ತನ್ನ ಸ್ವಾಗತಕ್ಕಾಗಿ ನೀಡಿದ ಹೂವಿನ ಬೊಕೆಯಲ್ಲಿ ಪ್ಲಾಸ್ಟಿಕ್ ಕವರ್ ಸುತ್ತಿದ್ದನ್ನು ಕಂಡು ‘ನೋ ಪ್ಲಾಸ್ಟಿಕ್’ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಇಲಾಖೆಯ ಸಚಿವ ಪ್ರಹ್ಲಾದ್ ವಿ. ಜೋಷಿ ಹೇಳಿದ್ದಾರೆ. ವಿವೇಕಾನಂದ ಕಾಲೇಜ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಪುತ್ತೂರಿಗೆ ಆಗಮಿಸಿದ್ದಾರೆ.
ಮಂಗಳೂರು(ಅ.01): ಪುತ್ತೂರಿನ ವಿವೇಕಾನಂದ ಕಾಲೇಜ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಇಲಾಖೆಯ ಸಚಿವ ಪ್ರಹ್ಲಾದ್ ವಿ. ಜೋಷಿ ಮಂಗಳವಾರ ಬೆಳಗ್ಗೆ ರೈಲಿನಲ್ಲಿ ಪುತ್ತೂರಿಗೆ ಆಗಮಿಸಿದರು. ಇಲ್ಲಿನ ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಬಿಜೆಪಿ ಮುಖಂಡರು ಹಾಗೂ ಅಧಿಕಾರಿಗಳು ಸಚಿವರನ್ನು ಸ್ವಾಗತಿಸಿದರು.
ವಿವೇಕಾನಂದ ಕಾಲೇಜಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಅದರ ಅಂಗ ಸಂಸ್ಥೆ ವಿವೇಕಾನಂದ ಅಧ್ಯಯನ ಕೇಂದ್ರ ‘ಯಶಸ್’ನ ನೇತೃತ್ವದಲ್ಲಿ ನಡೆಯುವ ಐಎಎಸ್, ಐಪಿಎಸ್ ತರಬೇತಿ ಸಂಸ್ಥೆಗಳ ಮತ್ತು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಲು ರೈಲಿನಲ್ಲಿ ಸಚಿವರು ಆಗಮಿಸಿದರು.
ಈ ಸಂದರ್ಭ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಎಚ್. ಕೆ. ಕೃಷ್ಣಮೂರ್ತಿ, ತಹಸೀಲ್ದಾರ್ ಅನಂತಶಂಕರ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಬಿಜೆಪಿ ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಯಶಸ್‌ನ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
’ನೋ ಪ್ಲಾಸ್ಟಿಕ್’ ಎಂದ ಕೇಂದ್ರ ಸಚಿವ ಪ್ರಹ್ಲಾದ್ ವಿ ಜೋಷಿ
ತನ್ನ ಸ್ವಾಗತಕ್ಕಾಗಿ ನೀಡಿದ ಹೂವಿನ ಬೊಕೆಯಲ್ಲಿ ಪ್ಲಾಸ್ಟಿಕ್ ಕವರ್ ಸುತ್ತಿದ್ದನ್ನು ಕಂಡು ‘ನೋ ಪ್ಲಾಸ್ಟಿಕ್’ ಎಂದು ಹೂವಿನ ಬೊಕ್ಕೆಯನ್ನು ಸ್ವೀಕರಿಸದೆ ಪ್ಲಾಸ್ಟಿಕ್‌ನಿಂದಾಗುವ ಹಾನಿಯ ಕುರಿತು ಕಲ್ಲಿದ್ದಲು ಮತ್ತು ಗಣಿ ಇಲಾಖಾ ಕೇಂದ್ರ ಸಚಿವ ಪ್ರಹ್ಲಾದ ವಿ. ಜೋಷಿ ಅವರು ರೈಲು ನಿಲ್ದಾಣದಲ್ಲೇ ಜಾಗೃತಿ ಮೂಡಿಸಿದ ಘಟನೆ ನಡೆಯಿತು. ಪ್ಲಾಸ್ಟಿಕ್ ರಹಿತ ಹೂವಿನ ಬೊಕ್ಕೆಗಳನ್ನು ಮಾತ್ರ ಸ್ವೀಕರಿಸಿದರು.
ದಸರಾ ವೇಳೆ ಉಗ್ರರ ದಾಳಿ ಭೀತಿ : ರಾಜ್ಯದ 8 ಕಡೆ ಎಚ್ಚರಿಕೆ