ಮಂಗಳೂರು MRPL ಘಟಕದಲ್ಲಿ ಭೀಕರ ಸ್ಫೋಟ ಪ್ರಕರಣ: 10 ಕಿ.ಮೀ ದೂರದವರೆಗೆ ಕಂಪನ, ಭಯಾನಕ ಅನುಭವ ಬಿಚ್ಚಿಟ್ಟ ಸ್ಥಳೀಯರು!

Published : Sep 30, 2026, 03:31 PM IST
MRPL

ಸಾರಾಂಶ

ಮಂಗಳೂರಿನ ಜೋಕಟ್ಟೆಯಲ್ಲಿರುವ ಎಂಆರ್‌ಪಿಎಲ್ (MRPL) ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 10 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಕಿಲೋಮೀಟರ್‌ಗಳವರೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಮನೆಗಳಿಗೆ ಹಾನಿಯಾಗಿದೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು: ನಗರದ ಹೊರವಲಯ ಜೋಕಟ್ಟೆಯಲ್ಲಿರುವ 'ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್' (MRPL) ಸಂಸ್ಥೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟದಲ್ಲಿ ಪ್ರಕರಣದಲ್ಲಿ ಒಟ್ಟು 10 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಹಲವು ಕಿಲೋಮೀಟರ್‌ಗಳ ಪ್ರದೇಶ ತಲ್ಲಣಗೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಸ್ಫೋಟದ ಪರಿಣಾಮಗಳಿಗೆ ಜನ ಬೆಚ್ಚಿಬಿದ್ದಿದ್ದು, ಕಂಪೆನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಫೋಟದ ವಿವರ ಹಾಗೂ ಶಿಫ್ಟ್ ಬದಲಾವಣೆಯಿಂದ ತಪ್ಪಿದ ಅನಾಹುತ

ಮಧ್ಯಾಹ್ನ ಸುಮಾರು 12:15 ರ ವೇಳೆಗೆ MRPL ರಿಫೈನರಿಯ 'ಸಿಎಚ್‌ಟಿ' (CHT - ಹೈಡ್ರೋ ಸಲ್ಫರ್ ಟ್ರೀಟ್‌ಮೆಂಟ್) ಘಟಕದಲ್ಲಿ ಈ ಭೀಕರ ಸ್ಫೋಟ ಸಂಭವಿಸಿದೆ. ಸ್ಫೋಟಗೊಂಡ ತಕ್ಷಣವೇ ಘಟಕದಲ್ಲಿ ದಟ್ಟ ಬೆಂಕಿ ಕಾಣಿಸಿಕೊಂಡಿದೆ. ಬೆಳಿಗ್ಗೆ 11:30 ರ ಸುಮಾರಿಗೆ ಕರ್ತವ್ಯದ 'ಶಿಫ್ಟ್ ಬದಲಾವಣೆ' ಇದ್ದಿದ್ದರಿಂದ ಬಹುತೇಕ ಕಾರ್ಮಿಕರು ಘಟಕದಿಂದ ಹೊರಬಂದಿದ್ದರು. ಮಧ್ಯಾಹ್ನ 12:15 ರ ಹೊತ್ತಿಗೆ ಕಾರ್ಮಿಕರೆಲ್ಲ ಒಳಗೇ ಇದ್ದಿದ್ದರೆ ದೊಡ್ಡ ಮಟ್ಟದ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಈ ಘಟನೆಯಲ್ಲಿ ಒಟ್ಟು 10 ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟಕದ ಒಳಗಿದ್ದ ಇಬ್ಬರು ಸಿಬ್ಬಂದಿ ಶೇ. 35 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಐದು ಗಾಯಾಳುಗಳನ್ನು ಎ.ಜೆ. ಆಸ್ಪತ್ರೆಗೂ, ಇಬ್ಬರನ್ನು ಶ್ರೀನಿವಾಸ ಆಸ್ಪತ್ರೆಗೂ ಹಾಗೂ ಉಳಿದ ಮೂವರನ್ನು ಸ್ಥಳೀಯ ಇತರ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ

4 ಕಿ.ಮೀ ದೂರದವರೆಗೆ ಭೂಮಿ ಕಂಪನ, ಹಾನಿಗೊಳಗಾದ ಮನೆಗಳು

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಅಲ್ಲಿಂದ ಸುಮಾರು 8 ರಿಂದ 10 ಕಿಮೀಟರ್ ದೂರ ಇರುವ ಸ್ಫೋಟದ ಶಬ್ದ ಮತ್ತು ತೀವ್ರತೆ ಎಷ್ಟಿತ್ತೆಂದರೆ ಮಂಗಳೂರಿನ ಜೋಕಟ್ಟೆ, ಬಜ್ಪೆ, ಕಾಟಿಪಳ್ಳ, ಕಾನ ಮತ್ತು ಕುಲಾಯಿ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಸ್ಥಳೀಯ ಜೋಕಟ್ಟೆ ಪಂಚಾಯತ್ ಕಟ್ಟಡ ಹಾಗೂ ಅಲ್ಲಿನ ಗ್ರಂಥಾಲಯದ ಗಾಜುಗಳು ಪುಡಿಯಾಗಿ ಕೆಳಗೆ ಬಿದ್ದಿವೆ. ಸುತ್ತಮುತ್ತಲಿನ ಹಲವು ಮನೆಗಳ ಕಿಟಕಿ ಗಾಜುಗಳು ಒಡೆದುಹೋಗಿವೆ, ಬಾಗಿಲುಗಳು ಕಿತ್ತುಬಿದ್ದಿವೆ ಹಾಗೂ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ.

ಸಂಸ್ಥೆಯಲ್ಲಿ ಆಗಾಗ್ಗೆ ಸಣ್ಣಪುಟ್ಟ ತಾಂತ್ರಿಕ ದೋಷಗಳ ಸ್ಫೋಟಗಳು ನಡೆಯುತ್ತಿರುತ್ತವೆ, ಆದರೆ ಈ ಮಟ್ಟಿನ ಭೀಕರ ಸ್ಫೋಟವನ್ನು ನಾವು ಇದುವರೆಗೆ ಕಂಡಿರಲಿಲ್ಲ. ಸಂಬಂಧಿಸಿದವರಿಗೆ ಕರೆ ಮಾಡಿ ಕೇಳಿದ್ದೆವು. ಎಲ್ಲವೂ ಸರಿ ಇದೆ ಎನ್ನುತ್ತಿದ್ದಾರೆ. ಈ ಮಟ್ಟದ್ದು ಇದೇ ಮೊದಲು ಇಲ್ಲಿ ನಡೆದಿದೆ. ನಮ್ಮ ಮನೆ 4 ಕಿ ಮೀಟರ್ ದೂರವಿದೆ. ಕಟ್ರೋಲ್ ಗೆ ಬಂದಿದೆ ಎಂದು ಅಧಕಾರಿಗಳು ಹೇಳ್ತಿದ್ದಾರೆ ಹೊರತು ಅಪಾಯ ಇದೆ ಎಂದು ಹೇಳುತ್ತಿಲ್ಲ. ಹೆಚ್ಚಿನ ಅನಾಹುತ ಆಗ್ಲಿಕ್ಕೆ ಸಾಧ್ಯತೆ ಇದೆ. ಏಕೆಂದರೆ ಇದು ಅಷ್ಟು ದೊಡ್ಡ ಮಟ್ಟದ ಸ್ಫೋಟ. ಪರಿಸ್ಥಿತಿ ಗಂಭೀರ ಉಂಟು ಎಂದು ಅನಿನ್ನಿಸ್ತಾ ಇದೆ. ನಮ್ಮಿಂದ ಅಭಿವೃದ್ಧಿಗೆ ವಿರೋಧ ಇಲ್ಲ. ಸ್ಥಳೀಯರಿಗೆ ಸಮಸ್ತೆ ಆಗಬಾರದು ಅಂತಷ್ಟೇ ಎಂದು ಸ್ಥಳೀಯ ನಿವಾಸಿ ರವಿ ಅವರು ಸುವರ್ಣನ್ಯೂಸ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದ ಜಿಲ್ಲಾಡಳಿತ

ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್, ಜಿಲ್ಲಾ ಪಂಚಾಯತ್ ಸಿಇಒ ನರ್ವಾಡೆ ವಿನಾಯಕ್ ಕಾರ್ಭಾರಿ, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಶಾಸಕ ಭರತ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಹೇಳಿಕೆ:

ಸಿಎಚ್‌ಟಿ ಘಟಕದಲ್ಲಾದ ಸ್ಫೋಟದ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ. ಸಾರ್ವಜನಿಕರು ಹಾಗೂ ಸ್ಥಳೀಯರು ಆತಂಕ ಪಡುವ ಅಗತ್ಯವಿಲ್ಲ. ಪರಿಸ್ಥಿತಿಯನ್ನು ಅಧಿಕಾರಿಗಳ ತಂಡ ಸಮರ್ಥವಾಗಿ ಹತೋಟಿಗೆ ತಂದಿದೆ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.

ಶಾಸಕ ಭರತ್ ಶೆಟ್ಟಿ ಹೇಳಿಕೆ:

"ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹತ್ತಿರದ ಗ್ರಾಮಗಳ ಮನೆಗಳ ಗ್ಲಾಸ್‌ಗಳು ಒಡೆದು ಹೋಗಿವೆ ಹಾಗೂ ಕಾಂಪೌಂಡ್ ಗೋಡೆಗಳು ಬಿರುಕು ಬಿಟ್ಟಿವೆ. ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ," ಎಂದು ತಿಳಿಸಿದ್ದಾರೆ.

PREV
Read more Articles on
click me!

Recommended Stories

Special Trains: ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್‌ನ್ಯೂಸ್, ಬೆಂಗಳೂರು, ಚರ್ಲಪಲ್ಲಿಗೆ ನಡುವೆ ವಿಶೇಷ ರೈಲು
ಬೆಂಗಳೂರಲ್ಲಿ ಕರೆಂಟ್ ಬಿಲ್ ಜೊತೆ ಟ್ರಾಫಿಕ್ ಫೈನ್ ಹಾಕೋದಕ್ಕಾಗಲ್ಲ, ವಾಹನವನ್ನೇ ಸೀಜ್ ಮಾಡಿ- ಬೈರತಿ ಸುರೇಶ್!