ಹೊಸಪೇಟೆ ಜಿಲ್ಲೆಯಾಗುವುದಕ್ಕಿಂತ ದೊಡ್ಡ ವಿಷಯವೇನಲ್ಲ| ವಿಜಯನಗರ ಜಿಲ್ಲೆಯಾಗುವುದಕ್ಕೆ ಎಲ್ಲ ರೀತಿಯಿಂದಲೂ ಅರ್ಹತೆ ಇದ್ದು, ಅದಕ್ಕೆ ಹೊಸಪೇಟೆಯೇ ಜಿಲ್ಲಾ ಕೇಂದ್ರವಾಗಲು ಸೂಕ್ತ| ಇದೇ ವೇಳೆ ಹೊಸಪೇಟೆ ಜಿಲ್ಲೆಯಾಗುವುದಕ್ಕೆ ಯಾರದೂ ವಿರೋಧ ಇಲ್ಲವೇ ಇಲ್ಲ. ಅದನ್ನು ಸುಮ್ಮನೇ ಸೃಷ್ಟಿ ಮಾಡಲಾಗುತ್ತದೆ ಎಂದ ಆನಂದ ಸಿಂಗ್|
ಕೊಪ್ಪಳ(ನ.22): ಹೊಸದಾಗಿ ಘೋಷಿಸಲ್ಪಟ್ಟಿರುವ ವಿಜಯನಗರ ಜಿಲ್ಲೆ ಮಾಡಿ ನನ್ನನ್ನು ಸಚಿವ ಸಂಪುಟದಿಂದ ಕೈಬಿಡುವುದಾದರೆ ನನಗೆ ಸಂತೋಷ ಎಂಬುದಾಗಿ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಸಂಪುಟ ಪುನರ್‌ರಚನೆಯಾಗುತ್ತಿರುವ ಹಿನ್ನೆಲೆ ನನ್ನ ಕೈಬಿಡುತ್ತಾರೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಹೊಸಪೇಟೆ ಜಿಲ್ಲೆಯನ್ನು ಮಾಡಿ, ಸಂಪುಟದಿಂದ ಕೈಬಿಡುವುದಾದರೇ ನನಗೆ ಸಂತೋಷ. ಆರಾಮವಾಗಿ ಇದ್ದು ಬಿಡುತ್ತೇನೆ ಎಂದಿದ್ದಾರೆ.
ವಿರುಪಾಕ್ಷಪ್ಪ-ವಿಜಯೇಂದ್ರ ಭೇಟಿ: ಒಳ ಹಂತದಲ್ಲಿ ಎನಾಗಿದೆಯೋ ಎಂದ BJP ಸಂಭವನೀಯ ಅಭ್ಯರ್ಥಿ
ಹೊಸಪೇಟೆ ಜಿಲ್ಲೆಯಾಗುವುದಕ್ಕಿಂತ ದೊಡ್ಡ ವಿಷಯವೇನಲ್ಲ ಎಂದರು. ವಿಜಯನಗರ ಜಿಲ್ಲೆಯಾಗುವುದಕ್ಕೆ ಎಲ್ಲ ರೀತಿಯಿಂದಲೂ ಅರ್ಹತೆ ಇದ್ದು, ಅದಕ್ಕೆ ಹೊಸಪೇಟೆಯೇ ಜಿಲ್ಲಾ ಕೇಂದ್ರವಾಗಲು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ಹೊಸಪೇಟೆ ಜಿಲ್ಲೆಯಾಗುವುದಕ್ಕೆ ಯಾರದೂ ವಿರೋಧ ಇಲ್ಲವೇ ಇಲ್ಲ. ಅದನ್ನು ಸುಮ್ಮನೇ ಸೃಷ್ಟಿ ಮಾಡಲಾಗುತ್ತದೆ ಎಂದಿದ್ದಾರೆ. ಸೋಮಶೇಖರರೆಡ್ಡಿ ಅವರು ಕೂಡಾ ಅದನ್ನು ಹೇಳಿಲ್ಲ. 2012ರಲ್ಲಿ ಹೇಳಿದ ವೀಡಿಯೋವನ್ನು ಈಗ ತೋರಿಸಲಾಗುತ್ತದೆ ಎಂದರು.