ತಾಯಿ ಸ್ಥಾನದಲ್ಲಿ‌ ನಿಂತು ನಿಮ್ಮ ಬೇಡಿಕೆ ಈಡೇರಿಸುವೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

By Kannadaprabha NewsFirst Published Nov 30, 2023, 5:01 PM IST
Highlights

ವಿಶೇಷಚೇತನ ಮಕ್ಕಳೆಂದರೇ ದೇವರ ಮಕ್ಕಳು, ಕರುಣಾಮಯಿಗಳು, ನಿಮ್ಮ ಉಜ್ವಲ ಭವಿಷ್ಯಕ್ಕೆ ಸರ್ಕಾರ ಕಂಕಣಬದ್ಧವಾಗಿ ನಿಲ್ಲುತ್ತದೆ. ತಾಯಿಯ ಸ್ಥಾನದಲ್ಲಿ‌ ನಿಂತು‌ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಬೆಳಗಾವಿ (ನ.29): ವಿಶೇಷ ಚೇತನ ಮಕ್ಕಳೆಂದರೇ ದೇವರ ಮಕ್ಕಳು, ಕರುಣಾಮಯಿಗಳು, ನಿಮ್ಮ ಉಜ್ವಲ ಭವಿಷ್ಯಕ್ಕೆ ಸರ್ಕಾರ ಕಂಕಣಬದ್ಧವಾಗಿ ನಿಲ್ಲುತ್ತದೆ. ತಾಯಿಯ ಸ್ಥಾನದಲ್ಲಿ‌ ನಿಂತು‌ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ನಗರದಲ್ಲಿ ವಿಕಲಚೇತನರ ಕ್ರೀಡಾಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರು ಯಾವುದೇ ವಿಷಯದಲ್ಲಿ ಹಿಂದೆ ಉಳಿಯಬಾರದೆಂದು ಇಲಾಖೆ ನಿರಂತರವಾಗಿ ನಿಮ್ಮ ಜತೆ ನಿಂತು ಕೆಲಸ ಮಾಡುತ್ತಿದೆ. ಇಲಾಖೆಯಿಂದ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು. 

ನಿಮಗೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಗಳು 24 ಗಂಟೆಗಳಲ್ಲಿ ಕ್ಲಿಯರ್ ಆಗಬೇಕೆಂದು ಸೂಚನೆಯನ್ನು‌ ನೀಡಿದ್ದೇನೆ‌. ಈ ವಿಶೇಷ ಮಕ್ಕಳ ಭವಿಷ್ಯದ ಸಲುವಾಗಿ ಕೆಲಸ ಮಾಡುತ್ತಿರುವ ಎಲ್ಲ ಶಿಕ್ಷಕರಿಗೂ ಸಹ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಯುವಸಬಲೀಕರ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ, ಮಹಿಳಾ ಮತ್ತು‌‌ ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ವಿಕಲಚೇತನರ ಇಲಾಖೆಯ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್, ಯುವರಾಜ ಕದಂ, ಶಂಕರಗೌಡ ಪಾಟೀಲ, ವಿಶೇಷ ಚೇತನ ಶಾಲೆಗಳ ಸಿಬ್ಬಂದಿ ಹಾಗೂ ಮಕ್ಕಳು‌ ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಯೋಜನೆಗೆ ಸಿದ್ದರಾಮಯ್ಯ ತಡೆ: ಶೋಭಾ ಕರಂದ್ಲಾಜೆ ಕಿಡಿ

ಬಸವಣ್ಣನವರ ಸಮಾನತೆಯ ಕನಸು ನನಸು ಮಾಡೋಣ: ವಿಶ್ವಗುರು ಬಸವಣ್ಣ 12ನೇ ಶತಮಾನದಲ್ಲಿ ಕಂಡ ಸಮಾನತೆಯ ಕನಸನ್ನು ನನಸು ಮಾಡಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ಸಮೀಪದ ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ ಬಸವ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಶ್ವಗುರು ಬಸವ ಮಂಟಪದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಜಾತೀಯತೆ ಹೋಗಲಾಡಿಸಿ, ಮಹಿಳಾ ಸಮಾನತೆ ಸಾಧಿಸುವ ಮೂಲಕ ಸಮಾಜದಲ್ಲಿ ಮೇಲು ಕೀಳೆಂಬ ಭಾವನೆ ಹೋಗಾಲಾಡಿಸಬೇಕೆಂದು ಬಸವಣ್ಣನವರು ಕನಸು ಕಂಡಿದ್ದರು. 

ಆ ದಿಸೆಯಲ್ಲಿ ಸಾಕಷ್ಟು ಕೆಲಸಗಳನ್ನೂ ಮಾಡಿದ್ದರು. ಆದರೆ ಇಂದಿಗೂ ಅವರ ಕನಸನ್ನೂ ನನಸಾಗಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಈಗ ಲೋಕಸಭೆಯಲ್ಲಿ ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡುವ ಮಸೂದೆ ಅಂಗೀಕಾರವಾಗಿದೆ. ಅದು ಬೇಗ ಜಾರಿಯಾಗಿ ಚುನಾಯಿತ ಪ್ರತಿನಿಧಿಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿದರು. ಮಹಿಳೆ ಇಂದು ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದಾಳೆ. ಉತ್ತಮ ಶಿಕ್ಷಣ ದೊರೆತರೆ ಎಂತಹ ಸಾಧನೆ ಮಾಡಲು ಹಿಂಜರಿಯುವುದಿಲ್ಲ. ಮಹಿಳೆಯರು ಕೀಳರಿಮೆ ತೊರೆದು ಸಮಾಜದ ಮುಖ್ಯವಾಹಿನಿಯಲ್ಲಿ ಬರಬೇಕು. ಆದರೂ ಮಹಿಳೆಯರ ಶೋಷಣೆ ಇನ್ನೂ ಮುಂದುವರಿದಿರುವುದು ವಿಷಾದನೀಯ. ಇಂತಹ ಶೋಷಣೆಯನ್ನು ಮಹಿಳೆಯರು ದಿಟ್ಟತನದಿಂದ ಎದುರಿಸಬೇಕಿದೆ ಎಂದರು.

ಸಿದ್ದು, ಡಿಕೆಶಿಯನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿ: ಸಂಸದ ಪ್ರತಾಪ್ ಸಿಂಹ

ವಿಕಲಚೇತನರು ಯಾವುದೇ ವಿಷಯದಲ್ಲಿ ಹಿಂದೆ ಉಳಿಯಬಾರದೆಂದು ಇಲಾಖೆ ನಿರಂತರವಾಗಿ ನಿಮ್ಮ ಜತೆ ನಿಂತು ಕೆಲಸ ಮಾಡುತ್ತಿದೆ. ಇಲಾಖೆಯಿಂದ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು. ನಿಮಗೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಗಳು 24 ಗಂಟೆಗಳಲ್ಲಿ ಕ್ಲಿಯರ್ ಆಗಬೇಕೆಂದು ಸೂಚನೆಯನ್ನು‌ ನೀಡಿದ್ದೇನೆ‌. ಈ ವಿಶೇಷ ಮಕ್ಕಳ ಭವಿಷ್ಯದ ಸಲುವಾಗಿ ಕೆಲಸ ಮಾಡುತ್ತಿರುವ ಎಲ್ಲ ಶಿಕ್ಷಕರಿಗೂ ಸಹ ಧನ್ಯವಾದಗಳು.
-ಲಕ್ಷ್ಮೀ ಹೆಬ್ಬಾಳಕರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಇಲಾಖೆ ಸಚಿವೆ.

click me!