ಮೂವರು ಬಡ ವಿದ್ಯಾರ್ಥಿಗಳ ವೈದ್ಯಕೀಯ ಕನಸಿಗೆ ಆಸರೆಯಾದ MB ಪಾಟೀಲ್; ಹಣಕಾಸು ನೆರವು!

Published : Nov 17, 2026, 09:45 AM IST
MB Patil

ಸಾರಾಂಶ

ಆರ್ಥಿಕ ಸಂಕಷ್ಟದಲ್ಲಿದ್ದ ಮೂವರು ಪ್ರತಿಭಾವಂತ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಚಿವ ಎಂ.ಬಿ.ಪಾಟೀಲ ಅವರು ಬಿ.ಎಲ್.ಡಿ.ಇ ಸಂಸ್ಥೆಯ ವತಿಯಿಂದ ಹಣಕಾಸು ನೆರವು ನೀಡಿದರು. ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಸೀಟು ಪಡೆದಿದ್ದ ಈ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಹಾಗೂ ವಸತಿ ವೆಚ್ಚಕ್ಕಾಗಿ ಚೆಕ್ ವಿತರಿಸಲಾಯಿತು.

ವಿಜಯಪುರ: ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಎಂ.ಬಿ.ಬಿ.ಎಸ್ ಸೀಟು ಪಡೆದರೂ ಆರ್ಥಿಕ ಸಮಸ್ಯೆಯಿಂದಾಗಿ ಸಂಕಷ್ಟದಲ್ಲಿದ್ದ ಮೂವರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಣಕಾಸು ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

ಭಾನುವಾರ ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಮೂವರು ವಿದ್ಯಾರ್ಥಿಗಳಾದ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ದಾನಮ್ಮ ಹಣಮಂತ ಮಾಳಿ, ಮಕಣಾಪುರ.ಎಲ್.ಟಿ 1ರ ಸುಪ್ರೀತ ಕಾಸು ಲಮಾಣಿ ಹಾಗೂ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ಪ್ರಿಯಾಂಕಾ ಸುರೇಶ ಕುಂಬಾರಗೆ ಎಂ.ಬಿ.ಬಿ.ಎಸ್ ಕೋರ್ಸಿನ ಬೋಧನಾ ಶುಲ್ಕ, ಊಟ ಮತ್ತು ವಸತಿಗೆ (ಹಾಸ್ಟೇಲ್ ಮತ್ತು ಮೆಸ್) ಅಗತ್ಯವಾಗಿರುವ ಹಣದ ಚೆಕ್‌ನ್ನು ಸಚಿವರು ವಿತರಿಸಿದರು.

ಮೂವರು ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ

ಘೋಣಸಗಿ ವಿದ್ಯಾರ್ಥಿನಿ ದಾನಮ್ಮ ಮಾಳಿ ನೀಟ್ ಪರೀಕ್ಷೆಯಲ್ಲಿ 514 ಅಂಕಗಳೊಂದಿಗೆ 72,996ನೇ ರ್‍ಯಾಂಕ್ ಪಡೆದು ಚಿಕ್ಕಬಳ್ಳಾಪುರದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದು, ಇವರಿಗೆ ಮೊದಲ ಕಂತು ₹1,72,000 ನೆರವಿನ ಚೆಕ್‌ನ್ನು ಸಚಿವರು ವಿತರಿಸಿದರು. ಮಕಣಾಪುರ ಗ್ರಾಮದ ಸುಪ್ರೀತ ಲಮಾಣಿ ನೀಟ್ ಪರೀಕ್ಷೆಯಲ್ಲಿ 65,729ನೇ ರ್‍ಯಾಂಕ್ ಪಡೆದು ಬೆಳಗಾವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಎಂ.ಬಿ.ಬಿ.ಎಸ್.ಸೀಟು ಪಡೆದಿದ್ದು, ಅವರಿಗೆ ಮೊದಲ ಕಂತು ₹1,39,530 ನೆರವಿನ ಚೆಕ್ ಸಚಿವರು ವಿತರಿಸಿದರು. ಬಳೂತಿ ಗ್ರಾಮದ ಪ್ರಿಯಾಂಕ ಕುಂಬಾರ ನೀಟ್ ಪರೀಕ್ಷೆಯಲ್ಲಿ 40,153ನೇ ರ್‍ಯಾಂಕ್ ಪಡೆದು ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದು, ಅವರಿಗೆ ಮೊದಲ ಕಂತು ₹1,60,160 ಆರ್ಥಿಕ ನೆರವಿನ ಚೆಕ್‌ನ್ನು ಸಚಿವ ಎಂ.ಬಿ.ಪಾಟೀಲರು ವಿತರಿಸಿದರು.

ಮೂವರು ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಕಾಲೇಜು, ಹಾಸ್ಟೆಲ್, ಮೆಸ್ ಹಾಗೂ ಇತರ ಶೈಕ್ಷಣಿಕ ವೆಚ್ಚಗಳ ಮೊದಲ ಕಂತಿನ ಒಟ್ಟು ₹4,71,690 ಮೊತ್ತವನ್ನು ಬಿ.ಎಲ್.ಡಿ.ಇ ಸಂಸ್ಥೆಯ ವತಿಯಿಂದ ಸಚಿವರು ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್.ಎಸ್.ಪಾಟೀಲ ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

ಆರ್ಥಿಕ ನೆರವು ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ

ಬಳಿಕ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಕೇವಲ ಆರ್ಥಿಕ ನೆರವಿನ ಸದುಪಯೋಗ ಪಡೆದುಕೊಳ್ಳುವುದಷ್ಟೇ ಅಲ್ಲದೆ, ಶ್ರದ್ಧೆ ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕು. ಭವಿಷ್ಯದಲ್ಲಿ ಜವಾಬ್ದಾರಿಯುತ, ಆದರ್ಶ ವೈದ್ಯರಾಗಿ ರೂಪುಗೊಂಡು ಸಮಾಜದ ಬಡವರು, ದುರ್ಬಲರು ಹಾಗೂ ಅಗತ್ಯವಿರುವವರಿಗೆ ಮಾನವೀಯತೆಯಿಂದ ವೈದ್ಯಕೀಯ ಸೇವೆ ಸಲ್ಲಿಸುವಂತಾಗಬೇಕು ಎಂದು ಸಲಹೆ ನೀಡಿ ಶುಭ ಕೋರಿದರು.

PREV
Read more Articles on
click me!

Recommended Stories

Bengaluru: ಮರಕ್ಕೆ ಡಿಕ್ಕಿ ಹೊಡೆದ ಸಪ್ತಗಿರಿ ಕಾಲೇಜಿನ ವಿದ್ಯಾರ್ಥಿಗಳ ಕಾರ್; ಇಬ್ಬರ ಸಾವು
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಇಂದು, ನಾಳೆ ವಿದ್ಯುತ್‌ ವ್ಯತ್ಯಯ: ಪವರ್ ಕಟ್ ಸಮಯ