ಮಣ್ಣು ಹಳಿಗೆ ಕುಸಿದು ರಾತ್ರಿ ರೈಲು ರದ್ದು

By Web DeskFirst Published Jul 10, 2019, 1:19 PM IST
Highlights

ಸುಬ್ರಹ್ಮಣ್ಯ ಮಾರ್ಗ ಮತ್ತು ಶಿರಿಬಾಗಿಲು ಘಾಟ್ ಪ್ರದೇಶದ ಕಿ.ಮೀ. 86/6-7 ರಲ್ಲಿ ಭಾರಿ ಮಳೆಗೆ ಸಡಿಲ ಮಣ್ಣು ಕುಸಿದು ರೈಲು ಹಳಿಗೆ ಬಿದ್ದಿದ್ದು, ಈ ಮಾರ್ಗದಲ್ಲಿ ಮಂಗಳವಾರ ಸಂಚರಿಸುವ ಮಂಗಳೂರು-ಬೆಂಗಳೂರು ರಾತ್ರಿ ರೈಲು ಸಂಚಾರವನ್ನು ವಯಾ ಕೇರಳ ಮೂಲಕ ವರ್ಗಾಯಿಸಿದೆ.

ಮಂಗಳೂರು: ಸುಬ್ರಹ್ಮಣ್ಯ ಮಾರ್ಗ ಮತ್ತು ಶಿರಿಬಾಗಿಲು ಘಾಟ್ ಪ್ರದೇಶದ ಕಿ.ಮೀ. 86/6-7 ರಲ್ಲಿ ಭಾರಿ ಮಳೆಗೆ ಸಡಿಲ ಮಣ್ಣು ಕುಸಿದು ರೈಲು ಹಳಿಗೆ ಬಿದ್ದಿದ್ದು, ಈ ಮಾರ್ಗದಲ್ಲಿ ಮಂಗಳವಾರ ಸಂಚರಿಸುವ ಮಂಗಳೂರು-ಬೆಂಗಳೂರು ರಾತ್ರಿ ರೈಲು ಸಂಚಾರವನ್ನು ವಯಾ ಕೇರಳ ಮೂಲಕ ವರ್ಗಾಯಿಸಿದೆ.

ರೈಲು ನಂ. 16523/ 16514 ಕೆಎಸ್‌ಆರ್ ಬೆಂಗಳೂರಿನಿಂದ ಕಾರವಾರ/ ಕಣ್ಣೂರು ಕಡೆಗೆ ಸಂಚರಿಸುವ ರೈಲು ಸಂಚಾರವನ್ನು ವಯಾ ಸೇಲಂ, ಈರೋಡು, ಫಾಲ್ಘಾಟ್, ಶೂರ್ನೂರು ಮಾರ್ಗವಾಗಿ ಸಂಚರಿಸಿದೆ. ಇದೇ ರೀತಿ ರೈಲು ನಂ. 16512/ 16514 ಕಾರವಾರ/ಕಣ್ಣೂರು ಮೂಲಕ ಕೆಎಸ್ ಆರ್ ಬೆಂಗಳೂರು ರೈಲನ್ನು ಕೂಡ ಇದೇ ಮಾರ್ಗದಲ್ಲಿ ಸಂಚರಿಸುವಂತೆ ಮಾರ್ಗ ಬದಲಾಯಿಸಲಾಗಿದೆ. ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು(ನಂ. 16516)ಸುಬ್ರಹ್ಮಣ್ಯ ಮಾರ್ಗದಿಂದ ಯಶವಂತಪುರವರೆಗಿನ ಸಂಚಾರ ರದ್ದುಪಡಿಸಲಾಗಿದೆ.

ಯಶವಂತಪುರದಿಂದ ಮಂಗಳೂರು ಸೆಂಟ್ರಲ್‌ಗೆ(ರೈಲು ನಂ.16575)ಸಂಚರಿಸುವ ರೈಲು ಸಕಲೇಶಪುರದಿಂದ ಮಂಗಳೂರು ಸೆಂಟ್ರಲ್‌ಗೆ ಪ್ರಯಾಣ ರದ್ದುಪಡಿಸಲಾಗಿದೆ. ರೈಲು ನಂ. 16585 ಯಶವಂತಪುರದಿಂದ ಮಂಗಳೂರು ಸೆಂಟ್ರಲ್ ನಡುವಿನ ರೈಲು ವಯಾ ಸೇಲಂ, ಈರೋಡು, ಫಾಲ್ಘಾಟ್, ಶೋರ್ನೂರ್ ಮಾರ್ಗವಾಗಿ ಸಂಚರಿಸಲಿದೆ ಎಂದು ಪಾಲ್ಘಾಟ್ ರೈಲ್ವೆ ವಿಭಾಗದ ಪ್ರಕಟಣೆ ತಿಳಿಸಿದೆ.

click me!