'ಗಡಿವಿವಾದ ಮುಗಿದು ಹೋದ ಅಧ್ಯಾಯ ಬೆಳಗಾವಿ ಎಂದೆಂದಿಗೂ ನಮ್ಮದೇ'

Suvarna News   | Asianet News
Published : Jan 26, 2020, 10:47 AM ISTUpdated : Jan 26, 2020, 12:38 PM IST
'ಗಡಿವಿವಾದ ಮುಗಿದು ಹೋದ ಅಧ್ಯಾಯ ಬೆಳಗಾವಿ ಎಂದೆಂದಿಗೂ ನಮ್ಮದೇ'

ಸಾರಾಂಶ

ಗಡಿವಿವಾದ ಮುಗಿದು ಹೋದ ಅಧ್ಯಾಯವಾದರೂ ಕೆದಕುವ ಪ್ರಯತ್ನ ನಡೆಯುತ್ತಿದೆ| ಪ್ರಚೋದನಕಾರಿ ಕೆಲಸಕ್ಕೆ ಯಾರೂ ಪ್ರೋತ್ಸಾಹ ಕೊಡಬಾರದು ಎಂದ ಜಗದೀಶ್ ಶೆಟ್ಟರ್| ಬೆಳಗಾವಿ ನಮ್ಮದು, ಕರ್ನಾಟಕದ್ದು ಅಂತಾ ಸಾರಿ ಸಾರಿ ಹೇಳಿದ್ದೇವೆ|  

ಬೆಳಗಾವಿ(ಜ.26): ಗಡಿವಿವಾದ ಮುಗಿದು ಹೋದ ಅಧ್ಯಾಯವಾಗಿದೆ. ಬೆಳಗಾವಿ ಎಂದೆಂದಿಗೂ ನಮ್ಮದೇ, ಗಡಿವಿವಾದ ಮುಗಿದು ಹೋದ ಅಧ್ಯಾಯವಾದರೂ ಕೆದಕುವ ಪ್ರಯತ್ನ ನಡೆಯುತ್ತಿದೆ. ಪ್ರಚೋದನಕಾರಿ ಕೆಲಸಕ್ಕೆ ಯಾರೂ ಪ್ರೋತ್ಸಾಹ ಕೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

"

ಭಾನುವಾರ ನಗರದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣ ಮಾಡಿದ ಶೆಟ್ಟರ್, ಬೆಳಗಾವಿಯಲ್ಲಿ ಅಣ್ಣ ತಮ್ಮಂದಿರಂತೆ ನಾವು ಜೀವನ ನಡೆಸುತ್ತಿದ್ದೇವೆ. ಎಲ್ಲರೂ ಒಂದಾಗಿ ನಗರದ ಅಭಿವೃದ್ಧಿಗೆ ಕೈ ಜೋಡಿಸೋಣ. ಬೆಳಗಾವಿ ನಮ್ಮದು, ಕರ್ನಾಟಕದ್ದು ಅಂತಾ ಸಾರಿ ಸಾರಿ ಹೇಳಿದ್ದೇವೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗಡಿ ತಂಟೆ ಮುಗಿದು ಹೋದ ಅಧ್ಯಾಯವಾಗಿದೆ. ಬೆಳಗಾವಿಯ ನಾಗರಿಕರಿಗೆ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಗೌರವ ಕೊಡುತ್ತದೆ. ಗಡಿವಿಚಾರದಲ್ಲಿ ಎಲ್ಲ ರೀತಿಯ ಹೋರಾಟಕ್ಕೆ ಕರ್ನಾಟಕ ಸರ್ಕಾರ ಸಿದ್ಧವಿದೆ. ಎಲ್ಲರೂ ಸಹಬಾಳ್ವೆಯಿಂದ ಬದುಕೋಣ‌ ಎಂದ ಜಗದೀಶ್ ಶೆಟ್ಟರ್ ಕರೆ ನೀಡಿದ್ದಾರೆ. 
 

PREV
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ