ಅದೊಂದು ಎತ್ತರದ ಗಿರಿಧಾಮ, ಹಚ್ಚ ಹಸಿರಿನ ಸೊಬಗಿನಿಂದ ಮಲೆನಾಡನ್ನೇ ನಾಚಿಸುವಂತೆ ಆಕರ್ಷಿಸುವ ಪ್ರವಾಸಿಧಾಮ. ಆದ್ರೆ ಆ ಪ್ರವಾಸಿಧಾಮ ಪ್ರವಾಸಿಗರಿಲ್ಲದೇ ಬಿಕೊ ಎನ್ನುತ್ತಿದೆ. ಅರೆ, ಅಷ್ಟಕ್ಕು ಅಲ್ಲಾಗಿರುವ ಸಮಸ್ಯೆ ಆದ್ರೂ ಏನಾಂತೀರ..!
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಜೂ.01): ಅದೊಂದು ಎತ್ತರದ ಗಿರಿಧಾಮ, ಹಚ್ಚ ಹಸಿರಿನ ಸೊಬಗಿನಿಂದ ಮಲೆನಾಡನ್ನೇ ನಾಚಿಸುವಂತೆ ಆಕರ್ಷಿಸುವ ಪ್ರವಾಸಿಧಾಮ. ಆದ್ರೆ ಆ ಪ್ರವಾಸಿಧಾಮ ಪ್ರವಾಸಿಗರಿಲ್ಲದೇ ಬಿಕೊ ಎನ್ನುತ್ತಿದೆ. ಅರೆ, ಅಷ್ಟಕ್ಕು ಅಲ್ಲಾಗಿರುವ ಸಮಸ್ಯೆ ಆದ್ರೂ ಏನಾಂತೀರ..! ಮದುವಣಗಿತ್ತಿಯಂತೆ ಸಿಂಗಾರ ಗೊಂಡಿರುವ ಹಸಿರುವನ. ಜನಮನ ಸೆಳೆಯುತ್ತಿರುವ ಗಿರಿಧಾಮ. ಆದ್ರೆ ಜನರಿಲ್ಲದೇ ಖಾಲಿ ಖಾಲಿಯಾಗಿರುವ ದೃಶ್ಯಗಳಿಗೆ ಸಾಕ್ಷಿಯಾಗಿದ್ದು,ಚಿತ್ರದುರ್ಗದ ಜೋಗಿಮಟ್ಟಿ ಗಿರಿಧಾಮ. ಹೌದು, ಇದು ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿಬೀಸುವ ಎರಡನೇ ಪ್ರದೇಶ.
undefined
ಹೀಗಾಗಿ ತಂಪಾದ ವಾತಾವರಣದಿಂದ ಕೂಡಿದ್ದು,ಹಚ್ಚ ಹಸಿರಿನ ಸೊಬಗಿನ ಗಿಡಮರಗಳಿಂದಾಗಿ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ. ಕರ್ನಾಟಕದ ಮಿನಿ ಊಟಿ ಅಂತಾನು ಪ್ರಖ್ಯಾತಿಯಾಗಿದೆ. ಆದ್ರೆ ಬೇಸಿಗೆಯಿಂದಾಗಿ ಇಲ್ಲಿನ ಗಿಡಿಮರಗಳಲ್ಲಿನ ಎಲೆಗಳೆಲ್ಲಾ ಉದುರಿ, ಬೋಳಾಗಿದ್ದು,ಬೆಂಕಿ ಅವಗಡಸಂಭವಿಸುವ ಭೀತಿಂದಾಗಿ ಅಲರ್ಟ್ ಆಗಿದ್ದ ಅರಣ್ಯ ಇಲಾಖೆ ಪ್ರವಾಸಗರ ಎಂಟ್ರಿಗೆ ಬ್ರೇಕ್ ಹಾಕಿತ್ತು. ಆದ್ರೆ ಬೇಸಿಗೆ ಮುಗಿದು ಮಳೆ ಆರಂಭವಾಗಿದ್ದು, ಜೋಗಿಮಟ್ಟಿ ಅರಣ್ಯಧಾಮ ಹಚ್ಚ ಹಸುರಾಗಿ ಜನಮನ ಸೆಳೆಯಿತ್ತಿದೆ.
ಆದ್ರೆ ಪ್ರವಾಸಿಗರ ಎಂಟ್ರಿಗೆ ಮಾತ್ರ ಈವರೆಗೆ ಅವಕಾಶ ನೀಡಿಲ್ಲ. ಹೀಗಾಗಿ ಮಿನಿ ಊಟಿ ಖಾಲಿ ಖಾಲಿಯಾಗಿದೆ ಅಂತ ಪರಿಸರ ಪ್ರೇಮಿಗಳು ಅಸಮಧಾಮ ಹೊರ ಹಾಕಿದ್ದಾರೆ. ಇನ್ನು ಬೇಸಿಗೆ ವೇಳೆ ಅರಣ್ಯಾಧಿಕಾರಿಗಳ ಕೈಗೊಂಡ ನಿರ್ಧಾರವನ್ನು ಪ್ರವಾಸಿಗರು ಹಾಗು ಪರಿಸರವಾದಿಗಳು ಸ್ವಾಗತಿಸಿದ್ದರು. ಆದ್ರೆ ಮಳೆಗಾಲ ಆರಂಭವಾದ್ರು ಸಹ ಜೋಗಿಮಟ್ಟಿಎಂಟ್ರಿಗೆ ನಿರ್ಭಂಧ ಏರಿರೋದು ವಿಷಾದನೀಯ. ಹೀಗಾಗಿ ಈ ನೈಸರ್ಗಿಕ ಸೊಬಗನ್ನು ಕಣ್ತುಂಬಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.
ಸಚಿವ ನಾಗೇಂದ್ರ ರಾಜೀನಾಮೆ ನೀಡಲಿ: ಮಾಜಿ ಸಿಎಂ ಬೊಮ್ಮಾಯಿ
ಒಟ್ಟಾರೆ ಬೇಸಿಗೆ ವೇಳೆ ಒಣಗಿ ಮರುಭೂಮಿಯಾಗಿದ್ದ ಜೋಗಿಮಟ್ಟಿ ವರುಣನ ಕೃಪೆಯಿಂದ ಹಚ್ಚ ಹಸುರಾಗಿ ಆಕರ್ಷಿಸ್ತಿದೆ. ಆದ್ರೆ ಪ್ರವಾಸಿಗರ ಎಂಟ್ರಿಗೆ ಅವಕಾಶ ಇಲ್ಲದ ಹಿನ್ನಲೆಯಲ್ಲಿ ನೀ ಸುಂಧರ ಸೊಬಗನ್ನು ಕಣ್ತುಂಬಿಕೊಳ್ಳುವ ಅವಕಾಶ ಇಲ್ಲವಾಗಿದೆ. ಇನ್ನಾದ್ರು ಅರಣ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.