ಪ್ರಕರಣ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದೆ. ಈ ಕುರಿತು ಮುಖ್ಯಮಂತ್ರಿ ಗಮನಿಸುತ್ತಿದ್ದಾರೆ. ಈ ಬಗ್ಗ ನನಗೇನೂ ಹೆಚ್ಚಿನ ಮಾಹಿತಿ ಇಲ್ಲ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವುದರಲ್ಲಿ ತಪ್ಪೇನಿಲ್ಲ ಎಂದರು. 

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್‌, ಮಿಕ್ಸರ್‌ ಸದ್ದು ನಡೆಯುತ್ತಿದೆಯಲ್ಲ, ನಿಮ್ಮಲ್ಲಿ ಏನು ನಡೆಯುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ ಜೊಲ್ಲೆ, ನಮ್ಮ ಕಡೆ ಅಭಿವೃದ್ಧಿ ಕೆಲಸ ನಡೆಯುತ್ತಿವೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಕೇಳಿಲ್ಲ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಸರ್ಕಾರದ ಎಡವಟ್ಟು: 40 ವರ್ಷ ವಾಸವಿರುವ ಜಿನರಾಳ ಗ್ರಾಮ ಖಾಲಿ ಮಾಡುವಂತೆ ನೋಟಿಸ್‌

ಮುಜರಾಯಿ, ವಕ್ಫ್ ಇಲಾಖೆಗೆ ಸೇರಿದ ಜಮೀನಿನ ಸರ್ವೆ ಕಾರ್ಯ ಕಂದಾಯ ಇಲಾಖೆಯಿಂದ ನಡೆಯುತ್ತಿದೆ ಮುಜರಾಯಿ, ವಕ್ಫ್ ಇಲಾಖೆಗೆ ಸೇರಿದ ಜಮೀನಿನ ಕುರಿತು ಈವರೆಗೂ ಸರ್ವೆ ಕಾರ್ಯ ನಡೆದಿರಲಿಲ್ಲ. ನಾನು ಸಚಿವೆಯಾದ ಬಳಿಕ ಕಂದಾಯ ಇಲಾಖೆಯಿಂದ ಸರ್ವೆ ಕಾರ್ಯ ಮಾಡಿಸಲಾಗುತ್ತಿದ್ದು, ಡ್ರೋಣ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಬಜೆಟ್‌ ಅಧಿವೇಶನಕ್ಕೂ ಮೊದಲೇ ಇಲಾಖೆಯ ಜಮೀನಿನ ಸರ್ವೆ ವರದಿ ಬರಲಿದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಬಾರಿಯ ಬಜೆಟ್‌ನಲ್ಲಿ ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಬೇಡಿಕೆ ಸಲ್ಲಿಸಲಾಗಿದೆ. ಕಾಶಿಯಾತ್ರೆಗೆ ಈಗಾಗಲೇ ಎರಡು ಟ್ರಿಪ್‌ ರೈಲನ್ನು ಬಿಡಲಾಗಿದ್ದು, ಫೆ.14ರ ಬಳಿಕ ಮತ್ತೆ ಒಂದು ಟ್ರಿಪ್‌ ರೈಲನ್ನು ಬಿಡಲಾಗುವುದು. ಕಾಶಿಯಾತ್ರಿಕರಿಗೆ . 15 ಸಾವಿರ ವೆಚ್ಚದಲ್ಲಿ 8 ದಿನಗಳ ಪ್ರವಾಸ ಕಲ್ಪಿಸಲಾಗಿದೆ. ಐದು ಸಾವಿರ ಹಣವನ್ನು ಸರ್ಕಾರವೇ ಭರಿಸುತ್ತಿದೆ. ಹಜ್‌ ಯಾತ್ರಿಕರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ಸಿಡಿ ವಿಚಾರದಲ್ಲಿ ವೈಯಕ್ತಿಕ ಟೀಕೆ ಬೇಡ: ಬಾಲಚಂದ್ರ ಜಾರಕಿಹೊಳಿ

ನಾನು ಸಚಿವೆಯಾದ ಬಳಿಕ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ರಾಜ್ಯದ ಎ ಗ್ರೇಡ್‌ ದೇವಸ್ಥಾನಗಳ ವರದಿ ಪಡೆಯಲಾಗುತ್ತಿದ್ದು, ಮೊದಲ ಹಂತದಲ್ಲಿ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಸೇರಿದಂತೆ ರಾಜ್ಯದ 25 ದೇವಸ್ಥಾನಗಳನ್ನು ಅಭಿವೃದ್ಧಿಗೊಳಿಸಲು ಮಾಸ್ಟರ್‌ ಪ್ಲಾನ್‌ ಮಾಡಲಾಗಿದೆ ಎಂದು ಹೇಳಿದರು.

ಮುಜರಾಯಿ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಈಗಾಗಲೇ ಎರಡ್ಮೂರು ಸಭೆಗಳನ್ನು ಮಾಡಲಾಗಿದೆ. ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

click me!