ಬಿಜೆಪಿ ಸಚಿವರೋರ್ವರು ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ

Kannadaprabha News   | Asianet News
Published : Jul 06, 2021, 12:34 PM IST
ಬಿಜೆಪಿ ಸಚಿವರೋರ್ವರು ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ

ಸಾರಾಂಶ

ಬಿಜೆಪಿ ಸಚಿವರೋರ್ವರು ಕಾಂಗ್ರೆಸ್ ಸೇರ್ಪಡೆ ವಿಚಾರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಸಚಿವರಿಂದಲೇ ಸ್ಪಷ್ಟನೆ 34 ವರ್ಷ ರಾಜಕಾರಣ ಮಾಡಿದ್ದೀನಿ-ಯಾರನ್ನಾದ್ರೂ ಎದುರಿಸುತ್ತೇನೆ

ತುಮಕೂರು (ಜು.06): ಕಾಂಗ್ರೆಸ್‌ಗೆ ಹೋಗುವ ಸ್ಥಿತಿಗತಿ ನನಗೆ ಬಂದಿಲ್ಲ  ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

ಅವರು ಸೋಮವಾರ ತುಮಕೂರಿನಲ್ಲಿ ಮಾತನಾಡುತ್ತಾ ಕಾಂಗ್ರೆಸ್‌ನವರು ಯಾರೂ ನನ್ನನ್ನು ಕರೆದಿಲ್ಲ, ನಾನು ಯಾವ ಕಾಂಗ್ರೆಸ್‌ವರಿಗೂ ಬರುತ್ತೇನೆ ಎಂದು ಹೇಳಿಲ್ಲ ಎಂದರು. 

ಸಿದ್ದರಾಮಯ್ಯ ಅವರು ಚಿಕ್ಕನಾಯಕನಹಳ್ಳಿಯಲ್ಲಿ ಸ್ಪರ್ಧಿಸಿದರೆ ಸಂತೋಷ. ಅವರನ್ನು ಬರಬೇಡಿ ಎನ್ನಲಾಗದು. ದೇವೇಗೌಡರು ತುಮಕೂರಿನಲ್ಲಿ ನಿಂತು ಏನಾಯ್ತು. ಹಾಗೆಯೇ ಚಿಕ್ಕನಾಯಕನಹಳ್ಳಿಯಲ್ಲೂ  ಆಗುತ್ತದೆ ಎಂದರು. 

ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ, ನಮ್ಮ ಅಭಿಪ್ರಾಯ ಯಾರೂ ಕೇಳ್ತಿಲ್ಲ: ಸಚಿವ ಮಾಧುಸ್ವಾಮಿ .

ನಾವು 34 ವರ್ಷ ರಾಜಕಾರಣ ಮಾಡಿ ಬಂದಿದ್ದೀವಿ. ರಾಜಕಾರಣದಲ್ಲಿ ಯಾರೇ ನಿಂತರು ಎದುರಿಸಬೇಕು, ಹಾಗೇ ಎದುರಿಸುವುದಾಗಿಯೂ ತಿಳಿಸಿದರು. 

ಅವರು ನಿಲ್ಲುತ್ತಾರೆ ಇವರು ನಿಲ್ಲುತ್ತಾರೆ ಎಂದು ಯೋಚನೆ ಮಾಡಿಲ್ಲ ಎಂದ ಮಾಧುಸ್ವಾಮಿ ನಾವು ನಿಂತುಕೊಳ್ಳಬೇಕು. ನಿಂತುಕೊಳ್ಳುವುದಾಗಿ ತಿಳಿಸಿದರು. 

PREV
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!