ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಎದುರೇ ಗೋ ಮಾಂಸ ಸೇವಿಸಲಿ ಎಂದು ಸಚಿವ ಪ್ರಭು ಚವಾಣ್ ಸವಾಲು ಹಾಕಿದ್ದಾರೆ.
ಮಡಿಕೇರಿ (ಫೆ.17): ‘ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಅವರು ಬೇಕಾದರೆ ಗೋಮಾಂಸ ತಿನ್ನಲಿ. ನನ್ನ ಎದುರೇ ತಿನ್ನಲಿ ನೋಡೋಣ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗೋಮಾಂಸ ತಿನ್ತೀನಿ, ತಿನ್ತೀನಿ ಅನ್ನೋದಲ್ಲ, ಅವರು ತಿಂದು ತೋರಿಸಲಿ. ಅವರ ಮನೆಯಲ್ಲೂ ಗೋವುಗಳಿವೆ. ದೀಪಾವಳಿ, ಯುಗಾದಿಗೆ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಎಲ್ಲರೂ ಗೋ ಪೂಜೆ ಮಾಡುತ್ತಾರೆ. ಆದರೂ ಅವರು ರಾಜಕೀಯ ಕಾರಣಕ್ಕೆ ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ ಮಾಡುತ್ತಿದ್ದಾರೆ. ವಿರೋಧ ಮಾಡೋದು ವಿರೋಧ ಪಕ್ಷದ ಕೆಲಸ. ಆದರೆ, ನಾವು ಮಾತ್ರ ಗೋರಕ್ಷಣೆ ಮಾಡಿಯೇ ಮಾಡುತ್ತೇವೆ ಎಂದರು.
'ಗೋಮಾಂಸ ತಿನ್ನುತ್ತೇನೆ ಎಂದ ಸಿದ್ದರಾಮಯ್ಯಗೆ ಶಿಕ್ಷೆಯಾಗಲಿ' ...
‘ನನಗೆ ಗೋಮಾಂಸ ತಿನ್ನಬೇಕೆನಿಸಿದರೆ ನಾನು ತಿಂದೇ ತಿನ್ನುತ್ತೇನೆ, ಅದನ್ನು ಪ್ರಶ್ನಿಸಲು ಅವರು ಯಾರು? ಅನೇಕ ಹಿಂದೂಗಳು ಗೋಮಾಂಸ ಸೇವಿಸುತ್ತಾರೆ’ ಎಂದು ಸಿದ್ದರಾಮಯ್ಯ ಹಿಂದೆ ಹೇಳಿದ್ದರು.