Karnataka Tourism: ಹಂಪಿಗೆ ಪ್ರವಾಸಿಗರ ದಂಡು

By Kannadaprabha NewsFirst Published Dec 24, 2022, 5:45 AM IST
Highlights

ಎಳ್ಳ ಅಮಾವ್ಯಾಸೆ ನಿಮಿತ್ತ ಭಕ್ತರು ಹಂಪಿಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದು,ಇನ್ನೂ ಪ್ರವಾಸೋದ್ಯಮದ ಸೀಜನ್‌ ಆರಂಭಗೊಂಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರ ದಂಡು ಶುಕ್ರವಾರ ಹಂಪಿಗೆ ಹರಿದು ಬಂದಿದೆ.

 ಹೊಸಪೇಟೆ (ಡಿ. 24):  ಎಳ್ಳ ಅಮಾವ್ಯಾಸೆ ನಿಮಿತ್ತ ಭಕ್ತರು ಹಂಪಿಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದು,ಇನ್ನೂ ಪ್ರವಾಸೋದ್ಯಮದ ಸೀಜನ್‌ ಆರಂಭಗೊಂಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರ ದಂಡು ಶುಕ್ರವಾರ ಹಂಪಿಗೆ ಹರಿದು ಬಂದಿದೆ.

ಗೆ (Hampi)  ಸುಮಾರು ಐದು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದಾರೆ.(Tour)  ಸೀಜನ್‌ ಆರಂಭಗೊಂಡಿದ್ದು, ಇನ್ನೂ ಶಾಲಾ-ಕಾಲೇಜು ಮಕ್ಕಳು ಪ್ರವಾಸಕ್ಕೆ ಬರುತ್ತಿರುವುದರಿಂದ ಹಂಪಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇಗುಲ,ಶ್ರೀವಿರೂಪಾಕ್ಷೇಶ್ವರ ರಥ ಬೀದಿ, ಸಾಲು ಮಂಟಪ,ಎದುರು ಬಸವಣ್ಣ ಮಂಟಪ, ಕಡಲೆ ಕಾಳು, ಸಾಸಿವೆ ಕಾಳು ಗಣೇಶ ಮಂಟಪಗಳು, ಮಹಾನವಮಿ ದಿಬ್ಬ, ಹಜಾರ ರಾಮ ದೇಗುಲ, ಕಮಲ ಮಹಲ್‌, ವಿಜಯ ವಿಠ್ಠಲ ದೇಗುಲ ಮತ್ತು ಕಲ್ಲಿನತೇರು, ಪುರಂದರ ದಾಸರ ಮಂಟಪ ಸೇರಿದಂತೆ ವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಿಸಿದರು.

 ಮೈಸೂರು :  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲ್ಲೆ ನೋಡಿದರಲ್ಲಿ ಪ್ರವಾಸಿಗರ ದಂಡು ಕಂಡು ಬರುತ್ತಿದೆ.

ವರ್ಷಾಂತ್ಯ, ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಪರಿಣಾಮ ನಗರದ ಎಲ್ಲಾ ಹೋಟೆಲ್‌ನಲ್ಲಿಯೂ ಕೊಠಡಿಗಳು ಹೌಸ್‌ಫುಲ್‌ ಆಗಿವೆ. ಹೊರವರ್ತುಲ ರಸ್ತೆ ಸೇರಿದಂತೆ ಎಲ್ಲಿಯೂ ಕೊಠಡಿಗಳು ಸಿಗುತ್ತಿಲ್ಲ. ಜಿಲ್ಲೆಯ ಪ್ರವಾಸಿ ತಾಣಗಳು, ರೆಸಾರ್ಚ್‌ಗಳು ಕೂಡ ತುಂಬಿ ತುಳುಕುತ್ತಿವೆ. ಪ್ರವಾಸಿಗರ ಒತ್ತಡ ತಾಳಲಾರದೇ ಹೋಟೆಲ್‌ನವರು ಅನಧಿಕೃತವಾಗಿ ಶೇ.20 ರಿಂದ 25 ರಷ್ಟುದರ ಹೆಚ್ಚ ಳ ಮಾಡಿದ್ದಾರೆ. ಆದರೂ ಪ್ರವಾಸಿಗರು ಬರುತ್ತಲೇ ಇದ್ದಾರೆ.

ವರ್ಷಾಂತ್ಯದಲ್ಲಿ ಮೈಸೂರಿಗೆ ಪ್ರವಾಸಿಗರು ಬಂದೇ ಬರುತ್ತಾರೆ. ಹೀಗಾಗಿ ಮಾಗಿ ಉತ್ಸವವನ್ನು ಜ.10ರ ನಂತರ ಮಾಡಿ ಎಂದು ಹೋಟೆಲ್‌ ಮಾಲೀಕರ ಸಂಘದವರು ಮನವಿ ಮಾಡಿಕೊಂಡರೂ ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿಯವರು ಕೇಳಿಲ್ಲ. ಡಿ.24 ರಿಂದ ಮಾಗಿ ಉತ್ಸವ ಅಂಗವಾಗಿ ಫಲಪುಷ್ಪ ಪ್ರದರ್ಶನವೂ ಆರಂಭವಾಗುತ್ತಿದೆ. ಪರಿಣಾಮ ಪ್ರವಾಸಿಗರ ಮತ್ತಷ್ಟುಹೆಚ್ಚಾಗಲಿದ್ದಾರೆ.

2020, 2021 ರಲ್ಲಿ ಕೊರೋನಾದಿಂದಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ. ಆದರೆ ಮತ್ತೆ ಕೊರೋನಾ ಬರಬಹುದು ಎಂಬ ಆತಂಕ ಇರುವಾಗ ಕೊರೋನಾ ಪೂರ್ವ ಅಂದರೇ 2019ಕ್ಕಿಂತಲೂ ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ದಾಂಗುಂಡಿ ಇಟ್ಟಿದ್ದಾರೆ.

ದಸರೆ ಸಂದರ್ಭದಲ್ಲಿಯೂ ಇದೇ ರೀತಿ ಪ್ರವಾಸಿಗರು ಲಗ್ಗೆ ಇಟ್ಟಿದ್ದರು. ಆಗಲೂ ಹೋಟೆಲ್‌ನವರು ದರವನ್ನು ದುಪ್ಪಟ್ಟು ಮಾಡಿಕೊಂಡು ವರ್ಷಕ್ಕಾಗವಷ್ಟುಸಂಪಾದನೆ ಮಾಡಿಕೊಂಡಿದ್ದರು.

, ಶೃಂಗೇರಿ : ಕಳೆದೆರೆಡು ದಿನಗಳಿಂದ ತಾಲೂಕಿನಾದ್ಯಂತ ಭಾರಿ ಚಳಿ,ಇಬ್ಬನಿ ವಾತವಾರಣವಇದ್ದು,ಚಳಿಯ ನಡುವೆಯೂ ಪಟ್ಟಣಕ್ಕೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.

ರಜೆ ದಿನವಾದ ಭಾನುವಾರ ಪಟ್ಟಣದಲ್ಲಿ ಎಲ್ಲೆಡೆ ಜನಸಾಗರವೆ ಕಂಡು ಬಂದಿತು.ಶ್ರೀಮಠದ ಆವರಣ,ಗಾಂಧಿ ಮೈದಾನ ಸೇರಿದಂತೆ ಎಲ್ಲೆಡೆ ಜನರೆ ನೆರೆದಿದ್ದರು.ವಾಹನ ನಿಲುಗಡೆ ಪ್ರದೇಶವಾಗಿರುವ ಗಾಂಧಿ ಮೈದಾನದಲ್ಲಿ ವಾಹನಗಳ ಸಾಲು,ಜನಜಂಗುಳಿ ಕಂಡುಬರುತ್ತಿದೆ.

ಕೆಲದಿನಗಳ ಹಿಂದೆ ಮಳೆ,ಮೋಡಕವಿದ ವಾತವರಣವಿದ್ದರೂ ಪ್ರವಾಸಿಗರ ಸಂಖ್ಯೆ ಮಾತ್ರ ಕ್ಷೀಣಿಸದೆ ಎಂದಿನಂತೆ ಇತ್ತು.ಭಾರತಿ ಬೀದಿ,ಶ್ರೀಮಠದ ಮುಂಬಾಗ,ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆಯಿಂದಲೂ ಸಂಜೆಯವರೆಗೂ ಪ್ರವಾಸಿಗರ ದಂಡು ಕಂಡು ಬರುತ್ತಿದೆ.ವಿವಿಧೆಡೆಗಳಿಂದ ಭಕ್ತರು,ಶಾಲಾಕಾಲೇಜು ಮಕ್ಕಳು ಪ್ರವಾಸ ಕೈಗೊಂಡು ಇಲ್ಲಿಗೆ ಬರುವುದು ಸಾಮಾನ್ಯವಾಗಿದೆ. ಭಾನುವಾರವೂ ಪ್ರವಾಸಿಗರ ದಂಡು ಎಂದಿಗಿಂತ ಹೆಚ್ಚಾಗಿಯೇ ಇತ್ತು.

ಡಿಸೆಂಬರ್‌ ತಿಂಗಳಲ್ಲಿ ಸಾಲು ಸಾಲು ರಜೆಗಳು ಇರುವುದರಿಂದ ಹಾಗೂ ವರ್ಷದ ಕೊನೆ ಆಗಿರುವುದರಿಂದ ಈಗಲೇ ಪಟ್ಟಣದಲ್ಲಿ ವಾಹನಗಳ ಸಂಖ್ಯೆ,ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ. ವಸತಿಗೃಹಗಳಿಗೂ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.

ಎಳ್ಳ ಅಮಾವ್ಯಾಸೆ ನಿಮಿತ್ತ ಭಕ್ತರು ಹಂಪಿಗೆ

 ಇನ್ನೂ ಪ್ರವಾಸೋದ್ಯಮದ ಸೀಜನ್‌ ಆರಂಭಗೊಂಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರ ದಂಡು ಹಂಪಿಗೆ ಹರಿದು ಬಂದಿದೆ.

click me!