ಮಂಗಳೂರಿನ MRPL ಸ್ಫೋಟಕ್ಕೆ ಸಾವಿನ ಜೊತೆ 54 ಮನೆ, 8 ಪ್ರಾರ್ಥನಾ ಮಂದಿರಗಳಿಗೆ ಹಾನಿ

Published : Sep 30, 2026, 10:30 PM IST
MRPL

ಸಾರಾಂಶ

ಮಂಗಳೂರಿನ ಎಂಆರ್‌ಪಿಎಲ್ ಘಟಕದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಒಂದು ಸಾವಿನ ಜೊತೆ 54 ಮನೆಗಳಿಗೆ ಹಾನಿಯಾಗಿದೆ. 8 ಪ್ರಾರ್ಥನಾ ಮಂದಿರಗಳು ಹಾನಿಯಾಗಿದೆ. ಮಂಗಳೂರು MRPL ಸ್ಪೋಟ ಪ್ರಕರಣದ ಡಿಟೇಲ್ಸ್ ಇಲ್ಲಿದೆ.

ಮಂಗಳೂರು (ಸೆ.30) ಮಂಗಳೂರಿನ ಎಂಆರ್‌ಪಿಎಲ್ ಘಟಕದಲ್ಲಿ ಸಂಭವಿಸಿದ ಭಾರಿ ಸ್ಫೋಟ ಪ್ರಕರಣದಲ್ಲಿ ಉದ್ಯೋಗಿ ಮನೀಶ್ ಕರ್ಕರೆ (30 ವರ್ಷ) ಮೃತಪಟ್ಟರೆ, 9 ಮಂದಿಗೆ ಗಾಯವಾಗಿದೆ. ಹೆಚ್ಚಿನ ಉದ್ಯೋಗಿಗಳು ಘಟಕದಲ್ಲಿ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ. ಆದರೆ ಸ್ಫೋಟದ ತೀವ್ರತೆಗೆ ಸುತ್ತ ಮುತ್ತಲಿನ ಮನೆ, ಪ್ರಾರ್ಥನಾ ಮಂದಿರ, ಕಟ್ಟಡಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಒಟ್ಟು 54 ಮನೆಗಳಿಗೆ ಹಾನಿಯಾಗಿದೆ. ಸುತ್ತ ಮುತ್ತಲಿನ 8 ಪ್ರಾರ್ಥನಾ ಮಂದಿರಗಳಿಗೆ ಹಾನಿಯಾಗಿದೆ.

ಜೋಕಟ್ಟೆಯ 25, ಕಳವಾರು ಗ್ರಾಮದ 19, ಬಾಳ ಗ್ರಾಮದ 10 ಮನೆಗಳು ಎಂಆರ್‌ಪಿಎಲ್ ಸ್ಫೋಟದಿಂದ ಹಾನಿಯಾಗಿದೆ. ಇನ್ನು ಜೋಕಟ್ಟೆಯ 5 , ಕಳವಾರಿನ 3 ಪ್ರಾರ್ಥನಾ ಮಂದಿರಗಳು ಹಾನಿಯಗೊಳಗಾಗಿದೆ. ಸ್ಫೋಟದ ತೀವ್ರತೆಗೆ ಹಲವರು ಅಸ್ವಸ್ಥಗೊಂಡ ಘಟನೆಯೂ ನಡೆದಿದೆ.

ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮನೀಶ್ ಮೃತದೇಹ ಪತ್ತೆ

ಎಂಆರ್‌ಪಿಎಲ್ ಸ್ಫೋಟ ಪ್ರಕರಣದಲ್ಲಿ 30ರ ಹರೆಯದ ಮನೀಶ್ ಕರ್ಕರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಫೋಟ ಸಂಭವಿಸುವಾಗ ಘಟಕದ ಒಳಗಿದ್ದ ಮನೀಶ್ ನಾಪತ್ತೆಯಾಗಿದ್ದ. ತೀವ್ರ ಕಾರ್ಯಚರಣೆ ವೇಳೆ ಮನೀಶ್ ಮೃತದೇಹ ಪತ್ತೆಯಾಗಿತ್ತು. ಈ ಸ್ಫೋಟದಲ್ಲಿ 9 ಮಂದಿ ಗಾಯಗೊಂಡಿದ್ದಾರೆ.

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟ ಪ್ರಕರಣ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಆರ್‌ಪಿಎಲ್ ಮುಖ್ಯಸ್ಥರು, ಕೋಕರ್ ಹೈಡ್ರೋ ಯುನಿಟ್ ಮುಖ್ಯಸ್ಥರ ವಿರುದ್ಧ ದೂರು ದಾಖಲಾಗಿದೆ. ಉದ್ಯೋಗಿಗಳಿಗೆ ಊಟ ಪೂರೈಸುವ ಕ್ಯಾಟರಿಂಗ್ ಸಿಬ್ಬಂದಿ ರವಿ ಪೂಜಾರಿ ದೂರು ನೀಡಿದ್ದಾರೆ. BNS 287, 125(ಬಿ) ಹಾಗೂ 106ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಸ್ಫೋಟದ ತೀವ್ರತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೂ ಕಂಪನ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ. ಸ್ಫೋಟದ ಬೆನ್ನಲ್ಲೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಲರ್ಟ್ ನೀಡಲಾಗಿತ್ತು. ಸುರತ್ಕಲ್ ಪೊಲೀಸರು ಘಟನೆ ಸಂಬಂಧ ತನಿಖೆ ಕೈಗೊಂಡಿದ್ದಾರೆ.

PREV
Read more Articles on
click me!

Recommended Stories

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಯೋಜನೆ; ಕರ್ನಾಟಕ ಸರ್ಕಾರ ಘೋಷಣೆ
ಮಾಧ್ಯಮ ವೃತ್ತಿಪರತೆ ಕುಸಿತದ ನಡುವೆ ಜಿಎಂಸಿ ಉದಯ: ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?