ರೆಡ್ಡಿ ಮನೆಗೆ ಭೇಟಿ ನೀಡಿದ ಸಚಿವ ಬಿ.ಶ್ರೀರಾಮುಲು

Kannadaprabha News   | Asianet News
Published : Aug 21, 2021, 12:11 PM IST
ರೆಡ್ಡಿ ಮನೆಗೆ ಭೇಟಿ ನೀಡಿದ ಸಚಿವ ಬಿ.ಶ್ರೀರಾಮುಲು

ಸಾರಾಂಶ

*   ರೆಡ್ಡಿ ಆಪ್ತ ಸಹಾಯಕ ಅಲಿಖಾನ್‌ಗೆ ಕರೆ ಮಾಡಿ ಕರೆಸಿಕೊಂಡ ರೆಡ್ಡಿ *  ರೆಡ್ಡಿ ಹಾಗೂ ಕುಟುಂಬ ಸದಸ್ಯರ ಜತೆ ಸಮಾಲೋಚನೆ ನಡೆಸಿದ ಶ್ರೀರಾಮುಲು *  ವರಮಹಾಲಕ್ಷ್ಮೀ ಪೂಜೆ ನಡೆಸಿದ ಸ್ಥಳಕ್ಕೆ ತೆರಳಿ ನಮಸ್ಕರಿಸಿದ ರಾಮುಲು 

ಬಳ್ಳಾರಿ(ಆ.21):  ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಸ್ನೇಹಿತ ಬಿ. ಶ್ರೀರಾಮುಲು ಅವರು ಶುಕ್ರವಾರ ರಾತ್ರಿ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿ, ರೆಡ್ಡಿ ಹಾಗೂ ಕುಟುಂಬ ಸದಸ್ಯರ ಜತೆ ಸಮಾಲೋಚನೆ ನಡೆಸಿದರು.

ಕುಟುಂಬ ಸಮೇತರಾಗಿ ತೆರಳಿದ ಶ್ರೀರಾಮುಲು ಮೊದಲು ವರಮಹಾಲಕ್ಷ್ಮೀ ಪೂಜೆ ನಡೆಸಿದ ಸ್ಥಳಕ್ಕೆ ತೆರಳಿ ನಮಸ್ಕರಿಸಿದರು. ಬಳಿಕ ರೆಡ್ಡಿ ಕುಟುಂಬ ಸದಸ್ಯರ ಜತೆ ಸಮಾಲೋಚಿಸಿದರು. ಇದಕ್ಕೂ ಮುನ್ನ ಜನಾರ್ದನ ರೆಡ್ಡಿ ತನ್ನ ಆಪ್ತ ಸಹಾಯಕ ಅಲಿಖಾನ್‌ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡರು.

ಒಂದು ಆದೇಶ, 10 ವರ್ಷ ನಂತ್ರ ಕುಟುಂಬ ಸದಸ್ಯರ ಜತೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಗಣಿ ಧಣಿ

ಏತನ್ಮಧ್ಯೆ ರೆಡ್ಡಿ ನಿವಾಸದ ಎದುರು ರಾಮಮೂರ್ತಿ ಆಚಾರ್ಯ ಎಂಬುವರು ರೆಡ್ಡಿಯನ್ನು ಭೇಟಿ ಮಾಡಲು ಆಗಮಿಸಿದ್ದರು. ಆದರೆ, ಗೇಟ್‌ನಲ್ಲಿದ್ದ ಸೆಕ್ಯುರಿಟಿ ಗಾರ್ಡ್‌ಗಳು ಪ್ರವೇಶಕ್ಕೆ ನಿರಾಕರಿಸಿದರು. ರೆಡ್ಡಿಗೆ ಪ್ರಸಾದ ನೀಡಲು ಬಂದಿದ್ದೇನೆ. ಪ್ರಸಾದ ಪಡೆಯದಿದ್ದರೆ ಅಪಶಕುನವಾಗಲಿದೆ. ರೆಡ್ಡಿಗೆ ಒಳ್ಳೆಯದಾಗಲಿ ಎಂದು ಪ್ರಸಾದ ತಂದಿರುವ ಎಂದು ಹೇಳಿದರು. ಆದರೆ, ಭದ್ರತಾ ಸಿಬ್ಬಂದಿ ಒಳಬಿಡದೆ ಮರಳಿ ಕಳಿಸಿದರು.
 

PREV
click me!

Recommended Stories

Bengaluru: ಕಂಡೋರ ಹೆಂಡ್ತಿಯನ್ನು ಪಟಾಯಿಸಿದ ಪೊಲೀಸಪ್ಪ; ಇದು ರೀಲ್ಸ್ ಅಂಟಿಯ ಮೋಹದ ಕಥೆ
ಬೆಂಗಳೂರಿನಲ್ಲಿ ಜಿಮ್‌ಗೆ ಹೋದ್ರೆ, ಚಿಕನ್‌ ತಿಂದ್ರೆ ಮ್ಯಾನೇಜರ್‌ ನಗ್ತಾರೆ: NRI ಪೋಸ್ಟ್‌ನಿಂದ ಆಘಾತಕಾರಿ ಸತ್ಯ ಬಯಲು!