ಕೊಡಗಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಜಿಲ್ಲಾಧಿಕಾರಿ ರೆಡ್ ಅಲರ್ಟ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದ್ದಾರೆ. ಏನಿದು ರೆಡ್ ಮತ್ತು ಆರೆಂಜ್ ಅಲರ್ಟ್..?, ಈ ಅಲರ್ಟ್‌ಗಳನ್ನು ಯಾವಾಗ ಘೋಷಣೆ ಮಾಡ್ತಾರೆ..? ಮುಂದೆ ಓದಿ.
ಕೊಡಗು [ಆ.05]: ಕಳೆದ ವರ್ಷ ಕೊಡಗಿನಲ್ಲಿ ಆದ ಪ್ರವಾಹದ ಭೀಕರತೆ ಇನ್ನು ಜನರ ಮನಸ್ಸಿನಿಂದ ಮಾಸಿಲ್ಲ. ಇದರ ಬೆನ್ನಲ್ಲೇ ಕೇಂದ್ರ ಹವಾಮಾನ ಇಲಾಖೆ ಕೊಡಗಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಇಲ್ಲಿನ ಜನರ ನಿದ್ದೆಗೆಡಿಸಿದೆ.
ಕೊಡಗಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಅವರು ಇಂದಿನಿಂದ ಜಿಲ್ಲಾದ್ಯಂತ ಆರೆಂಜ್ ಮತ್ತು ರೆಡ್ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರು, ಪ್ರವಾಸಿಗರು ಎಚ್ಚರದಿಂದಿರಲು ಸೂಚನೆ ನೀಡಿದ್ದಾರೆ.
undefined
ಪ್ರಸ್ತುತ ಕೊಡಗಿನಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭೂಕಸಿತ ಆಗುತ್ತಿರುವ ವರದಿಗಳು ಬರುತ್ತಿವೆ.
* ಆಗಸ್ಟ್ 5 ರಿಂದ 7 ರವರೆಗೆ ಆರೆಂಜ್ ಅಲರ್ಟ್ ಘೋಷಣೆ.
* ಆಗಸ್ಟ್ 7 ರಿಂದ 9 ರವರೆಗೆ ರೆಡ್ ಅಲರ್ಟ್.
* ಆಗಸ್ಟ್ 9 ರಿಂದ 10 ರವರೆಗೆ ಮತ್ತೆ ಆರೆಂಜ್ ಅಲರ್ಟ್.
ರೆಡ್ ಮತ್ತು ಅರೆಂಜ್ ಅಲರ್ಟ್ ಅಂದ್ರೇನು..?
ಆರೆಂಜ್ ಅಲರ್ಟ್ ಅಂದ್ರೆ 115.6MM ನಿಂದ 204.4ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇರುವುದರಿಂದ ಇದನ್ನು ಘೋಷಣೆ ಮಾಡಲಾಗುತ್ತದೆ. ಇನ್ನು ರೆಡ್ ಅಲರ್ಟ್ ಅಂದರೆ, 204.4MM ಗಿಂತಲೂ ಅಧಿಕ ಮಳೆಯಾಗುವ ಸಂಭವ ಇದ್ದರೆ ರೆಡ್ ಅಲರ್ಟ್ ಘೋಷಿಸಲಾಗುತ್ತೆ.