ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಜಾರಕಿಹೊಳಿ ತರದ ವ್ಯಕ್ತಿ ಎಲ್ಲಾ ಕಡೆ ಇರಲು ಆಗಲ್ಲ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿ (ನ.29): ರಮೇಶ ಜಾರಕಿಹೊಳಿ ಮತ್ತು ಅವರ ತಂಡದ ಪರಿಶ್ರಮದಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಹೊಗಳಿರುವ ಸಚಿವ ಕೆ.ಎಸ್.ಈಶ್ವರಪ್ಪ, ರಾಜಕೀಯದಲ್ಲಿ ಚಟುವಟಿಕೆ ಮಾಡುವಂತಹ ಅಂತಹ ವ್ಯಕ್ತಿ ಎಲ್ಲೆಡೆ ಇರುವುದಿಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿದ್ದ ಸಂದರ್ಭದಲ್ಲಿ ರಾಜಕೀಯ ಚಟುವಟಿಕೆ ಮಾಡದಿದ್ದರೆ ಅನೇಕರು ರಾಜೀನಾಮೆ ಕೊಡುತ್ತಿರಲಿಲ್ಲ.
ಬೆಳಗಾವಿ ಹಿಂದುತ್ವದ ಕೇಂದ್ರ, ಮುಸಲ್ಮಾನರಿಗೆ ಟಿಕೆಟ್ ಕೊಡೋದೆ ಇಲ್ಲ: ಈಶ್ವರಪ್ಪ ...
ಇಂದು ನಮ್ಮ ಸರ್ಕಾರ ರಚನೆ ಆಗುತ್ತಿರಲಿಲ್ಲ. ಸಂಪುಟ ಬಗ್ಗೆಯೂ ಚರ್ಚೆ ನಡೆಯುತ್ತಿರಲಿಲ್ಲ ಎಂದರು. ಇದೇ ವೇಳೆ ಬಿಜೆಪಿಯಲ್ಲಿ ವಲಸಿಗರು, ಮೂಲ ಬಿಜೆಪಿಯವರು ಈ ಪ್ರಶ್ನೆ ಇಲ್ಲವೇ ಇಲ್ಲ. 105 ಬಿಜೆಪಿ ಶಾಸಕರು ಆಯ್ಕೆಯಾಗಿದ್ದು ವೈಯಕ್ತಿಕವಾಗಿ ಅಲ್ಲ. ಪಕ್ಷ ಆ ಸ್ಥಾನಕ್ಕೆ ತಂದಿದೆ.
ಎಲ್ಲ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದರ ಕುರಿತು ಪಕ್ಷ ಚರ್ಚೆ ಮಾಡುತ್ತದೆ. ಹೊಸದಾಗಿ ತ್ಯಾಗ ಮಾಡಿ ಬಂದವರಲ್ಲಿ ಯಾರಿಗೆ ಕೊಡಬೇಕು ಎಂಬ ಚರ್ಚೆ ಮಾಡಲಾಗುತ್ತದೆ ಎಂದರು.