'ಸಿದ್ದರಾಮಯ್ಯ,ಡಿಕೆಶಿ ಲಗಾಟೆ ಹೊಡೆದ್ರೂ ಬಿಜೆಪಿ ಸೋಲಿಸಲು ಆಗ್ಲಿಲ್ಲ'

Kannadaprabha News   | Asianet News
Published : Nov 11, 2020, 12:54 PM ISTUpdated : Nov 11, 2020, 01:00 PM IST
'ಸಿದ್ದರಾಮಯ್ಯ,ಡಿಕೆಶಿ ಲಗಾಟೆ ಹೊಡೆದ್ರೂ ಬಿಜೆಪಿ ಸೋಲಿಸಲು ಆಗ್ಲಿಲ್ಲ'

ಸಾರಾಂಶ

ಬಿಜೆಪಿ ಸರ್ಕಾರಕ್ಕೆ ಆಶೀರ್ವಾದವಿದೆ ಎಂಬುದು ಫಲಿತಾಂಶದಿಂದ ಸಾಬೀತು: ಜಗದೀಶ್‌ ಶೆಟ್ಟರ್‌| ಬಿಹಾರ ಚುನಾವಣೆಯ ಫಲಿತಾಂಶವೂ ಸಿವೋಟ​ರ್ಸ್‌ ಸಮೀಕ್ಷೆ ಸುಳ್ಳಾಗಿಸಿದೆ| ಬಿಜೆಪಿ ಹಾಗೂ ಎನ್‌ಡಿಎ ಮತ್ತಷ್ಟು| ರಾಷ್ಟ್ರದಲ್ಲೇ ರಾಜಕೀಯ ಧ್ರುವೀಕರಣ| 

ಹುಬ್ಬಳ್ಳಿ(ನ.11): ಆರ್‌ಆರ್‌ ನಗರ ಹಾಗೂ ಶಿರಾದಲ್ಲಿ ಮತದಾರ ಬಿಜೆಪಿಗೆ ಮತ ಹಾಕುವ ಮೂಲಕ ಬಿಜೆಪಿ ಸರ್ಕಾರವನ್ನು ಬೆಂಬಲಿಸಿದ್ದಾನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನಕಪುರ ಬಂಡೆ ಡಿ.ಕೆ. ಶಿವಕುಮಾರ ಲಗಾಟೆ ಹೊಡೆದರೂ ಬಿಜೆಪಿಯನ್ನು ಉಪಚುನಾವಣೆಯಲ್ಲಿ ಸೋಲಿಸಲು ಆಗಲಿಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

ಎರಡು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಈಗಲೇ ಅಧೋಗತಿಯತ್ತ ಸಾಗಿದೆ. ಇನ್ನಷ್ಟು ಮೂರಾಬಟ್ಟೆಯಾಗುತ್ತದೆ ಎಂದು ಭವಿಷ್ಯ ನುಡಿದರು.
ಮೈಸೂರು ಭಾಗದಲ್ಲಿ ಬಿಜೆಪಿಗೆ ಬೇಸ್‌ ಇರಲಿಲ್ಲ. ಆದರೆ ಕಳೆದ ಚುನಾವಣೆಯಲ್ಲಿ ಮಂಡ್ಯದಲ್ಲಿ ಒಂದು ಸ್ಥಾನ ಗೆದ್ದಿದ್ದೆವು. ಇದೀಗ ತುಮಕೂರು ಜಿಲ್ಲೆ ಶಿರಾದಲ್ಲಿ ಗೆಲುವು ಕಂಡಿದ್ದೇವೆ. ಅಲ್ಲೂ ನಮ್ಮ ಪಕ್ಷ ಬಲಾಢ್ಯವಾಗುತ್ತಿದೆ. ಕಾಂಗ್ರೆಸ್‌ ಬರಬರುತ್ತಾ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಡಿಕೆಶಿ ಅವರನ್ನು ಕನಕಪುರ ಬಂಡೆ ಎಂದೆಲ್ಲ ಹೇಳುತ್ತಾರೆ. ಆರ್‌ಆರ್‌ ನಗರದಲ್ಲಿ ಬಂಡೆಗೆ ಏನು ಮಾಡಲು ಆಗಲಿಲ್ಲ ಎಂದರು. ಪಕ್ಷದ ಮೇಲೆ ನಂಬಿಕೆ ಇಟ್ಟು ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ. ಜನತೆ ಆಶೀರ್ವಾದ ಬಿಜೆಪಿಯ ಈ ಫಲಿತಾಂಶವೇ ಸಾಬೀತುಪಡಿಸಿದೆ. ಕಾಂಗ್ರೆಸ್‌ ರಾಜ್ಯದಲ್ಲಿ ಮೂರಾಬಟ್ಟೆಆಗುತ್ತಿದೆ ಎಂದು ನುಡಿದರು.

'2023ಕ್ಕೆ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ'

ಬಿಹಾರ ಚುನಾವಣೆ:

ಇನ್ನು ಬಿಹಾರ ಚುನಾವಣೆಯ ಫಲಿತಾಂಶವೂ ಸಿವೋಟ​ರ್ಸ್‌ ಸಮೀಕ್ಷೆಯನ್ನು ಸುಳ್ಳಾಗಿಸಿದೆ. ಬಿಹಾರದ ಜನತೆ ಮೋದಿ ಅವರ ಮೇಲೆ ಇರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಿತೀಶ ಕುಮಾರ ಅವರ ಜೊತೆ ನಾವಿದ್ದೇವೆಂದು ತೋರಿಸಿಕೊಟ್ಟಿದ್ದಾರೆ. ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುತ್ತಿದೆ. ರಾಷ್ಟ್ರದಲ್ಲೇ ರಾಜಕೀಯ ಧ್ರುವೀಕರಣವಾಗುತ್ತಿದೆ. ಎನ್‌ಡಿಎಯನ್ನು ಯಾರಾರ‍ಯರು ಬಿಟ್ಟು ಹೋಗಿದ್ದರೋ ಅವರೆಲ್ಲರೂ ಮರಳಿ ಬರುತ್ತಾರೆ. ಬಿಜೆಪಿ ಹಾಗೂ ಎನ್‌ಡಿಎ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 

PREV
click me!

Recommended Stories

ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ