ಪಂಚಮಸಾಲಿ ಮೀಸಲಾತಿಗೆ ಅವಸರ ಮಾಡುವ ಅಗತ್ಯ ಇಲ್ಲ: ಸಚಿವ ಪಾಟೀಲ್‌

By Suvarna News  |  First Published Feb 14, 2021, 12:37 PM IST

ಜಯಮೃತ್ಯುಂಜಯ ಸ್ವಾಮೀಜಿಗಳ ಹೋರಾಟ ನಾನು ಸ್ವಾಗತ ಮಾಡುತ್ತೇನೆ| ಯಾವುದೇ ಸರ್ಕಾರಕ್ಕೆ ಇಂತಹ ಕ್ಲಿಷ್ಟಕರ ಸಮಸ್ಯೆ ಬಗೆ ಹರಿಸಲು ಕಾಲಾವಕಾಶ ಬೇಕು| ಸ್ವಾಮೀಜಿಗಳು ಸರ್ಕಾರಕ್ಕೆ ಸಮಯಾವಕಾಶ ನೀಡಬೇಕು| ಮೀಸಲಾತಿಗೆ ಅಷ್ಟೊಂದು ಅವಸರ ಮಾಡುವ ಅಗತ್ಯ ಇಲ್ಲ: ಸಿ.ಸಿ. ಪಾಟೀಲ್‌| 


ಗದಗ(ಫೆ.14): ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅನುಭವವನ್ನು ನಮ್ಮ ಪಕ್ಷದ ಮೇಲೆ ಹಾಕುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಯಾವ ಕಡೇ ಅದಾರ್, ಉಳಿದವರು ಯಾವ ಕಡೆ ಅದಾರ್ ಎನ್ನುವದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ, ಪರಮೇಶ್ವರ ಇತ್ತೀಚಿಗೆ ಕಾಣ್ತಾಯಿಲ್ಲಾ ಅವರ ಯಾವ ಕಡೆ ಅದಾರ್?. ಬಿಜೆಪಿ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲಲ್ಲ, ನಮ್ಮದು ದೊಡ್ಡ ಮನೆಯಾಗಿದೆ ಎಂದು ಕಾಂಗ್ರೆಸ್‌ ವಿರುದ್ಧ ಸಚಿವ ಸಿ ಸಿ ಪಾಟೀಲ್ ಹರಿಹಾಯ್ದಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಹಿನ್ನೆಲೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿಗಳ ಹೋರಾಟವನ್ನು ನಾನು ಸ್ವಾಗತ ಮಾಡುತ್ತೇನೆ. ಯಾವುದೇ ಸರ್ಕಾರಕ್ಕೆ ಇಂತಹ ಕ್ಲಿಷ್ಟಕರ ಸಮಸ್ಯೆಯನ್ನು ಬಗೆ ಹರಿಸಲು ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದಾರೆ. 

Latest Videos

undefined

ಗದಗ: ಪುಂಡಾಟಿಕೆ ಮಾಡಿದ ವಿದ್ಯಾರ್ಥಿಗೆ ಕಪಾಳಮೋಕ್ಷ

ಸಿಎಂ ಬಿ.ಎಸ್. ಯಡಿಯೂರಪ್ಪನವರು ಪೂರಕವಾಗಿ ಸ್ಪಂದನೆ ಮಾಡಿದ್ದಾರೆ. ಬಿಎಸ್ವೈ ಈಗಾಗಲೇ ನನಗೆ ಹಾಗೂ ಸಚಿವ ಮುರಗೇಶ ನಿರಾಣಿಯವರು ಸ್ವಾಮೀಜಿ ಭೇಟಿ ಮಾಡಿ ಮಾತುಕತೆ ಮಾಡುವಂತೆ ಹೇಳಿದ್ದರು. ಈಗಾಗಲೇ ಮಾತುಕತೆ ನಡೆಸಿದ್ದೇವೆ, ಸ್ವಾಮೀಜಿಗಳಿಗೆ ಮನವರಿಕೆ ಮಾಡಿಕೊಂಡಿದ್ದೇವೆ. ಸ್ವಾಮೀಜಿಗಳು ಸರ್ಕಾರಕ್ಕೆ ಸಮಯಾವಕಾಶ ನೀಡಬೇಕು. ಕಾನೂನಾತ್ಮಕ ಪ್ರಕ್ರಿಯೆ ನಡೆಯುತ್ತಿದೆ ಸ್ವಾಮೀಜಿಗಳು ತಾಳ್ಮೆಯಿಂದ ಇರಬೇಕು. ಮೀಸಲಾತಿಗೆ ಅಷ್ಟೊಂದು ಅವಸರ ಮಾಡುವ ಅಗತ್ಯ ಇಲ್ಲ. ಸ್ವಾಮೀಜಿಗಳು ಹಾಗೂ ನಮ್ಮ ಸಮಾಜದ ಹಿರಿಯರು ಹೋರಾಟ ಮಾಡುವವರು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. 
 

click me!